ಕನ್ನಡಪ್ರಭ ವಾರ್ತೆ ಕೋಲಾರಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೋಲಾರ ಹವಾಮಾನದಲ್ಲಿ ಏರುಪೇರು ಉಂಟಾಗಿದೆ, ಕಳೆದ ೩ ದಿನಗಳಿಂದ ಮಳೆ ಇದ್ದು ಈಗ ವಾತಾವರಣ ತಿಳಿಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ನಗರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ತಾಯಿ-ಮಗುವಿನ ವಿಶೇಷ ಚಿಕಿತ್ಸೆ ಘಟಕ ಉದ್ಘಾಟಿಸಿ ಮಾತನಾಡಿ, ವಾಯುಭಾರ ಕುಸಿತದಿಂದ ಉಂಟಾಗಿರುವ ಜಡಿ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ರಾಗಿ ಫಸಲು ಬೆಳೆ ನಷ್ಟಗೊಂಡಿದೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.ಸಾವುನೋವು ಉಂಟಾಗಿಲ್ಲ
ಬೆಳೆ ನಷ್ಟ ಸಮೀಕ್ಷೆ ವರದಿ ಬಂದ ನಂತರ ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು. ಪರಿಹಾರ ಧನ ಬಂದ ಕೂಡಲೇ ರೈತರಿಗೆ ನಷ್ಟದ ಪ್ರಮಾಣದ ಮೇರೆಗೆ ಪರಿಹಾರ ವಿತರಿಸಲಾಗುವುದು. ಬಹುತೇಕ ನಷ್ಟಗೊಂಡಿರುವ ಬೆಳೆ ರಾಗಿ ಆಗಿದ್ದು ಇದರ ಜೊತೆಗೆ ಕೆಲವು ತರಕಾರಿ ಹಾಗೂ ಹಣ್ಣುಗಳು ನಷ್ಟಗೊಂಡಿರುವ ಸಾಧ್ಯತೆ ಇದೆ, ಇದರ ಹೊರತಾಗಿ ಯಾವೂದೇ ಮನೆ ಕುಸಿತ, ಸಾವು ನೋವುಗಳು ಆಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದರು.ಕೋಲಾರದ ಎಸ್.ಎನ್.ಆರ್, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿ ಮಗುವಿಗೆ ತಾಯಿಯ ಜೊತೆಯಲ್ಲಿಯೇ ಚಿಕಿತ್ಸೆ ನೀಡುಯವಂತ ಆತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣವನ್ನು ಬೆಮಲ್ ಕಾರ್ಖಾನೆಯವರು ೩೫ ಲಕ್ಷ ವೆಚ್ಚದಲ್ಲಿ ಕೊಡುಗೆ ನೀಡಿದೆ. ಈ ಸೌಲಭ್ಯವನ್ನು ತರಿಸಲಾಗಿದ್ದು, ಮೂರು ಬೆಡ್ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಬಹುದಾಗಿದೆ. ಇದರ ಜೊತೆಗೆ ತಾಯಿಯ ಎದೆ ಹಾಲು ಬ್ಯಾಂಕ್ ಸ್ಥಾಪಿಸಲಾಗಿದೆ ಎಂದರು.ರೋಗಿಗಳ ಪೋಷಕರಿಗೆ ಊಟಇದರೊಟ್ಟಿಗೆ ೫೦ ಮಂದಿ ರೋಗಿಗಳ ಪೋಷಕರಿಗೆ ಊಟದ ಹಾಗೂ ವಿಶ್ರಾಂತಿ ಗೆ ಅಗತ್ತವಾದ ಸುಸಜ್ಜಿತವಾದ ಡ್ಯಾಮಿಟ್ರಿ ಹಾಲ್ ನಿರ್ಮಿಸಲಾಗುವುದು, ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಬೇಡಿಕೆ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಆಧುನಿಕ ಮಾದರಿಯ ಕಾಂಗ್ರೋ ಕೇರ್ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ವಿದೇಶಗಳಲ್ಲಿ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.