ಗೋಕರ್ಣ: ಸಾಧನೆಗೈದವರನ್ನು ಗುರುತಿಸಿ, ಸನ್ಮಾನಿಸಿ, ಪ್ರೋತ್ಸಾಹಿಸುವ ಕಾರ್ಯ ಹೆಚ್ಚು ನಡೆಯಬೇಕು ಎಂದು ಹಿರಿಯ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದರು.ಇಲ್ಲಿನ ಹವ್ಯಕ ಕ್ಷಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಗೋಕರ್ಣ ಮೂಲದವರು ಬೇರೆ ಬೇರೆ ಊರಿನಲ್ಲಿದ್ದು, ಸಾಧನೆ ಮಾಡಿದವರನ್ನು ಗುರುತಿಸಿ ಹವ್ಯಕ ಸಂಘ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.ಸಾಹಿತಿ ಹಾಗೂ ತಾಮ್ರಗೌರಿ ಮಂದಿರದ ಮುಖ್ಯ ಅರ್ಚಕ ಪ್ರಭಾಕರ ತಾಮ್ರಗೌರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುಣ್ಯಕ್ಷೇತ್ರದಲ್ಲಿ ಪ್ರತಿಯೊಂದು ಮನೆಯಲ್ಲೂ ವೇದವಿದ್ವಾಂಸರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದು, ಸಾಹಿತ್ಯ ಕ್ಷೇತ್ರದಲ್ಲಿನ ಅಲ್ಪ ಸಾಧನೆಗೆ ತನಗೆ ನೀಡಿದ ಪುರಸ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ, ಈ ಕ್ಷೇತ್ರದಲ್ಲಿ ಮತ್ತಷ್ಟು ಮುಂದುವರಿಯಲು ಪ್ರೇರಣೆ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಕೆ.ಜಿ. ಗುಣಿ,ಸಂಘದ ವಿಶೇಷ ಆಮಂತ್ರಿತ ವಸಂತರಾಜನ್ ಕೊಡ್ಲೆಕೆರೆ, ಸಂಘದ ಅಧ್ಯಕ್ಷ ರಮೇಶ ಪ್ರಸಾದ ಇದ್ದರು. ವೇ. ಶಂಕರ ಜೋಶಿ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶೋಭಾ ಉಪಾಧ್ಯಾ, ಯಶೋದಾ ಚಿತ್ರಿಗಿಮಠ ಪ್ರಾರ್ಥಿಸಿದರು.
ಸಂಘದ ಸದಸ್ಯರಾದ ಲಂಬೋಧರ ಸಭಾಹಿತ, ರವೀಂದ್ರ ಕೊಡ್ಲೆಕೆರೆ, ಗಜಾನನ ಸಭಾಹಿತ, ಗಜಾನನ ಉಗ್ರು, ಚಂದ್ರಮತಿ ಸಭಾಹಿತ,ಪ್ರಭಾಕರ ಪ್ರಸಾದ, ಲಕ್ಷ್ಮಿನಾರಾಯಣ ಜಂಭೆ ಮತ್ತಿತರರು ಸಹಕರಿಸಿದರು. ರಾಮಚಂದ್ರ ಮಾರ್ಕಾಂಡೆ ಕಾರ್ಯಕ್ರಮ ನಿರ್ವಹಿಸಿದರು.ಅರಣ್ಯ ಅತಿಕ್ರಮಣ ಅರ್ಜಿ ಪುನರ್ ಪರಿಶೀಲನೆಗೆ 2 ತಿಂಗಳ ಗಡುವುಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿ ಹಾಗೂ ಪುನರ್ ಪರಿಶೀಲನೆಗೆ ಎರಡು ತಿಂಗಳು ಕಾಲಮಾನ ದಂಡ ನಿಗದಿಗೊಳಿಸಿ ನಿರ್ದೇಶನವನ್ನು ರಾಜ್ಯ ಮಟ್ಟದ ಅರಣ್ಯ ಹಕ್ಕು ಅನುಷ್ಠಾನ ಮೇಲ್ವಿಚಾರಣಾ ಸಮಿತಿ ವಿವಿಧ ಅರಣ್ಯ ಹಕ್ಕು ಸಮಿತಿಗೆ ನೀಡಿದೆ ಎಂದು ರಾಜ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯ ಮಟ್ಟದ ಅರಣ್ಯ ಹಕ್ಕು ಅನುಷ್ಠಾನ ಮೇಲ್ವಿಚಾರಣಾ ಸಮಿತಿ ನ. ೨೮ರಂದು ಜರುಗಿದ ಸಭೆ ನಡವಳಿಕೆಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸರ್ಕಾರದ ಕಾರ‍್ಯದರ್ಶಿ ರಂದೀಪ್ ಡಿ. ಇವರು ಪ್ರಕಟಿಸಿದ ಆದೇಶವನ್ನು ಪ್ರದರ್ಶಿಸಿ ಮಾತನಾಡಿದರು.ಸರ್ಕಾರದ ಮುಖ್ಯ ಕಾರ‍್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಮತ್ತು ಸವೋಚ್ಚ ನ್ಯಾಯಾಲಯದ ೨೦೧೯ರ ಆದೇಶ ಮತ್ತು ನಿರ್ದೇಶನದಂತೆ ಅರ್ಜಿಗಳ ಪುನರ್ ಪರಿಶೀಲನೆಯನ್ನು ನಿರ್ದಿಷ್ಟ ಕಾಲಮಾನದಂಡದ ಅಡಿಯಲ್ಲಿ ಅರ್ಜಿ ವಿಚಾರಣೆ ಜರುಗಿಸಬೇಕೆಂದು ನಿರ್ದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.