ಸಾಧಕರ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಲಿ: ರುದ್ರಪ್ಪ ಬಾಳಿಕಾಯಿ

KannadaprabhaNewsNetwork | Published : Feb 24, 2025 12:37 AM

ಸಾರಾಂಶ

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ತಂದೆ- ತಾಯಿ ಸಂಬಂಧ, ಗುರು ಶಿಷ್ಯರ ಸಂಬಂಧಗಳು ದೂರವಾಗುತ್ತಿವೆ. ಇಂಥ ಪರಿಸ್ಥಿಯಲ್ಲಿ ಜನಸಿರಿ ಫೌಂಡೇಶನ್ ರಾಜ್ಯಾದ್ಯಂತ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದೆ.

ಶಿಗ್ಗಾಂವಿ: ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವವರ ಗುರುತಿಸುವ ಕಾರ್ಯವಾಗಬೇಕು. ಸಮಾಜಸೇವೆಯ ಸದುದ್ದೇಶದಿಂದ ಜನಸಿರಿ ಫೌಂಡೇಶನ್ ಉದಯಿಸಿದೆ ಎಂದು ಜನಸಿರಿ ಫೌಂಡೇಶನ್ ಜಿಲ್ಲಾಧ್ಯಕ್ಷ ರುದ್ರಪ್ಪ ಬಾಳಿಕಾಯಿ ತಿಳಿಸಿದರು.ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜು ಸಭಾಭವನದಲ್ಲಿ, ಜನಸಿರಿ ಫೌಂಡೇಶನ್ ಆಶ್ರಯದಲ್ಲಿ ತಾಲೂಕಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪರೀಕ್ಷೆ, ಜನಸಿರಿ ಫೌಂಡೇಶನ್‌ ತಾಲೂಕು ಘಟಕದ ಉದ್ಘಾಟನಾ ಸಭೆಯಲ್ಲಿ ಮಾತನಾಡಿದರು.ಜಿಲ್ಲಾ ಉಪಾಧ್ಯಕ್ಷ ಗದಿಗಯ್ಯ ಹಿರೇಮಠ ಮಾತನಾಡಿ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ತಂದೆ- ತಾಯಿ ಸಂಬಂಧ, ಗುರು ಶಿಷ್ಯರ ಸಂಬಂಧಗಳು ದೂರವಾಗುತ್ತಿವೆ. ಇಂಥ ಪರಿಸ್ಥಿಯಲ್ಲಿ ಜನಸಿರಿ ಫೌಂಡೇಶನ್ ರಾಜ್ಯಾದ್ಯಂತ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದೆ ಎಂದರು.ಕುನ್ನೂರ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ವೈದ್ಯರಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಡಾ. ಅರಳೆಲೆಮಠ ಅವರನ್ನು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಜನಸಿರಿ ಫೌಂಡೇಶನ್‌ಗೆ ಮತ್ತೊಂದು ಗರಿ ಮೂಡಿದಂತಾಗಿದೆ ಎಂದರು.ತಾಲೂಕು ಘಟಕದ ನೂತನ ಅಧ್ಯಕ್ಷ ಡಾ. ಆರ್.ಎಸ್. ಅರಳೆಲೆಮಠ, ನಿವೃತ್ತ ಶಿಕ್ಷಕ ಎನ್.ಆರ್. ಸೋಮನಕಟ್ಟಿ ಮಾತನಾಡಿದರು. ತಾಲೂಕಿನ ೧೨೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಚೇತನಾ ಹೊಟ್ಟೂರ ಪ್ರಥಮ, ಗಿರೀಶ್ ಬಡ್ಡಿ, ದ್ವಿತೀಯ, ಅಕ್ಕಮ್ಮ ತಳವಾರ ತೃತೀಯ ಸ್ಥಾನ ಪಡೆದು ನಗದು ಬಹುಮಾನಕ್ಕೆ ಆಯ್ಕೆಯಾದರು. ಅನ್ನಪೂರ್ಣ ಬೂತೆ, ಮಹಮ್ಮದ ಆಸಿಫ್ ದಖನಿ, ಸಿಂಧೂ ಮಹರಾಜಪೇಟೆ, ಸಹನಾ ಬಂಕಾಪುರ, ಪ್ರಿಯಾ ಸವಣೂರ, ಪ್ರೀತಿ ಕುರಬಗೊಂಡ, ಹೇಮಾ ಓಲೆಕಾರ, ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದರು.

ತಾಲೂಕು ಘಟಕದ ಪದಾಧಿಕಾರಿಗಳಾದ ಎಂ.ವಿ. ಗಾಡದ, ಸದಾಶಿವ ಹಿರೇಮಠ, ಭರಮಜ್ಜ ನವಲಗುಂದ, ವಿನಯ್ ಹಿರೇಮಠ, ಪ್ರಕಾಶ ಹಿರೇಮಠ, ಎಂ.ಬಿ. ಉಂಕಿ, ರವಿ ಕುರಗೋಡಿ, ಎಸ್.ಬಿ. ಆದವಾನಿಮಠ, ರಾಜಶೇಖರ ಕೊಲ್ಲಾವರ, ಸತೀಶ ವಳಗೇರಿ, ಕಿಟ್ಟಣ್ಣ ರಾಯ್ಕರ, ಸುರೇಶ, ಶಿವಯೋಗಿಸ್ವಾಮಿ ಬೂದಿಹಾಳಮಠ ಸೇರಿದಂತೆ ಇತರರು ಇದ್ದರು. ಸೋಮಶೇಖರ ಗೌರಿಮಠ ನಿರೂಪಿಸಿದರು.ಅಕ್ಕೂರು ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ

ಹಾವೇರಿ: ತಾಲೂಕಿನ ಅಕ್ಕೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಅವರನ್ನು ಅಕ್ಕೂರ ಗ್ರಾಮಸ್ಥರು, ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳಿ ಹಾಗೂ ಮರಾಠ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೃದೂರ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಎಂ.ಎನ್. ವೆಂಕೋಜಿ, ಊರಿನ ಹಿರಿಯ ಪರಮೇಶಪ್ಪ ಸಾಲಿಮಠ, ಅರ್ಜುನಪ್ಪ ಪವಾರ, ಚನ್ನವೀರಗೌಡ್ರ ರಾಮನಗೌಡ್ರ, ಹೊಸರಿತ್ತಿ ಗ್ರಾಪಂ ಅಧ್ಯಕ್ಷರಾದ ಸತೀಶ ಜಂಗಳಿ, ಸದಸ್ಯರಾದ ಹರೀಶ ಮಾಗಡಿಮಠ, ಷರಿಪ್ ಹೊಸಮನಿ, ಹೊನ್ನವ್ವ ಲೆಂಕೆಮ್ಮನವರ, ನೇತ್ರಾ ಮರಿಗೌಡ್ರ, ವಿನೋದ ತುಕ್ಕಮ್ಮನವರ, ಮುಖಂಡರಾದ ವಿಶ್ವನಾಥ ಮಾಗಡಿಮಠ, ಚಂದ್ರಶೇಖರ ಮನೋಜಿ, ರಘುವೀರ ಚವ್ಹಾಣ, ನಿಂಗಪ್ಪ ಆರೇರ, ಯುವಕ ಮಂಡಳಿ ಅಧ್ಯಕ್ಷ ಮಾರುತಿ ಜಾಧವ, ಚಂದ್ರಶೇಖರ ಶಿಂಧೆ, ನಾರಾಯಣ ಶಿಂಧೆ, ಸುನೀಲ ಪವಾರ, ರಾಮಚಂದ್ರ ಪವಾರ, ಸಂತೋಷ ಜಾಧವ, ಸಚಿನ ಪವಾರ, ರಾಘವೇಂದ್ರ ಪವಾರ, ಸುಮಂತ ಪವಾರ, ರೋಹಿತ ಪವಾರ, ಗೋಪಾಲರಾವ ಶಿಂಧೆ, ಮಂಜು ಪವಾರ, ತಾನಜಿ ಪವಾರ, ಹ್ಯಾಮಣ್ಣ ಶಿಂಧೆ, ದೇವೆಂದ್ರ ಶಿಂಧೆ ಇತರರು ಪಾಲ್ಗೊಂಡಿದ್ದರು.

Share this article