ಹಿಪ್ಪರಗಿ ಬ್ಯಾರೇಜ್‌ ನೀರು ಸಂಗ್ರಹದಲ್ಲಿ ಚೇತರಿಕೆ

KannadaprabhaNewsNetwork |  
Published : Jan 29, 2026, 03:15 AM IST
ಹಿಪ್ಪರಗಿ ಜಲಾಶಯದ ಹೊರ ನೀರಿನ ಚಿತ್ರಣ. | Kannada Prabha

ಸಾರಾಂಶ

ಜ.೬ರಂದು ಗೇಟ್ ನಂ.೨೨ರಲ್ಲಿ ಸಂಭವಿಸಿದ ಪೆನಲ್ ಅವಘಡದಿಂದಾಗಿ ೬ ಟಿಎಂಸಿ ಭರ್ತಿ ಸಾಮರ್ಥ್ಯ ಹೊಂದಿದ್ದ ಹಿಪ್ಪರಗಿ ಜಲಾಶಯದಿಂದ ಅರ್ಧಕ್ಕೂ ಹೆಚ್ಚು ನೀರು ಪೋಲಾಗಿತ್ತು. ಇದೀಗ ಬ್ಯಾರೇಜ್‌ ನೀರು ಸಂಗ್ರಹದಲ್ಲಿ ಕೊಂಚ ಚೇತರಿಕೆ ಕಂಡಿದ್ದು, ಸುಮಾರು ೪ ಟಿಎಂಸಿಯಷ್ಟು ನೀರು ಬುಧವಾರ ಸಂಗ್ರಹಗೊಂಡಿದೆ ಎಂದು ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜ.೬ರಂದು ಗೇಟ್ ನಂ.೨೨ರಲ್ಲಿ ಸಂಭವಿಸಿದ ಪೆನಲ್ ಅವಘಡದಿಂದಾಗಿ ೬ ಟಿಎಂಸಿ ಭರ್ತಿ ಸಾಮರ್ಥ್ಯ ಹೊಂದಿದ್ದ ಹಿಪ್ಪರಗಿ ಜಲಾಶಯದಿಂದ ಅರ್ಧಕ್ಕೂ ಹೆಚ್ಚು ನೀರು ಪೋಲಾಗಿತ್ತು. ಇದೀಗ ಬ್ಯಾರೇಜ್‌ ನೀರು ಸಂಗ್ರಹದಲ್ಲಿ ಕೊಂಚ ಚೇತರಿಕೆ ಕಂಡಿದ್ದು, ಸುಮಾರು ೪ ಟಿಎಂಸಿಯಷ್ಟು ನೀರು ಬುಧವಾರ ಸಂಗ್ರಹಗೊಂಡಿದೆ ಎಂದು ವರದಿಯಾಗಿದೆ.

ಸದ್ಯ ಪ್ರತಿದಿನ ೫೦೦ ಕ್ಯುಸೆಕ್‌ ಒಳಹರಿವಿದೆ. ಎಲ್ಲ ೨೨ ಗೇಟ್‌ ಸಂಪೂರ್ಣ ಮುಚ್ಚಲಾಗಿದೆ. ಈಗ ಸಂಗ್ರಹಗೊಂಡಿರುವ ನೀರು ಬೇಸಿಗೆ ಬವಣೆ ನೀಗಿಸುವಲ್ಲಿ ಅನುಕೂಲವಾಗಬೇಕಾದರೆ ಹಿಪ್ಪರಗಿ ಬ್ಯಾರೇಜ್‌ನ ಹಿನ್ನೀರಿನಲ್ಲಿ ಬರುವಂತಹ ಗ್ರಾಮ ಹಾಗೂ ಪಟ್ಟಣಗಳ ಜನತೆ ಈಗಿನಿಂದಲೇ ನೀರು ಮಿತವ್ಯಯವಾಗಿ ಬಳಕೆ ಮಾಡಿದರೆ ಮಾತ್ರ ಸಾಧ್ಯವಾಗುವುದು. ಇಲ್ಲವಾದಲ್ಲಿ ಬೇಸಿಗೆ ಮಧ್ಯಂತರದ ದಿನಗಳಲ್ಲಿ ಭಾರೀ ನೀರಿನ ಹಾಹಾಕಾರ ಎದುರಿಸುವ ಪರಿಸ್ಥಿತಿ ಎದುರಾಗಬಹುದೆಂಬುದು ಅನುಭವಿಗಳ ಅಂಬೋಣ ಎಂದು ಹೇಳಿದರು.

ಮಹಾ ನೀರಿಗೆ ಮೌನ: ನೀರು ಪೋಲಾಗಿ ೨೫ ದಿನಗಳೇ ಕಳೆದರೂ ಯಾವುದೇ ಜನಪ್ರತಿನಿಧಿ ಅಥವಾ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ಅಥವಾ ಯಾವುದೇ ಲಿಖಿತ ಮನವಿ ಮಾಡುವಲ್ಲಿ ಮುಂದಾಗದಿರುವುದು ವಿಪರ್ಯಾಸ.

ಘಟನೆ ಸಂದರ್ಭ ರಾಜಕೀಯ ಹೋರಾಟ ನಡೆಸಿದ್ದ ಜನಪ್ರತಿನಿಧಿಗಳು ಇದೀಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಆಡಳಿತ ಹಾಗೂ ವಿಪಕ್ಷಗಳ ಜನಪ್ರತಿನಿಧಿಗಳು ಬೇಸಿಗೆಯ ಕೊನೆಯ ದಿನಗಳಲ್ಲಿ ನೀರಿನಲ್ಲಿ ರಾಜಕೀಯ ನಡೆಸದೆ. ಶೀಘ್ರವೇ ಒಂದಾಗಿ ಮಹಾ ಸರ್ಕಾರದೊಂದಿಗೆ ಮಾತುಕತೆ ಮೂಲಕ ರಾಜ್ಯಕ್ಕೆ ನೀರು ಬಿಡುಗಡೆಗೆ ಮಹತ್ವದ ನಿರ್ಧಾರದ ಕ್ರಮ ಕೈಗೊಂಡಲ್ಲಿ ಜನತೆ ಹಾಗೂ ರೈತರು ನಿರಾಳವಾಗಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ದಿನದಲ್ಲಿ 37 ಜನರಿಗೆ ನಾಯಿ ಕಡಿತ, ಬಾಲಕಿ ಗಂಭೀರ - 4 ನಗರಗಳಲ್ಲಿ ಬೀದಿ ನಾಯಿ, ಹುಚ್ಚು ನಾಯಿ ಕಡಿತ
ವಿಧಾನಸಭೆಯಲ್ಲಿ ಗಂಭೀರ ಆರೋಪ - ಮತ್ತೆ ಟೆಲಿಫೋನ್‌ ಕದ್ದಾಲಿಕೆ ಗದ್ದಲ!