ಮೊಬೈಲ್‌ ವ್ಯಾಮೋಹದಿಂದ ಓದುವ ಹವ್ಯಾಸ ಕಡಿಮೆಯಾಗಿದೆ

KannadaprabhaNewsNetwork | Published : Dec 2, 2024 1:17 AM

ಸಾರಾಂಶ

ಇಂಗ್ಲೀಷ್ ವ್ಯಾಮೋಹ ಬಿಟ್ಟು ಹಲವಾರು ಶತಮಾನಗಳಿಂದ ಬಳಕೆಯಲ್ಲಿರುವ ಜತೆಗೆ ಜೀವಂತ ಭಾಷೆಯಾಗಿರುವ, ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತೀಕವಾದ ಕನ್ನಡ ಭಾಷೆ ಬಳಕೆಯಿಂದ ಮುಂದಿನ ತಲೆಮಾರಿಗೆ ಕನ್ನಡದ ಹಿರಿಮೆಯನ್ನು ಪಸರಿಸಲು ಸಾಧ್ಯವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಅಭಿಪ್ರಾಯಪಟ್ಟರು. ಇಂದಿನ ಮೊಬೈಲ್ ವ್ಯಾಮೋಹದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶ್ರೇಷ್ಠ ಕೃತಿಗಳ ಬಗ್ಗೆ ಅಧ್ಯಯನ ಮತ್ತು ಚರ್ಚೆ ಪ್ರತಿ ಮನೆಯಲ್ಲೂ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಇಂಗ್ಲೀಷ್ ವ್ಯಾಮೋಹ ಬಿಟ್ಟು ಹಲವಾರು ಶತಮಾನಗಳಿಂದ ಬಳಕೆಯಲ್ಲಿರುವ ಜತೆಗೆ ಜೀವಂತ ಭಾಷೆಯಾಗಿರುವ, ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತೀಕವಾದ ಕನ್ನಡ ಭಾಷೆ ಬಳಕೆಯಿಂದ ಮುಂದಿನ ತಲೆಮಾರಿಗೆ ಕನ್ನಡದ ಹಿರಿಮೆಯನ್ನು ಪಸರಿಸಲು ಸಾಧ್ಯವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತ್ಯ ಲೋಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇಂದಿನ ಮೊಬೈಲ್ ವ್ಯಾಮೋಹದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶ್ರೇಷ್ಠ ಕೃತಿಗಳ ಬಗ್ಗೆ ಅಧ್ಯಯನ ಮತ್ತು ಚರ್ಚೆ ಪ್ರತಿ ಮನೆಯಲ್ಲೂ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಡಾ. ಶಾಂಭವಿ ಅವರಿಗೆ ಬಿ.ಸಿ.ರಾಯ್ ಪ್ರಶಸ್ತಿ, ವೈದ್ಯರು ನೀಡುವ ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆದು ಕೊಟ್ಟ ಡಾ. ದಿನೇಶ್ ಕುಮಾರ್ ಅವರಿಗೆ ಶ್ರೇಷ್ಠ ಕನ್ನಡಿಗ ಹಾಗೂ ಡಾ. ಪೂರ್ಣಿಮಾ ಅವರಿಗೆ ಕನ್ನಡತಿ ಪ್ರಶಸ್ತಿ, ಹಾಸನದ ಹಿಮ್ಸ್ ಆಸ್ಪತ್ರೆಯ ಖ್ಯಾತ ಸರ್ಜನ್ ಡಾ. ಮುರಳೀಧರ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಲೋಕೇಶ್ ಹಾಗೂ ಡಾ. ಕುಸುಮಾ, ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಸಂಬಂಧಿಸಿದಂತೆ ನಡೆದ ಹಲವಾರು ಸ್ಪರ್ಧೆಗಳ ವಿಜೇತರಿಗೆ, ನಿವೃತ್ತರಿಗೆ ಹಾಗೂ ವರ್ಗಾವಣೆಗೊಂಡವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಎರಡು ಸಾವಿರಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಿ, ನಿವೃತ್ತರಾದ ರಾಮಚಂದ್ರ ಅವರಿಗೆ ಮಾಡಿದ ಸನ್ಮಾನ ಅರ್ಥಪೂರ್ಣವಾಗಿತ್ತು.

ಡಾ. ಸತ್ಯಪ್ರಕಾಶ್, ಡಾ. ಸೆಲ್ವಕುಮಾರ್ ಹಾಗೂ ಡಾ. ಅಶ್ವತಿ ಕುಮಾರಿ ಅವರ ಉಡುಗೆ ತೊಡುಗೆ ಸಂಸ್ಕೃತಿಯ ಪ್ರತೀಕದಂತೆ ಅಕರ್ಷಕವಾಗಿತ್ತು.

ಹಾಸನದ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ನಾಗೇಂದ್ರ, ಪ್ರಸೂತಿ ತಜ್ಞ ಡಾ. ಲಕ್ಷ್ಮಿಕಾಂತ್, ಡಾ. ದಿನೇಶ್, ಡಾ. ವಿನಯ್ ಕುಮಾರ್‌, ಡಾ. ಅಜಯ್ ಕುಮಾರ್‌, ಡಾ. ಶ್ರೀನಿವಾಸ್, ಡಾ. ವಿಜಯಕುಮಾರ್, ಡಾ. ನಾಗೇಂದ್ರ ಪ್ರಸಾದ್, ಡಾ. ಸತೀಶ್, ಡಾ. ರಘು, ಡಾ. ಪ್ರತಿಭಾ, ಡಾ. ಅನಿತಾ, ಡಾ. ಭವ್ಯ, ಡಾ.ರೇಖಾ, ಡಾ. ವಿದ್ಯಾ, ಡಾ. ಭೂಮಿಕಾ, ಡಾ. ಬಾಲಕೃಷ್ಣ, ಡಾ. ಶ್ರೇಯಾ, ಡಾ. ಸಂದೀಪ್ ಗೌಡ, ಡಾ. ಸುಜನ್, ಶುಶ್ರೂಷಕ ಅಧೀಕ್ಷಕಿ ಗ್ರೇಡ್-೧ ಮೀನಾಕ್ಷಿ, ಗ್ರೇಡ್-೨ ರವೀಂದ್ರ ಕುಮಾರ್, ಇತರರು ಇದ್ದರು.

Share this article