ಕನ್ನಡ ಸಾಹಿತ್ಯವನ್ನು ಓದುವುದರಿಂದ ಬದುಕು ಬೆಳಗುತ್ತದೆ: ಕೆ.ಕೆ.ಕೃಷ್ಣಮೂರ್ತಿ

KannadaprabhaNewsNetwork |  
Published : Nov 06, 2025, 03:00 AM IST
ಕನ್ನಡ ಸಾಹಿತ್ಯವನ್ನು ಓದುವುದರಿಂದ ಬದುಕು ಬೆಳಗುತ್ತದೆ-ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ | Kannada Prabha

ಸಾರಾಂಶ

ಕನ್ನಡ ಸಾಹಿತ್ಯವನ್ನು ಓದುವುದರಿಂದ ಬದುಕು ಬೆಳಗುತ್ತದೆ ಎಂದು ತಹಸೀಲ್ದಾರ್‌ ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕನ್ನಡ ಸಾಹಿತ್ಯವನ್ನು ಓದುವುದರಿಂದ ಬದುಕು ಬೆಳಗುತ್ತದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅಭಿಪ್ರಾಯಿಸಿದರು.ತಾಳುಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಧ್ವಜರೋಹಣ ನೆರವೇರಿಸಿ ಸಂದೇಶ ನೀಡಿದರು.ಸಾಹಿತ್ಯವೂ ಕತ್ತಲೆಯ ಮನಸ್ಸಿಗೆ ದೀಪ ಹಚ್ಚುವ ಶಕ್ತಿ ಹೊಂದಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕ ಇವು ಎಲ್ಲವೂ ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ರಾಜ್ಯೋತ್ಸವ ಕೇವಲ ಆಚರಣೆಯ ದಿನವಲ್ಲ, ಅದು ಕನ್ನಡಿಗರ ಆತ್ಮಗೌರವದ ದಿನ ಎಂದು ಹೇಳಿದರು. ಬೇರೆ ಭಾಷೆಗಳನ್ನು ಕಲಿಯಬೇಕು ಆದರೆ ಮಾತೃಭಾಷೆಯನ್ನು ಸದಾ ಹೃದಯದಲ್ಲಿಟ್ಟಿಕೊಂಡು ಓಡಾಡಬೇಕು. ಕನ್ನಡವನ್ನು ಮಾತನಾಡಬೇಕು. ಕೆಲ ಸಂದರ್ಭಗಳಲ್ಲಿ ಕನ್ನಡವನ್ನು ಕಲಿಸುವ ಮೂಲಕ ಭಾಷ ಪ್ರೇಮವನ್ನು ಮೆರೆಯಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಶಿಕ್ಷಕರಾದ ಟಿ.ಎಚ್.ಸುಕುಮಾರ್ ಮಾತನಾಡಿ, ರಾಜ್ಯೋತ್ಸವವು ಕೇವಲ ಸಂಭ್ರಮದ ಹಬ್ಬವಾಗಿರದೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವವನ್ನು ಜನಮನದಲ್ಲಿ ಬಿತ್ತುವ ಪ್ರಯತ್ನವಾಗಿದೆ. ಕನ್ನಡ ಭಾಷಾ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿಯದಾಗಿದೆ ಎಂದು ಕಿವಿಮಾತು ಹೇಳಿದರು.ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿಗಳಾದ ಶರ್ಮಿಳಾ ರಮೇಶ್, ಹೇಮಂತ್ ಪಾರೇರ, ವಾಸಂತಿ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ನಿಡ್ತ ಸರ್ಕಾರಿ ಪ್ರೌಢಶಾಲೆಯ ಜೆ.ಎಸ್.ಪೂರ್ವಿಕ, ಸಂತ ಜೋಸೇಫರ ಶಾಲೆಯ ಲಿಷ್ಮ ಡಯಾಸ್, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಎಚ್.ಜೆ.ಸಹನಾ, ಓ.ಎಲ್.ವಿ ಶಾಲೆಯ ಯು.ಎಂ.ಯಶ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿ.ಸಿ.ದೀಕ್ಷಿತ, ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಕಾಲೇಜಿನ ಹಿಮಾನಿ ಅವರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಎಂ.ಕಾಂತರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಆದಂ, ಪಪಂ ಉಪಾಧ್ಯಕ್ಷೆ ಎಸ್.ಈ.ಮೋಹಿನಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರಾದ ಎಚ್.ಸಿ.ನಾಗೇಶ್, ಭುವನೇಶ್, ಕವನ್ ಕಾರ್ಯಪ್ಪ, ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.ಪಟ್ಟಣದ ಜೇಸಿ ವೇದಿಕೆ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಕಾಲೇಜಿನ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳ ಬ್ಯಾಂಡ್ ನೋಡುಗರನ್ನು ಆಕರ್ಷಿಸಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾಗು ನಾಡ ಧ್ವಜಾರೋಹಣ ನೆರವೇರಿತು. ಶಾಲಾ ಕಾಲೇಜು ಮಕ್ಕಳು ನೃತ್ಯ ಪ್ರದರ್ಶಿಸಿದರು. ಎಲ್ಲಾ ಸ್ಪರ್ಧಿಗಳು, ಸ್ತಬ್ಧಚಿತ್ರಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ