ರಾಮನಗರ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 300 ಪಶು ವೈದ್ಯರು ಮತ್ತು 1 ಸಾವಿರ ಡಿ - ಗ್ರೂಪ್ ನೌಕರರನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
ಕೋಳಿ ಸಾಕಾಣಿಕೆದಾರರು ಮತ್ತು ಮಾರಾಟಗಾರರ ನಡುವೆ ಸಾಕಾಣಿಕೆ ವೆಚ್ಚ ಹೆಚ್ಚಳ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೋಳಿ ಸಾಕಾಣಿಕೆದಾರರು ಪ್ರತಿ ಕೆಜಿಗೆ 10 ರು. ಸಾಕಾಣಿಕೆ ವೆಚ್ಚ ಕೇಳುತ್ತಿದ್ದು, ನಾವು ಮಾತುಕತೆ ನಡೆಸಿದರು ಫಲಕಾರಿಯಾಗಿಲ್ಲ. ಇಬ್ಬರಲ್ಲಿ ಹೊಂದಾಣಿಕೆಯಾದರೆ ಸಂತೋಷ. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
23ಕೆಆರ್ ಎಂಎನ್ 3.ಜೆಪಿಜಿಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.