ಮೊಬೈಲ್ ಗೀಳಿನಿಂದ ಓದು, ಬರಹಗಾರ ಸಂಖ್ಯೆ ಕಡಿಮೆ

KannadaprabhaNewsNetwork |  
Published : Jun 25, 2025, 12:34 AM IST
ಮುಂಡಗೋಡ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡ ವತಿಯಿಂದ ಸರ್ಕಾರಿ ನಿವೃತ್ತ ನೌಕರ ಭವನದಲ್ಲಿ ಮುಂಗಾರು ಕವಿಗೋಷ್ಠಿ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಬೆಳೆಸುವ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗುತ್ತದೆ.ಅಲ್ಲದೇ ಸುಮಾರು ೧೦ ಜನ ಕವಿಗಳು ಇಂದು ಮುಂಗಾರು ಋತುವಿನ ಕುರಿತು ತಮ್ಮ ಕವಿತೆ ವಾಚಿಸುತ್ತಿರುವುದು ಹೆಮ್ಮೆಯ ವಿಷಯ

ಮುಂಡಗೋಡ: ಇಂದಿನ ಮಕ್ಕಳು ಮೊಬೈಲ್ ದಾಸರಾಗಿರುವುದರಿಂದ ಓದುಗರ ಹಾಗೂ ಬರಹಗಾರರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿದೆ ಎಂದು ಸಾಹಿತಿ ಜ್ಯೋತಿ ಆಚಾರಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡದಿಂದ ಸರ್ಕಾರಿ ನಿವೃತ್ತ ನೌಕರ ಭವನದಲ್ಲಿ ಮುಂಗಾರು ಕವಿಗೋಷ್ಠಿ ಎಂಬ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಬೆಳೆಸುವ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗುತ್ತದೆ.ಅಲ್ಲದೇ ಸುಮಾರು ೧೦ ಜನ ಕವಿಗಳು ಇಂದು ಮುಂಗಾರು ಋತುವಿನ ಕುರಿತು ತಮ್ಮ ಕವಿತೆ ವಾಚಿಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಪ್ರತಿಯೊಬ್ಬರ ಮನದಾಳದ ತುಡಿತ ವ್ಯಕ್ತಪಡಿಸುವ ಒಂದು ಭಾಷೆಯಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆ ಎಂದೆಂದಿಗೂ ಅಚ್ಚಳಿಯದಂತೆ ವಿಜೃಂಭಣೆಯಿಂದ ಇರಬೇಕು. ಕನ್ನಡ ಪ್ರತಿಯೊಬ್ಬರ ಮನಸ್ಸಿನ ಉಸಿರಾಗಿರಲಿ ಎಂದು ಕರೆ ನೀಡಿದರು.

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ನಾಗರಾಜ್ ಹರಿಜನ ಮುಂಗಾರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನದ ಸಮಸ್ಯೆ ಮತ್ತು ಸ್ಥಿತಿಗತಿಗಳ ಕುರಿತು ಬೇರೆ ಬೇರೆ ವಿಷಯ ಕುರಿತು ಕವನ ಮೂಡಿ ಬಂದರೆ ಸಹಾಯವಾಗುತ್ತದೆ. ಕರ್ನಾಟಕದ ಸಾರ್ವಭೌಮ ಭಾಷೆಯಾಗಿರುವ ಕನ್ನಡ ನಮ್ಮ ನಿಮ್ಮೆಲ್ಲರ ತಾಯಿ ಮಗುವಿನ ಸಂಬಂಧದ ಕೊಂಡಿ ಇದ್ದಂತೆ ಇಂತಹ ಭಾಷೆ ಮಾತನಾಡುವ ನಾವೆಲ್ಲರೂ ಪುಣ್ಯವಂತರು ಹಾಗಾಗಿ ಎಲ್ಲರೂ ಕನ್ನಡ ಭಾಷೆ ಬಳಸಿ ಕನ್ನಡ ಉಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಮುಂಗಾರು ಕವಿಗೋಷ್ಠಿಯಲ್ಲಿ ಭಾಗವಹಿಸಿದ ಡಾ. ಅನುಪಮಾ ಅದಾಪುರ, ಬಾಲಚಂದ್ರ ಹೆಗಡೆ, ಶ್ರೀಕಾಂತ್ ಹೊಂಡದಕಟ್ಟಿ, ಸಂತೋಷ ಕುಸನೂರ್, ಚಿದಾನಂದ ಪಾಟೀಲ್, ಸುವರ್ಣ ನಿಂಗೂಜಿಯವರ, ನಾಗರಾಜ್ ಬಡಿಗೇರ್, ಅರುಣ್ ಮಾತಿಬೆಟ್ಕರ್, ಎಂ.ವಿ.ಅರಳಿಕಟ್ಟಿ ಸಿಎನ್ ಸುರಕೋಡ್,ತಮ್ಮ ಕವನಗಳನ್ನು ವಾಚನ ಮಾಡಿದರು.

ಡಾ. ಪಿ.ಪಿ.ಛಬ್ಬಿ, ಎಸ್.ಕೆ.ಬೋರ್ಕರ್, ಸಂಗಪ್ಪ ಕೋಳೂರು, ಎಸ್.ಬಿ.ಹೂಗಾರ್, ಗೌರಮ್ಮ ಕೊಳ್ಳನವರ, ಪಾಂಡುರಂಗ, ಶಿವಾನಂದ್ ವಾಲಿಶೆಟ್ಟರ್ ನಾಗರಾಜ ಅರ್ಕಸಾಲಿ, ಆನಂದ್ ಹೊಸೂರ, ಎಚ್.ಎನ್. ತಪೇಲಿಮುಂತಾದವರು ಉಪಸ್ಥಿತರಿದ್ದರು.

ತಾಲೂಕು ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ವಿ.ಅರಳಿಕಟ್ಟಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಸ್ವಾಗತಿಸಿದರು. ದಿನೇಶ ವೆರ್ಣೇಕರ ನಿರೂಪಿಸಿದರು. ವಿನಾಯಕ ಶೇಟ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ