ಸ್ವತಂತ್ರ ಧರ್ಮದ ಮಾನ್ಯತೆ; ಮಠಾಧೀಶರು ಧ್ವನಿ ಎತ್ತಿಲ್ಲ: ಅವಿನಾಶ ಭೋಸಿಕರ್

KannadaprabhaNewsNetwork |  
Published : Oct 26, 2026, 01:30 AM IST
ಚಿತ್ರ 25ಬಿಡಿಆರ್3ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಶರಣರ ವತಿಯಿಂದ ಪಟ್ಟಣದ ಬೇಗ್‌ ಸಭಾಂಗಣದಲ್ಲಿ ಭಾನುವಾರ ಜರುಗಿದ ಕಲ್ಯಾಣ ಪರ್ವದ ರಜತ ಮಹೋತ್ಸವದಲ್ಲಿ ಅವಿನಾಶ ಭೋಸಿಕರ್‌ ಮಾತನಾಡಿದರು. | Kannada Prabha

ಸಾರಾಂಶ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟ ಕುರಿತು ಯಾವ ಮಠಾಧೀಶರು ಕೂಡ ಧ್ವನಿ ಎತ್ತುತ್ತಿಲ್ಲ ಎಂದು ನಾಂದೇಡ ಬಸವ ಬ್ರಿಗೇಡ್‌ ಅಧ್ಯಕ್ಷ ಅವಿನಾಶ ಭೋಸಿಕರ್‌ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟ ಕುರಿತು ಯಾವ ಮಠಾಧೀಶರು ಕೂಡ ಧ್ವನಿ ಎತ್ತುತ್ತಿಲ್ಲ ಎಂದು ನಾಂದೇಡ ಬಸವ ಬ್ರಿಗೇಡ್‌ ಅಧ್ಯಕ್ಷ ಅವಿನಾಶ ಭೋಸಿಕರ್‌ ಕಳವಳ ವ್ಯಕ್ತಪಡಿಸಿದರು.

ಅವರು ಸ್ವಾಭಿಮಾನಿ ಶರಣರ ವತಿಯಿಂದ ಪಟ್ಟಣದ ಬೇಗ್‌ ಸಭಾಂಗಣದಲ್ಲಿ ಭಾನುವಾರ ಜರುಗಿದ ಕಲ್ಯಾಣ ಪರ್ವದ ರಜತ ಮಹೋತ್ಸವದಲ್ಲಿ ಅತಿಥಿಗಳಾಗಿ ಮಾತನಾಡಿ, ಪೂಜ್ಯ ಮಾತೆ ಮಹಾದೇವಿ ಅವರು ಬದುಕಿದ್ದಾಗ 23 ಲಿಂಗಾಯತ ಮಹಾರ‍್ಯಾಲಿಗಳು ಯಶಸ್ವಿಯಾಗಿ ಜರುಗಿದ್ದವು. ಆದರೆ ಇಂದು ಬಸವ ಧರ್ಮ ಪೀಠದ ಉತ್ತರಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ಪೀಠದ ಮತ್ತು ಮಾತಾಜಿಯವರ ಹೋರಾಟದ ನಿಜವಾದ ಉತ್ತರಾಧಿಕಾರಿ ಡಾ. ಚನ್ನಬಸವಾನಂದ ಸ್ವಾಮಿಗಳಿದ್ದಾರೆ. ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ನುಡಿದರು.

ಧರ್ಮದ ಹೆಸರಿನಲ್ಲಿ ಕಾಣಿಕೆ ಪಡೆದು, ಕಾರು ಬಂಗಲೆ ನಿರ್ಮಿಸಿಕೊಂಡು ಧರ್ಮಕ್ಕಾಗಿ ಹೋರಾಡದ ಮಠಾಧೀಶರು ನಿದ್ದೆಯಿಂದ ಮೇಲೇಳಲಿ. ಅರಿತುಕೊಳ್ಳಲಿ. ಮಠ, ಪೀಠ, ಅಧಿಕಾರ ಬಿಟ್ಟು ಹೊರಬರಲಿ. ಮತ್ತೆ ನಾವು ಲಿಂಗಾಯತ ಹೋರಾಟ ಆರಂಭ ಮಾಡುತ್ತೇವೆ ಎಂದು ನಾಂದೇಡ ಬಸವ ಬ್ರಿಗೇಡ್‌ ಅಧ್ಯಕ್ಷ ಅವಿನಾಶ ಭೋಸಿಕರ್‌ ತಿಳಿಸಿದರು. ಬೀದರ್‌ ಬಸವ ಮಂಟಪದ ಮಕ್ಕಳಿಂದ ಜರುಗಿದ ವಚನ ನೃತ್ಯ ಆಕರ್ಷಕವಾಗಿತ್ತು.

ಕಲ್ಯಾಣ ಪರ್ವದ ರಜತ ಮಹೋತ್ಸವದ ನಿರ್ಣಯಗಳು: 7ನೇ ಅಂತಾರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರದಲ್ಲಿ ಆಯೋಜನೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮುಂದುವರೆಸುವುದು. 2027ರ ಮಾರ್ಚ್‌ನಲ್ಲಿ ಹೈದ್ರಾಬಾದ್‌ನಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ. ಪರುಷಕಟ್ಟೆಯನ್ನು ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಿ ಸರ್ಕಾರ ಅಭಿವೃದ್ಧಿಪಡಿಸಲಿ. ನೂತನ ಅನುಭವ ಮಂಟಪದ ಉದ್ಘಾಟನೆಗಾಗಿ ಸರ್ಕಾರ ಹೆಚ್ಚು ಪ್ರಚಾರ ಕಾರ್ಯ ಕೈಗೊಳ್ಳಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮೆಲ್ಲರ ಜವಾಬ್ದಾರಿ
ಕಾಡಾನೆ ಹಾವಳಿ ತಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ