ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡಿ: ನಾಗರಾಜ

KannadaprabhaNewsNetwork |  
Published : Sep 18, 2024, 01:48 AM IST
ಕ್ಯಾಪ್ಷನ್ 17ಕೆಡಿವಿಜಿ8-ದಾವಣಗೆರೆ ಜೈನ್ ಲೇಔಟ್ ನಿವಾಸಿಗಳು ಗಣೇಶೋತ್ಸವ ಸಮಾರಂಭದಲ್ಲಿ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ನಾಗರಾಜ ಬಡದಾಳರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಅನ್ಯ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡದೇ, ಪಾಠದ ಜೊತೆಗೆ ಆಟದಲ್ಲೂ ತೊಡಗುವಂತೆ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಪ್ರತಿಯೊಬ್ಬ ಪಾಲಕರಿಂದಲೂ ಆಗಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಜೈನ್ ಲೇಔಟ್ ಗಣೇಶೋತ್ಸವದಲ್ಲಿ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅನ್ಯ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡದೇ, ಪಾಠದ ಜೊತೆಗೆ ಆಟದಲ್ಲೂ ತೊಡಗುವಂತೆ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಪ್ರತಿಯೊಬ್ಬ ಪಾಲಕರಿಂದಲೂ ಆಗಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.

ನಗರದ ಜೈನ್ ಲೇಔಟ್‌ನ ಯುವಕರ ಬಳಗ ಹಮ್ಮಿಕೊಂಡಿದ್ದ 10ನೇ ವರ್ಷದ ಗಣೇಶೋತ್ಸವ ಬಹುಮಾನ ವಿತರಣೆ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆಗಳು ಅಡಗಿರುತ್ತವೆ. ಅಂತಹ ಪ್ರತಿಭೆಗಳ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.

ಅಂಕಗಳ ಬೆನ್ನು ಹತ್ತಿರುವ ಪಾಲಕರು ತಮ್ಮ ಮಗ ಅಥವಾ ಮಗಳು ಹೆಚ್ಚು ಅಂಕ ಪಡೆಯಲಿಲ್ಲವೆಂಬ ಬೇಸರದಲ್ಲಿ ಅನ್ಯ ಮಕ್ಕಳೊಂದಿಗೆ ಹೋಲಿಕೆ ಮಾಡುವುದು ಸಾಮಾನ್ಯವಾಗುತ್ತಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಇತರೆ ಮಕ್ಕಳಿಗೆ ಹೋಲಿಕೆ ಮಾಡದೇ, ಆತ್ಮಸ್ಥೈರ್ಯ ಮೂಡಿಸಬೇಕು. ಪಾಠದ ಜೊತೆ ಆಟದಲ್ಲೂ ಮಕ್ಕಳು ತೊಡಗುವಂತಹ ವಾತಾವರಣ ಮನೆಯಲ್ಲಿ ಕಲ್ಪಿಸಿಕೊಡಿ ಎಂದು ಹೇಳಿದರು.

ಅಕ್ಕ ಮಹಾದೇವಿ ಸಮಾಜದ ಹಿರಿಯ ಸದಸ್ಯರಾದ ನೀಲಗುಂದ ಜಯಮ್ಮ ಮಾತನಾಡಿ, ಗಣೇಶೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು. ಮನೆಯಿಂದಲೇ ನಮ್ಮ ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಲಿಸುವ ಕೆಲಸ ತಾಯಂದಿರು, ಹಿರಿಯರಿಂದ ಆಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಮಹೇಶ್ವರಪ್ಪ ಮಾತನಾಡಿದರು. ಮ್ಯೂಸಿಕಲ್ ಚೇರ್, ರಂಗೋಲಿ, ಚಿತ್ರಕಲೆ ಸೇರಿದಂತೆ ಮಕ್ಕಳಿಂದ ಹಿರಿಯರವರೆಗೆ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೀಲಗುಂದ ಜಯಮ್ಮ, ನಾಗರಾಜ ಬಡದಾಳ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಹನುಮಂತ ರಾವ್, ಕಾರ್ಯದರ್ಶಿ ವಿಜಯಕುಮಾರ, ವಿದ್ಯಾ ವಿಜಯಕುಮಾರ, ಜ್ಯೋತಿ ಹನುಮಂತ ರಾವ್, ಐಶ್ವರ್ಯ ನಟರಾಜ, ಪುಷ್ಪಾ ಚನ್ನಬಸಪ್ಪ, ಗೀತಾ ಬಸವರಾಜ, ಪ್ರೇಮ ವೀರಣ್ಣ, ಅಕ್ಷತಾ ರವಿ, ಜ್ಯೋತಿ ಸಂತೋಷ, ಕುಸುಮ ಪ್ರಕಾಶ, ಶಶಿಕಲಾ ಶಿವಲಿಂಗಪ್ಪ ಬಡದಾಳ, ಜಾಹ್ನವಿ ವಿಜಯಕುಮಾರ, ಪ್ರಕಾಶ ಇತರರು ಇದ್ದರು.

- - - -17ಕೆಡಿವಿಜಿ8:

ದಾವಣಗೆರೆ ಜೈನ್ ಲೇಔಟ್ ನಿವಾಸಿಗಳು ಗಣೇಶೋತ್ಸವ ಸಮಾರಂಭದಲ್ಲಿ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ನಾಗರಾಜ ಬಡದಾಳ ಅವರನ್ನು ಸನ್ಮಾನಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ