ಪ್ರತಿಭೆ ಗುರುತಿಸಿ ಗೌರವಿಸುವುದು ಸಂಪ್ರದಾಯ: ಸಂಸದ ಗೋವಿಂದ ಕಾರಜೋಳ

KannadaprabhaNewsNetwork |  
Published : Jun 24, 2026, 01:15 AM IST
ಪೋಟೋ ವಿವರಣೆ ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಕುವೆಂಪು ಕಲಾ ಮಂದಿರದಲ್ಲಿ ಆಶ್ರಿತ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಜೈ ಬೀಮ್ ಉಚಿತ ಕಲಿಕಾ ಕೇಂದ್ರ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವುದು ಸತ್ಸಂಪ್ರದಾಯ.ಇದರಿಂದ ಮತ್ತೊಬ್ಬ ವಿದ್ಯಾರ್ಥಿ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ.ಮೊಳಕಾಲ್ಲೂರು

ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವುದು ಸತ್ಸಂಪ್ರದಾಯ.ಇದರಿಂದ ಮತ್ತೊಬ್ಬ ವಿದ್ಯಾರ್ಥಿ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ಆಶ್ರಿತ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಜೈ ಬೀಮ್ ಉಚಿತ ಕಲಿಕಾ ಕೇಂದ್ರ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ಆಶಯಕ್ಕೆ ಅನುಗುಣವಾಗಿ ದೇಶದ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂಬ ಕಾರಣದಿಂದ ರಾಜ್ಯ ಸರ್ಕಾರ ಪ್ರತಿ ವರ್ಷ ನೂರಾರು ಕೋಟಿ ಅನುದಾನ ನೀಡುತ್ತಿದೆ.ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ಅನುದಾನ ನೀಡುತ್ತಿದೆ.ವೇಗವಾಗಿ ಸಿಗಬೇಕಾದ ಶಿಕ್ಷಣ ಸಿಗದೆ ಬಹುತೇಕ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು.ಸ್ವಾತಂತ್ರ್ಯ ಬಂದು ಆರು ದಶಕಗಳ ತರುವಾಯ ಶಿಕ್ಷಣದ ವ್ಯವಸ್ಥೆ ಸುಧಾರಣೆ ಕಾಣುತ್ತಿದೆ ಎಂದರು.

ಬಡವರ,ಕೂಲಿಕಾರರ ಮಕ್ಕಳು ಡಾಕ್ಟರ್,ಇಂಜಿನಿಯರ್ ಆಗಬೇಕೆಂಬ ದೃಢ ಸಂಕಲ್ಪದಿಂದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜುಗಳು ಆರಂಭಗೊಂಡಿದ್ದ ಪರಿಣಾಮ ಇಂದು ಎಲ್ಲಾ ವರ್ಗದ ಪ್ರತಿಭಾವಂತ ಬಡ ಮಕ್ಕಳು ಅನೇಕ ದೊಡ್ಡ ಹುದ್ದೆಗಳನ್ನು ಪಡೆಯಲು ಕಾರಣವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಬಡವ, ಬಲ್ಲಿದ ಎನ್ನುವ ಬೇದ ಇರದೆ ದೇಶದ ಎಲ್ಲ ಜಾತಿಯ ಪ್ರತಿಭಾವಂತರಿಗೆ ನ್ಯಾಯ ಸಿಗಬೇಕೆನ್ನುವ ಕಾರಣದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ.ಆದರೆ ಇಲ್ಲಿನ ರಾಜ್ಯ ಸರ್ಕಾರ ದೇಶದ ಮೂರು ಭಾಷೆಯ ಶಿಕ್ಷಣ ನೀತಿಯನ್ನು ಒಪ್ಪದೆ ಕೇವಲ ಎರಡು ಬಾಷಾ ಶಿಕ್ಷಣ ನೀತಿಗೆ ಒತ್ತು ನೀಡುತ್ತಿದ್ದಾರೆ.ಇದರಿಂದ ಬಡವರ ಮಕ್ಕಳು ಪ್ರತಿಭಾವಂತಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಿಗೂ ತ್ರಿಭಾಷಾ ಶಿಕ್ಷಣ ಅಗತ್ಯವಾಗಿದೆ.ಇದರಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ಬದುಕಲು ದಾರಿಯಾಗುತ್ತದೆ ಎಂದ ಅವರು ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ.ಪ್ರತಿ ಮಕ್ಕಳು ಸಾದಿಸುವ ಗುರಿಯನ್ನು ಮೈಗೂಡಿಸಿಕೊಂಡು ಅಭ್ಯಾಸದತ್ತ ಗಮನ ಹರಿಸಿದ್ದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದರು.

ಆಶ್ರಿತ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ ಮಾತನಾಡಿ, ಆಶ್ರಿತ ಸಂಸ್ತೆಯು ಮಕ್ಕಳ ಹಕ್ಕು ರಕ್ಷಣೆಗಾಗಿ ತೆಲಂಗಾಣ ಆಂಧ್ರ ಪ್ರದೇಶದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ.ಬಾಲ್ಯ ವಿವಾಹ,ಬಾಲ ಕಾರ್ಮಿಕತೆ ಸೇರಿದಂತೆ ಮಕ್ಕಳ ಹಕ್ಕುಗಳ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಅದರಂತೆ ರಾಜ್ಯದ ಚಿತ್ರದುರ್ಗ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಜಿಲ್ಲಾಡಳಿತದ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಬೆಳೆಯುವ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ ವಿದ್ಯಾವಂತರನ್ನಾಗಿಸಿ ಅವರ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯಬೇಕು ಎಂದರು.

ಬೋರೇಶ್ವರ ಮಠದ, ಶಿವಮೂರ್ತಿ ಸ್ವಾಮೀಜಿ, ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಸಂಯೋಜಕ ಡಿ.ಒ.ಮೊರಾರ್ಜಿ, ಶಿಕ್ಷಕ ವಸಂತ ಕುಮಾರ್. ಗ್ರಾಮದ ಮುಖಂಡರಾದ ಶಿವಕುಮಾರ್, ಶರಣಪ್ಪ, ಕಲ್ಲೇಶಪ್ಪ, ದಳಪತಿ ಸೂರಯ್ಯಾ ಓಬಯ್ಯ, ಸಣ್ಣ ಬಸಯ್ಯ, ಸತ್ಯಾನಂದ, ಸಂಸ್ತೆಯ ತಾಲೂಕು ಸಂಯೋಜಕ ಬಟ್ರಹಳ್ಳಿ ಧನಂಜಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಖಾಸಗೀಕರಣ ನೇಕಾರರಿಗೆ ಕಂಟಕ
ಕೋಮುವಾದಕ್ಕೆ ಬಳಕೆಯಾಗುವ ಭಕ್ತಿ ಅಪ್ರಸ್ತುತ: ಕಾ.ತ.ಚಿಕ್ಕಣ್ಣ