ಮಕ್ಕಳ ಸೃಜನಶೀಲತೆ ಗುರುತಿಸಿ ಪ್ರೋತ್ಸಾಹಿಸಿ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Aug 31, 2026, 02:45 AM IST
ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಗುವಿನ ಆಸಕ್ತಿಗೆ ವಿರುದ್ಧವಾಗಿ ಒತ್ತಡ ಹೇರುವುದರಿಂದ ಅದರ ಸಹಜ ಪ್ರತಿಭೆ ಕುಂಠಿತವಾಗುವ ಸಾಧ್ಯತೆಯಿದೆ. ಬದಲಾಗಿ, ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಅಗತ್ಯವಾದ ಅವಕಾಶ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು.

ಲಕ್ಷ್ಮೇಶ್ವರ: ಪ್ರತಿಯೊಬ್ಬ ಮಗುವಿನಲ್ಲಿ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ, ಆಸಕ್ತಿ ಹಾಗೂ ಸೃಜನಶೀಲತೆ ಅಡಗಿರುತ್ತದೆ. ಮಕ್ಕಳಲ್ಲಿರುವ ಅಭಿರುಚಿ ಮತ್ತು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಮೇಲಿದೆ ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿ ಪ್ರೊ. ಸಿ.ವಿ. ಕೆರಿಮನಿ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತು ಮಾತನಾಡಿದರು.

ಮಕ್ಕಳನ್ನು ಕೇವಲ ಅಂಕ ಗಳಿಕೆಯ ದೃಷ್ಟಿಯಿಂದ ನೋಡದೆ, ಅವರ ಆಸಕ್ತಿ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಗಮನಿಸುವುದು ಅಗತ್ಯ. ಕೆಲ ಮಕ್ಕಳಿಗೆ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಇದ್ದರೆ, ಇನ್ನು ಕೆಲವರು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ನೃತ್ಯ, ಅಭಿನಯ, ಭಾಷಣ, ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಮರ್ಥ್ಯ ಹೊಂದಿರುತ್ತಾರೆ.

ಮಗುವಿನ ಆಸಕ್ತಿಗೆ ವಿರುದ್ಧವಾಗಿ ಒತ್ತಡ ಹೇರುವುದರಿಂದ ಅದರ ಸಹಜ ಪ್ರತಿಭೆ ಕುಂಠಿತವಾಗುವ ಸಾಧ್ಯತೆಯಿದೆ. ಬದಲಾಗಿ, ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಅಗತ್ಯವಾದ ಅವಕಾಶ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು. ಅವರ ಸಣ್ಣ ಸಾಧನೆಗಳನ್ನೂ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಪ್ರೊ. ಸಿ.ವಿ. ಕೆರಿಮನಿ ಹಾಗೂ ಎ.ಕೆ. ರಾಮೇಶ್ವರ ಸಂಪಾದಿತ ಬಾರೋ ಬಾರೋ ಚಂದ್ರಾಮ, ಪಾಟಿ ಮ್ಯಾಲ ಪಾಟಿ ನಮ್ಮ ಸಾಲಿ ಸೂಟಿ, ಮಕ್ಕಳ ಮನವೊಂದು ಬಿಳಿಹಾಳೆ ಕೃತಿಗಳು ಮಕ್ಕಳ ಹಾಗೂ ಓದುಗರ ಮನಗೆದ್ದಿವೆ ಎಂದರು.

ಈ ವೇಳೆ ಸಾಹಿತಿ ಸಿ.ಆರ್. ಗೋಕಾವಿ ಹಾಗೂ ಪ್ರಗತಿಪರ ಚಿಂತಕ ರಾಮಗೇರಿಯ ಶಂಕರಣ್ಣ ಕಾಳೆ ಅವರು ಪ್ರೊ. ಸಿ.ವಿ. ಕೆರಿಮನಿ ಅವರ ಜತೆಗಿನ ಒಡನಾಟವನ್ನು ಸ್ಮರಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಬಿ. ಕರಿಭರಮಗೌಡರ ಮಾತನಾಡಿ, ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಪ್ರೊ. ಸಿ.ವಿ. ಕೆರಿಮನಿಯವರ ಕೊಡುಗೆ ಸ್ಮರಣೀಯ ಎಂದರು

ಸಮಾರಂಭದಲ್ಲಿ ಪಿ.ಬಿ. ಕರಾಟೆ, ಎಸ್‌.ಎಫ್. ಆದಿ, ಜಿ.ಎಸ್. ರಾಮಶೆಟ್ಟರ್, ಎಲ್.ಎಸ್. ಅರಳಿಹಳ್ಳಿ ದೇವಣ್ಣ ಬಳಿಗಾರ, ಶಕುಂತಲಾ ಅಳಗವಾಡಿ ನಿರ್ಮಲಾ ಅರಳಿ, ಪ್ರತಿಮಾ ಮಹಾಜನಶೆಟ್ಟರ, ಲಲಿತಕ್ಕ ಕೆರಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ್ಕಿ ಸ್ವಾಗತಿಸಿದರು. ನಾಗರಾಜ್ ಕಳಸಾಪುರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಲಯ ಅಧ್ಯಕ್ಷರ ಸಭೆ
ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ