ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮನ್ಮುಲ್ ಹೆಸರು ವಿಶ್ವಮಟ್ಟದಲ್ಲಿ ಗುರುತಿಸಲು ಸಹಕರಿಸಬೇಕು ಎಂದು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.ಸಮೀಪದ ಕೆ.ಪಿ.ದೊಡ್ಡಿಯಲ್ಲಿ ಮಣಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಲು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮನ್ಮುಲ್ ಪ್ರಗತಿಗೆ ನೆರವಾಗಿ ಎಂದರು.
ಡೇರಿಗಳಿಗೆ ಕೆಟ್ಟ ಹೆಸರು ತರಲು ಕೆಲವು ಹೈನು ಉದ್ಯಮಿಗಳು ನೀರು ಮಿಶ್ರಿತ ಹಾಲು ಪೂರೈಕೆ ಮಾಡುತ್ತಿದ್ದಾರೆ. ಅವುಗಳಿಗೆ ಕಡಿವಾಣ ಹಾಕಲು ಹಾಲಿನ ಗುಣಮಟ್ಟ ಕಂಡು ಹಿಡಿಯುವ ನೂತನ ಯಂತ್ರ ಅಳವಡಿಸಲಾಗುತ್ತಿದೆ ಎಂದರು.ಕಳೆದ ನಾಲ್ಕು ದಶಕಗಳ ಹಿಂದೆ ಆರಂಭವಾದ ಡೇರಿ ಪ್ರತಿ ದಿನ 600 ಲೀಟರ್ ಹಾಲು ಪೂರೈಕೆ ಮಾಡುವ ಮೂಲಕ ಉತ್ತಮ ವಹಿವಾಟು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಗುಣಮಟ್ಟದ ಹಾಲು ಪೂರೈಸುವಂತೆ ರೈತರಿಗೆ ತಿಳಿಸಿದರು.
ನಾಮಫಲಕ ಅನಾವರಣಗೊಳಿಸಿದ ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ಹಾಲಿನ ಡೇರಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ. ಮನ್ಮುಲ್‌ಗೆ ಗುಣಮಟ್ಟದ ಹಾಲು ಮಾತ್ರ ಬೇಕು, ಕಲಬೇರಕೆ ಹಾಲು ನೀಡಿದರೆ ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಲಾಗುವುದು ಎಂದರು.ಡೇರಿಯಿಂದ ಮನ್ಮುಲ್ ನಿರ್ದೇಶಕರಾದ ಎಸ್.ಪಿ.ಸ್ವಾಮಿ, ಹರೀಶ್‌ಬಾಬು ಹಾಗೂ ಸಂಘದ ಅಧ್ಯಕ್ಷ ಕೆಂಪರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪುಟ್ಟಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್, ಸಹಾಯಕ ವ್ಯವಸ್ಥಾಪಕ ಡಾ.ಹೊನ್ನೇಶ್, ಹಣಮಂತ್ ತೋಳಮರ್ಡಿ, ವಿಸ್ತರಣಾಧಿಕಾರಿ ಎನ್.ಭವ್ಯಶ್ರೀ, ಗುತ್ತಿಗೆದಾರ ಜಗದೀಶ್ ತಿಮ್ಮೇಗೌಡ, ಸಿಇಒ ಕೆ.ಪುಟ್ಟಲಿಂಗಯ್ಯ, ಮುಖಂಡ ಮಣಿಗೆರೆ ರಾಮಣ್ಣ, ಯುವ ಮುಖಂಡ ಗೋಬಿ ಸಿದ್ದರಾಜು, ಸಂಘದ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಎಂ.ಎಲ್.ರಮೇಶ್, ಎಂ.ಕೆ.ವೆಂಕಟೇಶ್, ಕೆ.ಎನ್.ಸಿದ್ದೇಗೌಡ, ಬಸವೇಗೌಡ, ಕೆಂಪಮ್ಮ, ಸ್ವಾಮಿ, ಬಿಳಿಯಯ್ಯ, ಸಹಾಯಕ ಎಂ.ಡಿ. ಜೀವನ್ ಸೇರಿದಂತೆ ಹಲವರಿದ್ದರು.