ಹೊಸಕೋಟೆ: ಪ್ರಸ್ತುತ ಕಾಲಘಟ್ಟದಲ್ಲಿ ಅಹಂಕಾರದ ಮಿತಿ ಕಳೆದುಕೊಳ್ಳುತ್ತಿರುವ ಚಾಲಕ ತನ್ನ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸಿ ಸಮಾಜಕ್ಕೆ ಮಾರಕವಾಗುತ್ತಿದ್ದಾನೆ ಎಂದು ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸತೀಶ್ ಕುಮಾರ್ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಉಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಲಕ್ಷ ಲಕ್ಷ ಸುರಿದು ವಾಹನ ಖರೀದಿಸುತ್ತಾರೆ. ಆದರೆ ರಸ್ತೆ ಸುರಕ್ಷತೆ ಪಾಲಿಸುವುದಿರಲಿ ಚಾಲಕರು ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಿಕೊಳ್ಳದೆ ನಿರ್ಲಕ್ಷ್ಯ ತೋರಿಸಿ ಎಷ್ಟೋ ಅಮಾಯಕ ಜೀವಗಳ ಬಲಿಗೆ ದಾರಿ ಮಾಡಿಕೊಡುತ್ತದೆ ಎಂಬ ಕನಿಷ್ಠ ಅರಿವು ಇಲ್ಲದಿರುವುದು ದುರಂತವೇ ಸರಿ. ಮಕ್ಕಳಿಗೆ ವಾಹನ ನೀಡುವ ಮುನ್ನ ಪೋಷಕರು ರಸ್ತೆ ಸುರಕ್ಷತೆ, ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತಿತರ ಸುರಕ್ಷತಾ ಕುರಿತು ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಕೆ ಆರ್ ಪುರಂ ಪ್ರಾದೇಶಿಕ ಸಾರಿಗೆ ನಿರೀಕ್ಷಕ ಕಮಲ್ ಬಾಬು ಮಾತನಾಡಿ, ರಸ್ತೆ ಸುರಕ್ಷತೆ ಒಂದು ಧ್ಯೇಯ ವಾಕ್ಯ ಅಲ್ಲ, ಅದೊಂದು ಜೀವನದ ಸುಗಮದ ಹಾದಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾವು ಹೇಗೆ ಒಳ್ಳೆ ಬಟ್ಟೆ, ಕಾರು, ಮನೆ ಬೇಕು ಅಂತಾ ಬಯಸುತ್ತೇವೆಯೋ ಅದೇ ರೀತಿ ನಾವು ಸುತ್ತಮುತ್ತ ಸಂಚರಿಸುವ ರಸ್ತೆಗಳಲ್ಲಿ ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎಲ್ಲರ ಸುರಕ್ಷತೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಪಾಲಿಸಿದ್ದೇ ಆದಲ್ಲಿ ಎಲ್ಲಿಯೂ ಅಪಘಾತಗಳು ಸಂಭವಿಸುವುದಿಲ್ಲ ಎಂದರು.ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ್ ಕುಮಾರ್, ವಾಹನ ಚಾಲನಾ ತರಬೇತಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಮುರುಗನ್, ಉಪಾಧ್ಯಕ್ಷ ನಾಗರಾಜ್, ಗೌರವಾಧ್ಯಕ್ಷ ಮುನಿರಾಜು, ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ಮಧುಕುಮಾರ್, ಜಂಟಿ ಖಜಾಂಚಿ ಅಮರ್‌ನಾಥ್, ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ, ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಪ್ರಕಾಶ್, ಕೀರ್ತನ ಡ್ರೈವಿಂಗ್ ಸ್ಕೂಲ್ ಮಾಲೀಕ ಸೊಣ್ಣೇಗೌಡ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಫೋಟೋ: 24 ಹೆಚ್‌ಎಸ್‌ಕೆ 5ಹೊಸಕೋಟೆ ತಾಲೂಕಿನ ಅತ್ತಿವಟ್ಟ ಗೇಟ್ ಬಳಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮಕ್ಕೆ ಹೊಸಕೋಟೆ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸತೀಶ್ ಕುಮಾರ್ ಚಾಲನೆ ನೀಡಿದರು.