ಸಿ.ಕೆ. ನಾಗರಾಜ ಹೊಸಪೇಟೆ
ಇಂತಹ ಹಂಪಿಯ ಕಲ್ಲಿನ ರಥಕ್ಕೆ ವಿನೂತನ ರೀತಿಯಲ್ಲಿ ವೀಕ್ಷಿಸಲು ಈಗ ಗ್ಲಾಸ್‌ನ್ನು ಅಳವಡಿಸಿ ಈ ಮೂಲಕ ಕಲ್ಲಿನ ರಥ ವೀಕ್ಷಿಸಿದರೆ, ಕಲ್ಲಿನ ರಥದ ಮೇಲೆ ಈ ಮೊದಲಿದ್ದ ಪುರಾತನ ಗೋಪುರ ಕಾಣುವಂತೆ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಇದು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಸ್ಮಾರಕಗಳಿಗೆ ಹಳೆಯ ಚಿತ್ರ ಹೊಂದಿಸಿ ಮೂಲ ಸ್ವರೂಪದ ಸ್ಮಾರಕ ತೋರಿಸುವ ವಿಶಿಷ್ಟ ಪ್ರಯತ್ನ ಎಎಸ್‌ಐ (ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ) ಹಂಪಿ ವೃತ್ತವು ಹಾಗೂ ರೆಮಿನಿಸಿಂಗ್ ಹಿಸ್ಟರಿ ಫೌಂಡೇಶನ್ ಸಹಯೋಗದಲ್ಲಿ ಮಾಡಲಾಗಿದ್ದು, ಐತಿಹಾಸಿಕ ಸ್ಮಾರಕ ಕಲ್ಲಿನ ರಥದ ಮೂಲ ಸ್ವರೂಪ ಅನಾವರಣಗೊಳಿಸಲಾಗಿದೆ.ಕಲ್ಲಿನ ರಥದ ಮೇಲಿನ ಗೋಪುರ ಶಿಥಿಲಗೊಂಡು ಬಹಳ ಹಿಂದೆಯೇ ಬಿದ್ದು ಹೋಗಿದೆ. ಬಿದ್ದು ಹೋಗಿರುವ ಗೋಪುರ ಭೌತಿಕವಾಗಿ ಪುನರ್ ನಿರ್ಮಿಸಲು ಸಾಧ್ಯವಾಗದ ಕಾರಣ ಶಿಥಿಲಗೊಂಡ ಸ್ಮಾರಕ ಮೂಲ ಸ್ವರೂಪದಲ್ಲಿ ಕಲ್ಪಿಸಿಕೊಳ್ಳಲು ನೆರವಾಗುವ ಪಾರದರ್ಶಕ ಫಲಕದ ಮೇಲಿನ ಪುನರುಜ್ಜೀವನ ಚಿತ್ರಕಲೆ ಯೋಜನೆಯ ಮೂಲಕ ಕಲ್ಲಿನ ರಥವನ್ನು ದೇಶದಲ್ಲೇ ಮೊಟ್ಟಮೊದಲನೇ ಬಾರಿಗೆ ಮರುಸೃಷ್ಟಿಸಲಾಗಿದೆ. ಕಲ್ಲಿನ ರಥದ ಮೂಲ ಗೋಪುರವನ್ನು ಗಾಜಿನ ಮೂಲಕ ವೀಕ್ಷಿಸಿದಾಗ ಅದು ಈ ಹಿಂದೆ ಕಲ್ಲಿನ ರಥದ ಮೇಲೆ ಗೋಪುರ ಇರುವಂತೆ ಕಾಣುವಂತೆ ಮಾಡಿರುವುದು ಎಎಸ್‌ಐನ ಹೆಗ್ಗಳಿಕೆಯಾಗಿದೆ.
ಹಂಪಿಯ ಕಲ್ಲಿನ ರಥದ ಐತಿಹಾಸಿಕ ಛಾಯಾಚಿತ್ರ ಬಳಕೆ: ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಡಿಜಿಟಲ್ ರೇಖಾಚಿತ್ರ ಹೊಂದಿರುವ ಈ ಕಲಾಕೃತಿ ಕೇವಲ ಕಲ್ಪನೆಯಲ್ಲ; ಬದಲಿಗೆ ಐತಿಹಾಸದ ಪುಸ್ತಕಗಳಲ್ಲಿ ಲಭ್ಯವಿರುವ ಪುರಾತನ ದಾಖಲೆ, ಹಳೆಯ ಛಾಯಾಚಿತ್ರ ಮತ್ತು ಇತರ ಲಭ್ಯ ಸಾಕ್ಷ್ಯಗಳನ್ನು ಆಧರಿಸಿ ರೂಪಿಸಲಾಗಿದೆ. 1867- 68 ರಲ್ಲಿ ಎಡ್ಮಂಡ್ ಡೇವಿಡ್ ಲಿಯಾನ್ ಸೆರೆಹಿಡಿದ ಐತಿಹಾಸಿಕ ಛಾಯಾಚಿತ್ರ ಈ ಫಲಕದಲ್ಲಿ ಬಳಸಿಕೊಳ್ಳಲಾಗಿದೆ.
ಕಲ್ಲಿನ ರಥ ನೋಡಿದ ಅನೇಕ ಹಿರಿಯರು ಇದು ಪೂರ್ಣ ರಥವಲ್ಲ. ಇದರ ಮೇಲಿನ ಗೋಪುರ ಬಿದ್ದು ಹೋಗಿದೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಹಳೆಯ ಛಾಯಾಚಿತ್ರದ ಆಧಾರದ ಮೇಲೆ ಇದನ್ನು ಸಿದ್ದಪಡಿಸಲಾಗಿದ್ದು, ಸಾರ್ವಜನಿಕರಿಗೆ ಮೂಲ ಕಲ್ಲಿನ ರಥ ಹೇಗಿತ್ತು ಎಂಬುದನ್ನು ತೋರಿಸಲು ವಿನೂತನ ರೀತಿಯಲ್ಲಿ ಗ್ಲಾಸ್ ಅಳವಡಿಸಿ ಪ್ರವಾಸಿಗರು ಕಲ್ಲಿನ ರಥ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ.
ಹಂಪಿಯ ಮೂಲ ರಥದ ಗೋಪುರ ಸೇರಿದಂತೆ ಇತರೆ ಸ್ಮಾರಕಗಳ ಹಳೆಯ ಛಾಯಾಚಿತ್ರ ಲಭ್ಯವಿದ್ದರೆ ಅವುಗಳ ಮೂಲ ಸ್ವರೂಪ ಮರುಸೃಷ್ಟಿಸಿ ಪ್ರದರ್ಶಿಸಬಹುದು ಎನ್ನುವುದು ಈಗ ಹಂಪಿಯ ಕಲ್ಲಿನ ರಥ ನೋಡಿದಾಗ ಪ್ರತಿಯೊಬ್ಬರಿಗೂ ಅನಿಸುತ್ತದೆ ರೆಮಿನಿಸಿಂಗ್ ಹಿಸ್ಟರಿ ಫೌಂಡೇಶನ್ ಸಲಹೆಗಾರ ಪರ್ಣವಿ ಬಣಗಾರ್ ತಿಳಿಸಿದ್ದಾರೆ.