ಕನ್ನಡ ಪ್ರಭ ವಾರ್ತೆ ಶಿಡ್ಲಘಟ್ಟ
೨೦೨೫ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಗರದ ಡಾಲ್ಫಿನ್ಸ್ ಪಿಯು ಕಾಲೇಜು ದಾಖಲೆಯ ಫಲಿತಾಂಶ ಪಡೆದಿದೆ ಎಂದು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ತಿಳಿಸಿದರು.ವಾಣಿಜ್ಯ ವಿಭಾಗದ ತನಾಜ್ ಮಹಿ ಎಂಬ ವಿದ್ಯಾರ್ಥಿನಿಯು ೬೦೦ ಅಂಕಗಳಿಗೆ ೫೯೧ ಅಂಕಗಳೊಂದಿಗೆ ಶೇ. ೯೮.೫ ಫಲಿತಾಂಶವನ್ನು ಪಡೆಯುವ ಮೂಲಕ ರಾಜ್ಯಕ್ಕೆ ೯ನೇ ಹಾಗೂ ಜಿಲ್ಲೆಗೆ ಎರಡನೇ ಮತ್ತು ತಾಲೂಕಿಗೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು.
ಪ್ರಾಂಶುಪಾಲ ಶ್ರೀನಿವಾಸಮೂರ್ತಿ ಎನ್. ಮಾತನಾಡಿ, ಕೋವಿಡ್ ವರ್ಷದ ಫಲಿತಾಂಶವನ್ನು ಹೊರತುಪಡಿಸಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ವಿಭಾಗದಲ್ಲಿ ೫೯೧ ಅಂಕಗಳನ್ನು ಪಡೆದಿರುವುದು ದಾಖಲೆಯಾಗಿದೆ ಎಂದರು. ಇದರೊಂದಿಗೆ ತಸ್ಮಿಯಾ ಕೌಸರ್ 579 ಅಂಕಗಳೊಂದಿಗೆ ಶೇ . ೯೭ ಫಲಿತಾಂಶವನ್ನು ಪಡೆದು ತಾಲೂಕಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅಫ್ರೀನ್ ತಾಜ್ ಶೇ. ೯೫, ನಿಶತ್ ಅಂಜುಮ್ ಶೇ. ೯೪, ಝರೀನಾ ತಾಜ್ ಶೇ ೯೨, ಝಯಿನಾ ತಬಸುಮ್ ಶೇ. ೯೨, ಚಿತ್ರಾ ಶೇ. ೯೧, ಮಾಹಿನ್ ಶೇ. ೯೧, ಪೂರ್ಣಿಮಾ ಶೇ. ೯೦, ರಿಹಾನುಲ್ಲಾ ಶರೀಫ್ ಶೇ. ೯೦ ಫಲಿತಾಂಶ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಕಿರಣ್ ಬಾಲ ೫೭೬ ಅಂಕಗಳೊಂದಿಗೆ ಶೇ. ೯೫.೮ ಫಲಿತಾಂಶವನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಂದಿನಿ ಶೇ. ೯೪ , ಮೊಹಮ್ಮದಿ ಮಯುಸ್ಕಾನ್ ಶೇ. ೯೩, ತೇಜಸ್ವಿನಿ ಶೇ ೯೨, ಮೊಹಮದ್ ಹುಸೈಬಾ ಶೇ. ೯೧, ಜೀವಿಕಾ ಶೇ. ೮೯ ಫಲಿತಾಂಶವನ್ನು ಪಡೆದಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶದಲ್ಲಿ ೩೬ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, ೧೦೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ೨೮ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರು ಅಭಿನಂದಿಸುತ್ತದೆ ಎಂದು ತಿಳಿಸಿದರು.ಉಪ ಪ್ರಾಂಶುಪಾಲ ನಾಗೇಶ್, ಸಂತೋಷ್ ರೆಡ್ಡಿ, ಗಜೇಂದ್ರ, ಜಾನಕಿರಾಮ್, ಮಂಜುನಾಥ್, ನಾಗೇಶಯ್ಯ, ಖದೀರ್ ಅಹಮದ್, ವಿನಯ್ ಕುಮಾರ್, ಸುಬ್ರತ್ ಕುಮಾರ್, ಸಂಪತ್ ಕುಮಾರ್, ಪ್ರವೀಣ್ ಕುಮಾರ್ ಸೇರಿದಂತೆ ಕಚೇರಿ ಅಧೀಕ್ಷಕ ನಾಗೇಶ್, ಆಶಾ, ರಮ್ಯ, ಉಪಸ್ಥಿತರಿದ್ದರು.