ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

KannadaprabhaNewsNetwork |  
Published : Aug 30, 2026, 02:30 AM IST
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ನವೋದ್ಯಮ ಸಂಸ್ಥೆಗಳನ್ನು ಅಭಿನಂದಿಸಿದರು. | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯು 4ನೇ ಯುಕೆ-ಭಾರತ ಹೆಲ್ತ್‌ ಟೆಕ್ ಅಕ್ಸೆಲರೇಟರ್-2026 ಕಾರ್ಯಕ್ರಮದಲ್ಲಿ ದೇಶದ 6 ನವೋದ್ಯಮಗಳಿಗೆ ಮನ್ನಣೆ ದೊರಕಿದೆ.

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯು 4ನೇ ಯುಕೆ-ಭಾರತ ಹೆಲ್ತ್‌ ಟೆಕ್ ಅಕ್ಸೆಲರೇಟರ್-2026 ಕಾರ್ಯಕ್ರಮದಲ್ಲಿ ದೇಶದ 6 ನವೋದ್ಯಮಗಳಿಗೆ ಮನ್ನಣೆ ದೊರಕಿದೆ. ಕಳೆದ ತಿಂಗಳು ಮಾಹೆ ತನ್ನ ಮಣಿಪಾಲ ಕ್ಯಾಂಪಸ್‌ನಲ್ಲಿ ಬ್ರಿಟಿಷ್ ಹೈ ಕಮಿಷನ್, ಹೆಲ್ತ್‌ಕೇರ್ ಯುಕೆ, ಯುನೈಟೆಡ್ ಕಿಂಗ್ಡಮ್ ವ್ಯವಹಾರ ಹಾಗೂ ವಾಣಿಜ್ಯ ಇಲಾಖೆ, ಯುಕೆ ಡಿಪಾರ್ಟ್‌ಮೆಂಟ್ ಫಾರ್ ಬಿಸಿನೆಸ್ ಆ್ಯಂಡ್ ಟ್ರೇಡ್ ಹಾಗೂ ಭುವನೇಶ್ವರ ಸಿಟಿ ನಾಲೆಡ್ಜ್ ಇನೋವೇಶನ್ ಕ್ಲಸ್ಟರ್ (ಬಿಸಿಕೆಐಸಿ)ಗಳ ಸಹಯೋಗದಲ್ಲಿ ಈ ಅಕ್ಸಿಲರೇಟರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಮಾನ್ಯತೆ ಪಡೆದ ಸಂಸ್ಥೆಗಳನ್ನು ಗುರುವಾರ ಬೆಂಗಳೂರಿನಲ್ಲಿ ನಡೆದ ಯುಕೆ-ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅಭಿನಂದಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಇಂದಿನ ಸಂಕೀರ್ಣ ಆರೋಗ್ಯ ಸವಾಲುಗಳನ್ನು ಎದುರಿಸಲು ನವೋದ್ಯಮಿಗಳು, ಆರೋಗ್ಯ ಕ್ಷೇತ್ರದ ತಜ್ಞರು, ಉದ್ಯಮ ಮತ್ತು ಸರ್ಕಾರ ಒಂದೆಡೆ ಸೇರುವ ಅಗತ್ಯವಿದೆ. ಯುಕೆ-ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮವು ಈ ಆಶಯವನ್ನು ಎತ್ತಿ ಹಿಡಿದಿದೆ ಎಂದರರು.

ಯುಕೆ ಸರ್ಕಾರ ಮತ್ತು ಬ್ರಿಟಿಷ್ ರಾಜತಾಂತ್ರಿಕ ನಿಯೋಗಗಳ ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಣಿಪಾಲ ಕ್ಯಾಂಪಸ್‌ನಲ್ಲಿ ನಡೆದ ‘4ನೇ ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026’ ಕಾರ್ಯಕ್ರಮವು, ಭಾರತೀಯ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಿಗಳು ಮತ್ತು ಯುಕೆಯ ತಜ್ಞರು ಒಂದೆಡೆ ಸೇರಲು ವೇದಿಕೆಯನ್ನೊದಗಿಸಿದ್ದು, ಔದ್ಯಮಿಕ ಸಹಭಾಗಿತ್ವವನ್ನು ಉತ್ತೇಜಿಸುವುದು, ಮಾರುಕಟ್ಟೆಯ ಲಭ್ಯತೆಯನ್ನು ಬಲಪಡಿಸುವುದು ಹಾಗೂ ನವೀನ ಆರೋಗ್ಯ ಸೇವಾ ಪರಿಹಾರಗಳ ಅಳವಡಿಕೆ ತ್ವರಿತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು.

ಮಾನ್ಯತೆ ಪಡೆದ 6 ಸಂಸ್ಥೆಗಳು: ಬೆಂಗಳೂರಿನ ಅಝೋಕಾ ಲ್ಯಾಬ್ಸ್ ಮತ್ತು ಟರ್ಟೈಲ್ ಶೆಲ್ ಟೆಕ್ನಾಲಜಿ, ಅಹಮದಾಬಾದ್‌ನ ಬಯೋಸ್ಕ್ಯಾನ್ ರಿಸರ್ಚ್ ಮತ್ತು ತತ್ವಾ ಕೇರ್, ಭುವನೇಶ್ವರದ ಇಝಡ್‌ಇಆರ್‌ಎಕ್ಸ ಹೆಲ್ತ್ ಟೆಕ್‌, ವಡೋದರದ ಆರ್ಥೋಹೆಲ್ತ್‌ ಮಾನ್ಯತೆ ಪಡೆದ 6 ಸಂಸ್ಥೆಗಳಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮೀಷನ್‌ 40 ಪರ್ಸೆಂಟ್ ಇಲ್ಲ, ಕಡಿಮೆಯಾಗಿದೆ:ಆರ್‌.ಮಂಜುನಾಥ
ಪರಂಪರೆ, ಸಂಸ್ಕೃತಿಯ ಪ್ರತೀಕ ರಕ್ಷಾ ಬಂಧನ