ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಯುವನಿಧಿಗೆ ನಿರಾಸಕ್ತಿ
ಪದವಿ ಮುಗಿಸಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವರೆಗೂ ಸರ್ಕಾರ ಯುವನಿಧಿ ಯೋಜನೆಯಲ್ಲಿ ಪ್ರತಿ ತಿಂಗಳು ಮೂರು ಸಾವಿರ ಗೌರವ ದನ ನೀಡುತ್ತಿದೆ, ಆದರೆ ತಾಲೂಕಿನಲ್ಲಿ ಪದವಿಧರ ನಿರುದ್ಯೋಗಿಗಳು ಯಾರೂ ಅಷ್ಟಾಗಿ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡಿಲ್ಲ,ಇದರಿಂದ ಸರ್ಕಾರದ ಯೋಜನೆ ತಾಲೂಕಿನಲ್ಲಿ ವ್ಯರ್ಥವಾಗುತ್ತಿದೆ, ಕೇವಲ ೬೪೦ ವಿದ್ಯಾರ್ಥಿಗಳು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ, ಇನ್ನು ಡಿಪ್ಲೋಮಾ ವಿದ್ಯಾರ್ಥಿಗಳೂ ಸಹ ಯುವ ನಿಧಿ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಕೇವಲ ೬ ವಿದ್ಯಾರ್ಥಿಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಅಸಮಧಾನವ್ಯಕ್ತಪಡಿಸಿದರು.ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳೂ ೨ಸಾವಿರ ರುಗಳು ಅವರ ಖಾತೆಗೆ ಜಮಾ ಆಗುತ್ತಿದೆ, ಜೂನ್ ತಿಂಗಳಿನವರೆಗೂ ಹಣ ಸಂದಾಯವಾಗಿದೆ, ಆದರೆ ಶೇ.೧೦೦ರಷ್ಟು ಇದರಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗಿಲ್ಲ ೬೮ ಫಲಾನುಭವಿಗಳಿಗೆ ಇನ್ನೂ ಹಣ ಜಮಾವಾಗುತ್ತಿಲ್ಲ ಅವರ ಆಧಾರ್ ಕಾರ್ಡ್ ಸಿಡಿಂಗ್ ಆಗದ ಕಾರಣ ವಿಫಲವಾಗಿದೆ, ಶಕ್ತಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಜೂನ್ ಅಂತ್ಯದವರೆಗೂ ೨೨೪೮೬೯೯೪ ಮಹಿಳೆಯರೂ ಉಚಿತ ಬಸ್ ಪ್ರಯಾಣವನ್ನು ಬಳಸಿಕೊಂಡಿದ್ದಾರೆಂದು ಪಾರ್ಥಸಾರಥಿ ತಿಳಿಸಿದರು.ಬಸ್‌ಡಿಪೊ ಸ್ಥಾಪಿಸುವ ಭರವಸೆತಾಲೂಕಿನಲ್ಲಿ ಎಲ್ಲಾ ೫ ಗ್ಯಾರಂಟಿ ಯೋಜನೆಗಳು ಯಾವುದೇ ಲೋಪವಿಲ್ಲದಂತೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಲ್ಲದೆ ತಾಲೂಕಿನಲ್ಲೆ ಬಸ್ ಡಿಪೋ ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದು ಅದೂ ಸಹ ಬಗೆಹರಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆಂದು ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ರಫೀಕ್,ತಾಪಂ ಇಒ ರವಿಕುಮಾರ್,ಸದಸ್ಯರಾದ ಹರೀಶ್ ಕುಮಾರ್, ವಿವೇಕಾನಂದ, ಬೀರಪ್ಪ, ನಾರಾಯಣಸ್ವಾಮಿ, ಸುಜಾತಮ್ಮ, ಲಕ್ಷ್ಮಮ್ಮ, ಸಿಡಿಪಿಒ ಮುನಿರಾಜು, ಆಹಾರ ನಿರೀಕ್ಷಕರಾದ ಬಲರಾಂಸಿಂಗ್, ಬೆಸ್ಕಾಂ ಎಇಇ ಸುಕುಮಾರರಾಜು ಇತರರು ಇದ್ದರು.