ಮನುಷ್ಯ ಜನ್ಮದ ಶ್ರೇಷ್ಠತೆ ಅರಿಯಿರಿ

KannadaprabhaNewsNetwork |  
Published : Mar 09, 2025, 01:50 AM IST
8ಕೆಪಿಎಲ್3:ಕೊಪ್ಪಳ ನಗರಕ್ಕೆ ಆಗಮಿಸಿದ  ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನ ಜೀವನ ಎಷ್ಟು ಶ್ರೇಷ್ಠ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಈ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದ್ದಾರೆ. ಇರುವುದರಲ್ಲಿಯೇ ಸುಖ ಬಯಸುವುದು ಉತ್ತಮ. ಸುಖವಾಗಿ ಇರಬೇಕು ಎನ್ನುವುದು ಎಲ್ಲರಿಗೂ ಆಸೆ. ದುಃಖ ಬರಲೇಬಾರದು ಎಂದು ಬಯಸುತ್ತಾರೆ.

ಕೊಪ್ಪಳ:

ಪ್ರತಿಯೊಬ್ಬರು ಮನುಷ್ಯ ಜನ್ಮದ ಶ್ರೇಷ್ಠತೆ ಅರಿಯಬೇಕು ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶಂಕರ ಮಠ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರ ಒಳಿತಿಗಾಗಿ ಶಂಕರ ಮಠ ನಿರ್ಮಾಣ ಅಗತ್ಯವಿದೆ. ಇಂಥ ಪುಣ್ಯದ ಕೆಲಸಕ್ಕೆ ಈಗ ಮುಹೂರ್ತ ಕೂಡಿ ಬಂದಿದೆ ಎಂದರು.

ಮನುಷ್ಯನ ಜೀವನ ಎಷ್ಟು ಶ್ರೇಷ್ಠ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಈ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದ್ದಾರೆ. ಇರುವುದರಲ್ಲಿಯೇ ಸುಖ ಬಯಸುವುದು ಉತ್ತಮ. ಸುಖವಾಗಿ ಇರಬೇಕು ಎನ್ನುವುದು ಎಲ್ಲರಿಗೂ ಆಸೆ. ದುಃಖ ಬರಲೇಬಾರದು ಎಂದು ಬಯಸುತ್ತಾರೆ. ಎಲ್ಲರ ಬಯಕೆ ಸುಖ, ಸಾಧ್ಯವೇ? ಎಂದ ಶ್ರೀಗಳು, ಸುಖವನ್ನು ಶಾಸ್ತ್ರದಲ್ಲಿ ಮೋಕ್ಷ ಎಂದು ಕರೆಯಲಾಗುತ್ತದೆ. ಅದು‌ ಮೋಕ್ಷದ ಸುಖ ಎಂದು ಹೆಸರಿದೆ. ಮನುಷ್ಯ ಅಂತಿಮವಾಗಿ ಬಯಸುವುದು ಮೋಕ್ಷ. ಅದಕ್ಕೆ ಅನುಗ್ರಹ ಮಾಡಿದ್ದು ಶಂಕರಾಚಾರ್ಯರು ಎಂದರು.ಶಂಕರ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಪದಕಿ ಮಾತನಾಡಿದರು. ಭಕ್ತರು ಹಾಗೂ ಸಮುದಾಯದ ವಿವಿಧ ಸಂಘಟನೆಗಳಿಂದ ಶ್ರೀಗಳಿಗೆ ಫಲ ಸಮರ್ಪಣೆ, ಬಿನ್ನವತ್ತಳೆ ಸಮರ್ಪಣೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.

ಅದ್ಧೂರಿ ಮೆರವಣಿಗೆ:

ನಗರದ ಈಶ್ವರ ಪಾರ್ಕಿನಿಂದ ಸ್ವಾಮೀಜಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಮಹಿಳೆಯರು ಕೋಲಾಟ ಹಾಕಿದರು. ಜಯಘೋಷ ಹಾಗೂ ಸ್ವಾಮೀಜಿಗಳ ವೇಷಧಾರಿಗಳಾಗಿ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''