ಜಿಲ್ಲಾಡಳಿತ ಭೂಮಿ ನೀಡಿದರೆ ಜವಳಿ ಪಾರ್ಕ್ ತೆರೆಯಲು ಸಿದ್ಧ

KannadaprabhaNewsNetwork |  
Published : Mar 15, 2025, 01:02 AM IST
ಅಶೋಕ್  | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಲ್ಲಾಡಳಿತ ಜಿಲ್ಲೆಯ ಲಕ್ಯಾ ಹೋಬಳಿ ಹಿರೇಗೌಜ ಮತ್ತ ಕಡೂರು ತಾಲೂಕಿನ ಚಿಲನಹಳ್ಳಿ ಬಳಿ ಅಗತ್ಯ ಭೂಮಿ ನೀಡಿದರೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ತೆರೆಯಲು ತಾವು ಸಿದ್ಧ ಎಂದು ಹಾಸನ ಮೆಗಾ ಫುಡ್‌ಪಾರ್ಕ್ ಸಿಇಒ ಅಶೋಕ್ ಹೇಳಿದರು.

ಉದ್ಯೋಗ ಸೃಷ್ಟಿ ಜತೆಗೆ ಸಂಪತ್ತು ಸೃಷ್ಟಿ ಘಟಕವಾಗಿ ಪರಿವರ್ತನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾಡಳಿತ ಜಿಲ್ಲೆಯ ಲಕ್ಯಾ ಹೋಬಳಿ ಹಿರೇಗೌಜ ಮತ್ತ ಕಡೂರು ತಾಲೂಕಿನ ಚಿಲನಹಳ್ಳಿ ಬಳಿ ಅಗತ್ಯ ಭೂಮಿ ನೀಡಿದರೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ತೆರೆಯಲು ತಾವು ಸಿದ್ಧ ಎಂದು ಹಾಸನ ಮೆಗಾ ಫುಡ್‌ಪಾರ್ಕ್ ಸಿಇಒ ಅಶೋಕ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ನವೋದ್ಯಮದ ಮೂಲಕ ಸಿದ್ಧ ಉಡುಪುಗಳ ಕಾರ್ಖಾನೆ ತೆರೆಯಲು ಹಾಸನದ ಜವಳಿ ಪಾರ್ಕ್‌ನಲ್ಲಿ ಜಾಗ ಹುಡುಕುತ್ತಿದ್ದವು. ಈ ನಡುವೆ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ತೆರೆಯಲು ನಿರ್ಧರಿಸಿ ಸರಕಾರ ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆಯಿಂದ ಅನುಮೋದನೆ ಪಡೆದು ಕೊಂಡಿರುವ ವಿಷಯ ತಿಳಿಯಿತು ಎಂದರು.ಹೀಗಾಗಿ ಈ ಜಿಲ್ಲೆಯಲ್ಲೇ ಜವಳಿ ಪಾರ್ಕ್ ನಿರ್ಮಿಸಲು ತಮ್ಮ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಲ್ಲಿ ಉದ್ಯೋಗ ಸೃಷ್ಟಿ ಜತೆಗೆ ಸಂಪತ್ತು ಸೃಷ್ಟಿಸುವ ಘಟಕವನ್ನಾಗಿ ಪರಿವರ್ತಿಸಲಿದ್ದೇವೆ ಎಂದು ತಿಳಿಸಿದರು.ಜಿಲ್ಲಾಡಳಿತ ನಮ್ಮ ನವೋದ್ಯಮಕ್ಕೆ ಅವಕಾಶ ಮಾಡಿಕೊಟ್ಟರೆ ಮೊದಲ ವರ್ಷವೇ ೩೦೦ ಜನರಿಗೆ ಉದ್ಯೋಗ ಕೊಡಲು ಸಿದ್ಧರಿದ್ದು, ೨ನೇ ವರ್ಷದಲ್ಲಿ ೧೦೦ ಮತ್ತು 3ನೇ ವರ್ಷದಲ್ಲಿ ೧೦೦ ಒಟ್ಟು ೫೦೦ ಜನರಿಗೆ ಉದ್ಯೋಗಾವಕಾಶ ನೀಡಲಿದ್ದೇವೆ. ಎಲ್ಲರಿಗೂ ಕರ್ನಾಟಕ ಕನಿಷ್ಠಕಾಯಿದೆ ಅಡಿ ವೇತನ ನಿಗದಿಪಡಿಸಲಾಗುವುದು ಎಂಬ ಭರವಸೆ ನೀಡಿದರು.ಕಾಯರ್ ಬೋರ್ಡ್‌ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಅರುಣ್‌ಕುಮಾರ್ ಸಂಶೋಧನೆಯಲ್ಲಿ ತಮ್ಮ ತೆಂಗಿನ ನಾರು ಪ್ರಪಂಚ ದಲ್ಲಿಯೇ ಉತ್ಕೃಷ್ಟ ವೆಂದು ಖಚಿತಪಡಿಸಿದ್ದಾರೆ. ಕಳೆದ ೨ ವರ್ಷಗಳಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಈ ಉದ್ಯಮದ ಮಾರುಕಟ್ಟೆ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಮೊದಲ ವರ್ಷವೇ ನಾವು ₹೨೦ ಕೋಟಿ ಮೌಲ್ಯದ ಸಿದ್ಧ ಉಡುಪು ಗಳನ್ನು ರಫ್ತು ಗುರಿ ಹೊಂದಿದ್ದೇವೆ ಎಂದು ಹೇಳಿದರು.೨ನೇ ವರ್ಷದಲ್ಲಿ ₹೨೪ ಕೋಟಿ ಮೌಲ್ಯದ ಸಿದ್ಧ ಉಡುಪು,3ನೇ ವರ್ಷದಲ್ಲಿ ₹೨೮ ಕೋಟಿ ಮೌಲ್ಯದ ಉಡುಪುಗಳನ್ನು ರಫ್ತು ಮಾಡಲು ಯೋಜನೆ ರೂಪಿಸಿದ್ದೇವೆ. ಜಿಲ್ಲಾಡಳಿತ ತಮ್ಮ ಸಂಸ್ಥೆಗೆ ಅಗತ್ಯ ಭೂಮಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ ಅವರು, ಘಟಕ ತೆರೆಯಲು ನಾವು ₹೩ ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಪ್ರತಿ ₹೧ ಲಕ್ಷ ಹೂಡಿಕೆಗೆ ೧ ಉದ್ಯೋಗ ಸೃಷ್ಟಿಸಲಾಗುತ್ತಿದೆ ಇದು ನಮ್ಮ ನಾವಿನ್ಯತೆಗೆ ಹಿಡಿದ ಕನ್ನಡಿ ಎಂದು ತಿಳಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌