ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ಚನ್ನಪಟ್ಟಣ ಉಪಚುನಾವಣೆಯಲ್ಲಿ 72 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನ ನಡೆದಿದೆ. ಇದು ಅಭ್ಯರ್ಥಿಗಳ ಸೋಲು ಗೆಲುವಿನ ವಿಚಾರದಲ್ಲಿ ನಾನಾ ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
1951ರಲ್ಲಿ ನಡೆದ ರಾಜ್ಯದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಉತ್ತಮವಾಗಿ ನಡೆದಿತ್ತು. ಅಂದು ಶೇ.74.19ರಷ್ಟು ಮತದಾನ ನಡೆದಿದ್ದು ವಿಶೇಷ. ಅನಕ್ಷರತೆ, ಬಡತನ, ಮತದಾನದ ಬಗ್ಗೆಜ್ಞಾನವೇ ಇಲ್ಲದೆ ಇದ್ದ ಜನತೆ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಶೇ.74 ರಷ್ಟು ಮತದಾನ ಮಾಡಿರುವುದು ವಿಶೇಷವೇ ಸರಿ. 1972 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.64.2 ರಷ್ಟು ಮತದಾನನ ನಡೆದಿದ್ದನ್ನು ಹೊರತುಪಡಿಸಿದರೆ, ಚನ್ನಪಟ್ಟಣದಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನ ನಡೆದಿರುವುದು ವಿಶೇಷ.
6 ಚುನಾವಣೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ:ಚನ್ನಪಟ್ಟಣ ಕ್ಷೇತ್ರದಲ್ಲಿ 6 ಚುನಾವಣೆಗಳಲ್ಲಿ ಶೇ80ಕ್ಕಿಂತ ಹೆಚ್ಚು ಮತದಾನ ನಡೆದಿದೆ. 1978 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.80.3 ರಷ್ಟು ಮತದಾನ ನಡೆದಿದ್ದರೆ, 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.81.52 ರಷ್ಟು ಮತದಾನ ನಡೆದಿದೆ. 2013ರಲ್ಲಿ ಹಾಗೂ ತದನಂತರ ನಡೆದ 2 ಸಾರ್ವತ್ರಿಕ, ಇದೀಗ ನಡೆದ ಉಪಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ನಡೆದಿರುವುದು ವಿಶೇಷ.
ಈ ಬಾರಿ ದಾಖಲೆ ಪ್ರಮಾಣದ ಮತದಾನ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ವಾಗಿರುವುದು ಯಾರಿಗೆ ಲಾಭ ಎಂದು ಎರಡೂ ಪಕ್ಷದ ಮುಖಂಡರು ತಮ್ಮದೇ ಆದ ಆಯಾಮದಲ್ಲಿ ಲೆಕ್ಕಾಚಾರ ಹಾಕಿ ಇದು ನಮಗೇ ಲಾಭ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ದಾಖಲೆ ಮತದಾನ ಯಾರಿಗೆ ಲಾಭವಾಗಿದೆ ಎಂದು ಇತಿಹಾಸದ ಪುಟ ತಿರುವಿ ನೋಡಿದಾಗ ಕಾಂಗ್ರೆಸ್ ಮತ್ತು ಜನತಾಪರಿವಾರಕ್ಕೆ ಲಾಭವಾಗಿರುವುದು ಕಂಡು ಬರುತ್ತದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನ ನಡೆದಿದ್ದು 1978ರಲ್ಲಿ ಆ ಚುನಾವಣೆಯಲ್ಲಿ ಶೇ.80.3ರಷ್ಟು ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್(ಐ) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಡಿ.ಟಿ.ರಾಮು 32601 ಮತ ಪಡೆದು ಗೆಲುವು ಸಾಧಿಸಿದರೆ, ಇವರ ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಬಿ.ಜೆ.ಲಿಂಗೇಗೌಡ 19190, ಜನತಾಪಕ್ಷದ ಟಿ.ವಿ.ರಾಮಣ್ಣ16263, ಕಾಂಗ್ರೆಸ್(ಓ) ಅಭ್ಯರ್ಥಿ ಆರ್ .ಲಿಂಗಯ್ಯ 1578 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ್ದ ಡಿ.ಟಿ.ರಾಮು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
1994ರಲ್ಲಿ ನಡೆದವಿಧಾನಸಭಾ ಚುನಾವಣೆಯಲ್ಲಿ ಶೇ.81.52 ರಷ್ಟು ದಾಖಲೆ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಂ.ವರದೇಗೌಡ 67661 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸಾದತ್ಆಲಿಖಾನ್ 39428 ಮತ ಪಡೆದರು. ಈ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಎಂ.ವರದೇಗೌಡ28233 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.ಬಾಕ್ಸ್.............
ದಾಖಲೆ ಪ್ರಮಾಣದ ಮತದಾನದಲ್ಲಿ ಯೋಗೇಶ್ವರ್ ಒಂದು ಬಾರಿ ಗೆಲುವು ಸಾಧಿಸಿದ್ದರೆ, ಎರಡು ಬಾರಿ ಸೋಲನುಭವಿಸಿದ್ದಾರೆ. 2013ರಲ್ಲಿ ಶೇ.84.78 ರಷ್ಟು ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ 80099 ಮತಗಳನ್ನು ಸಮಾಜವಾದಿಯಿಂದ ಸ್ಪರ್ಧೆ ಮಾಡಿದ್ದ ಯೋಗೇಶ್ವರ್ ಪಡೆದುಕೊಂಡರೆ,73635 ಮತಗಳನ್ನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ ಅನಿತಾಕುಮಾರಸ್ವಾಮಿ ಪಡೆದುಕೊಂಡರು. ಈ ಚುನಾವಣೆಯಲ್ಲಿ ಯೋಗೇಶ್ವರ್ 6464 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕಡಿಮೆ ಮತದಾನ ನಡೆದಾಗ ಏನಾಗಿತ್ತು?
2023ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನಕ್ಕೂ ಈಬಾರಿಯ ಉಪ ಚುನಾವಣೆಯಲ್ಲಿ ನಡೆದಿರುವ ಮತದಾನಕ್ಕೂ ಶೇ.2.95 ರಷ್ಟು ಹೆಚ್ಚಿನ ಮತದಾನ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಉಪಚುನಾವಣೆಯಲ್ಲಿ 10575 ಮತಗಳು ಹೆಚ್ಚುವರಿಯಾಗಿ ಚಲಾವಣೆಯಾಗಿದೆ.ಬಾಕ್ಸ್............
ಚನ್ನಪಟ್ಟಣದಲ್ಲಿ ನಡೆದಿರುವ ಮತದಾನದ ವಿವರವರ್ಷಒಟ್ಟು ಮತಲಾವಣೆಗೊಂಡ ಮತಶೇಖಡ
195137,89128,11076.73195745,31331,92470.45
196250,05639,85079.60196767,16451,53776.73
197284,83953,29564.21197889,06770,40880.30
198396,06870,67174.7419851,12,18385,89177.47
19891,31,5531,01,06779.419941,43,7351,15,58481.52
19991,59,6591,10,22372.9220041,68,5021,20,10371.3
20081,83,7931,43,56078.112009(ಉ.ಚು)1,84,8641,46,10179.19
2011(ಉ.ಚು)1,87,4311,46,89178.3720131,98,7641,68,51184.78
20182,17,6061,89,01386.8620232,30,3711,96,29185.86
2024(ಉ.ಚು)2,32,8362,06,86688.8119ಕೆಆರ್ ಎಂಎನ್ 1.ಜೆಪಿಜಿಚನ್ನಪಟ್ಟಣ ಕ್ಷೇತ್ರದ ನಕ್ಷೆ
-------------------------------------