ಕಲಾವಿದರ ಸಾಧನೆ ಗುರುತಿಸುವುದು ಸಾಂಸ್ಕೃತಿಕ ಪರಂಪರೆಯ ಲಕ್ಷಣ: ಡಾ. ಸಿದ್ದರಾಮ ಶ್ರೀಗಳು

KannadaprabhaNewsNetwork |  
Published : Nov 02, 2026, 03:15 AM IST
ಕಾರ್ಯಕ್ರಮವನ್ನು ತೋಂಟದ ಡಾ. ಸಿದ್ದರಾಮ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಲಾವಿದರ ಸಾಧನೆಯನ್ನು ಗುರುತಿಸಿ, ಗೌರವಿಸುವುದು ಕಲೆಯ ಬೆಳವಣಿಗೆಗೆ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಪೂರಕವಾಗಿದೆ.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಗದಗ

ಕಲಾವಿದರ ಸಾಧನೆಯನ್ನು ಗುರುತಿಸಿ, ಗೌರವಿಸುವುದು ಕಲೆಯ ಬೆಳವಣಿಗೆಗೆ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಪೂರಕವಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ ನಗರದ ಸಂಸ್ಕೃತಿ ಕನ್ವೆನ್ಷನ್ಸ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ವಾರ್ಷಿಕ ಕಲಾ ಬಹುಮಾನಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿ ಆಯ್ಕೆಯಲ್ಲಿ ಪ್ರಾದೇಶಿಕ ಸಮಾನತೆಯ ಜೊತೆಗೆ ಧರ್ಮ, ಮತ ಹಾಗೂ ಪಂಥಗಳ ಸಮಾನತೆಯನ್ನೂ ಕಾಯ್ದುಕೊಂಡಿರುವುದು ಪ್ರಶಂಸನೀಯ. ಯಾವುದೇ ಭೇದಭಾವವಿಲ್ಲದೆ ಅತ್ಯಂತ ಯೋಗ್ಯ ಹಾಗೂ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಗೌರವ ಪ್ರಶಸ್ತಿ ಮತ್ತು ವರ್ಣಶ್ರೀ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವುದು ಅಕಾಡೆಮಿಯ ಸಾಂಸ್ಕೃತಿಕ ಬದ್ಧತೆಯನ್ನು ತೋರಿಸುತ್ತದೆ.

ಕಲಾವಿದರಿಗಾಗಿಯೇ ಸ್ಪರ್ಧೆಗಳನ್ನು ಆಯೋಜಿಸಿ ಅವರ ಪ್ರತಿಭೆ ಮತ್ತು ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಕಲಾವಿದರಲ್ಲಿ ಹೊಸ ಉತ್ಸಾಹ ತುಂಬುವುದರ ಜೊತೆಗೆ ಕಲೆಯ ನಿರಂತರ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪುಸ್ತಕ ಪರಿಚಯವನ್ನು ಚಂದ್ರಶೇಖರ ವಸ್ತ್ರದ ಮಾಡಿದರು. ಅಕಾಡೆಮಿಯ ಸದಸ್ಯ ಚಂದ್ರಕಾಂತ ಸರೋದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನಮ್ರತ ಸ್ವಾಗತಿಸಿದರು. ವೆಂಕಟೇಶ ಬಡಿಗೇರ ನಿರೂಪಿಸಿ ವಂದಿಸಿದರು.

ಪ್ರಶಸ್ತಿ ವಿಜೇತರು:

2024-25ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ ಬಾಬು ಜತ್ಕರ್ (ಬಾಗಲಕೋಟೆ) ಎಂ.ಜಿ. ದೊಡ್ಮನಿ (ಕಲಬುರಗಿ), ಕೆ.ಸಿ.ಎಸ್. ಪ್ರಸನ್ನ (ತುಮಕೂರು), 2025-26ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ದೇಸಾಯಿ (ಹಾಸನ), ಡಾ. ಶಶಿಕಲಾ ಹೂಗಾರ (ವಿಜಯಪುರ), ಚಿಕ್ಕಣ್ಣ ಸಿ. (ಮೈಸೂರು),

2023-24 ಮತ್ತು 2024-25 ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಭಾಜನರಾದ ವಿಜಯ ಕಿರೇಸೂರ (ಗದಗ), ರವಿ ವಿಠ್ಠಲ ಗುನಗ (ಶಿರಸಿ), ಕುಮಾರ ಎಸ್. ಕಾಟೆನಹಳ್ಳಿ (ಹಾವೇರಿ), ದಯಾನಂದ ಕೆ. ಕಾಮಕರ್ (ಧಾರವಾಡ), ಸರೋಜಾ ಎ. ಮುಂಡೇವಾಡಿ (ಹುನಗುಂದ), ಜಿ.ಎಸ್. ಭವಾನಿ (ಕೊಡಗು), ರಾಘವೇಂದ್ರ ನಾಯ್ಕ (ಉಡುಪಿ), ಶಿವಕುಮಾರ್ ಎಚ್. (ಮಂಡ್ಯ), ಮೋಹನ್ ಕುಮಾರ್ ಬಿ.ಪಿ. (ಮಂಗಳೂರು), ಮಹದೇವ ಹೆಚ್ (ಚಾಮರಾಜನಗರ).

2024-25 ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಾದ ಮೇಘನಾಥ ಅಬ್ರಹಾಂ ಬೆಳ್ಳಿ (ಯಾದಗಿರಿ) ಹೇಮರಡ್ಡಿ ಎನ್. (ರಾಯಚೂರು), ಡಾ. ವೈಶಾಲಬಾಯಿ ಕಾಂಬಳೆ (ಬೀದರ್), ತಿರುಪತಿ ಶಿವನಗುತ್ತಿ (ಕೊಪ್ಪಳ), ಎ. ಮಹಮ್ಮದ್ ರಫಿ (ಬಳ್ಳಾರಿ), ಉದಯ್ ಡಿ. ಜೈನ (ದಾವಣಗೆರೆ), ದಿನೇಶ್ ಬಿ. (ಚಿತ್ರದುರ್ಗ), ಎಸ್.ಎಫ್. ಹುಸೇನಿ (ಮೈಸೂರು), ಗಂಗಾಧರ ಮೂರ್ತಿ (ರಾಮನಗರ), ಪೂರ್ಣಿಮ ಯಲ್ಲಾಪುರಕರ್ (ಬೆಂಗಳೂರು), ಲಕ್ಷ್ಮಣ ಬಾದಾಮಿ (ಬಾಗಲಕೋಟೆ) ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 53 ನೇ ವಾರ್ಷಿಕ ಕಲಾಸ್ಪರ್ಧೆಯಲ್ಲಿ ವಿಜೇತರಾದ ಅಶೋಕ ಮನ್ಸೂರ (ಧಾರವಾಡ), ಸಂದೀಪ ಸಜ್ಜನ (ಬೀದರ), ಹರೀಶ್ ನಾಯ್ಕ್ (ಉಡುಪಿ), ಅಕ್ಷಯ್ ಭಟ್ (ಬೆಂಗಳೂರು), ಲೋಹಿತ್ ಪತ್ತಾರ (ಬೆಂಗಳೂರು), ನೂರಜಾನ್ ಎಂ. ದಫೇದಾರ (ಬಾಗಲಕೋಟ), ಜೀವನ್ ಸಾಲಿಯಾನ್ (ದ.ಕ), ಜಲಜಾಕ್ಷೀ ಕುಲಕರ್ಣಿ (ಕಲಬುರಗಿ), ಮೀನಾಕ್ಷಿ (ಕಲಬುರಗಿ), ದುಂಡಪ್ಪ ಎಸ್.ಲೋಲಸೂರಿ (ಬೆಳಗಾವಿ) ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ
ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಆದ್ಯತೆ ಸಿಗಲಿ