ಕನ್ನಡಪ್ರಭ ವಾರ್ತೆ,ಚಾಮರಾಜನಗರ
ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಯುವ ಜನತೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಬಲಿಷ್ಟಗೊಳಿಸು ಮುಂದಾಗಬೇಕು ಎಂದು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಮಹೇಶ್ ತಿಳಿಸಿದರು.ನಗರದ ರೋಟರಿ ಭವನದಲ್ಲಿ ರೋಟರಿ ಸಿಲ್ಕ್ ಸಿಟಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಸಂಜೀವಿನಿ ಟ್ರಸ್ಟ್ ಸಹಯೋಗದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ೫೦ಕ್ಕು ಹೆಚ್ಚು ಭಾರಿ ರಕ್ತದಾನ ಮಾಡಿದ ಇಬ್ಬರು ರಕ್ತದಾನಿಗಳಾದ ಮಹದೇವಪ್ಪ, ಎಚ್.ಎಂ. ಅಜಯ್ ಅವರನ್ನು ಸನ್ಮಾನಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯು ಜಿಲ್ಲೆಯಲ್ಲಿ ಸದೃಢವಾಗಿ ಸಂಘಟನೆಯಾಗುತ್ತಿದೆ. ಇನ್ನು 1 ವರ್ಷದ ಅವಧಿಯಲ್ಲಿ ರೆಡ್ ಕ್ರಾಸ್ ಭವನ ಲೋಕಾರ್ಪನೆಗೊಳ್ಳಲಿದೆ. ಸಹಾಯ ಮಾಡುವ ಮನಸ್ಸು ಬಹಳಷ್ಟಿವೆ. ಸೇವೆ ಮಾಡುವ ಹೃದಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗಬೇಕಾಗಿದೆ. ರಕ್ತದಾನ ಶಿಬಿರ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ತರಬೇತಿಯನ್ನು ನೀಡಿ, ಇನ್ನು ಹೆಚ್ಚಿನ ರೀತಿಯಲ್ಲಿ ಸಂಸ್ಥೆಯನ್ನು ಬೆಳೆಸಲು ರೋಟರಿ ಸಿಲ್ಕ್‌ಸಿಟಿ ಸಹಕಾರವನ್ನು ಪಡೆದುಕೊಳ್ಳುವುದಾಗಿ ತಿಳಿಸಿದರು. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರನ್ನು ಹಾರೈಕೆ ಮಾಡಲು ರಚನೆಗೊಂಡು ಯುವರೆಡ್ ಕ್ರಾಸ್ ಸಂಸ್ಥೆಯ ತನ್ನ ಸೇವೆಯ ಮೂಲಕ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ಇಂಥ ಸಂಸ್ಥೆಯು ಪ್ರಪಂಚದಾದ್ಯಂತ ತನ್ನದೇ ಆದ ವಿಶಿಷ್ಟ ಸೇವೆಯ ಮೂಲಕ ಜನರನ್ನು ತಲುಪಿದೆ. ಮೂಲ ಉದ್ದೇಶದ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದು, ಸ್ವಚ್ಚತೆ ಮತ್ತು ಹಾರೈಕೆ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ ಎಂದರು. ರಕ್ತದಾನಿಗಳಾದ ಮಹದೇವಪ್ಪ ಮತ್ತು ಎಚ್.ಎಂ. ಅಜಯ್ ಸನ್ಮಾನ ಸ್ವೀಕರಿಸಿ ಮಾತನಾಡಿದ, ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ರಕ್ತದಾನ ಎನ್ನವುದಕ್ಕಿಂತ ಸೇವೆ ಮುಖ್ಯ. ರಕ್ತ ನೀಡುವ ಮೂಲಕ ಒಂದು ಅಮೂಲ್ಯವಾದ ಜೀವವನ್ನು ಉಳಿಸಿದ ತೃಪ್ತಿ ಸಿಗುತ್ತದೆ. ಹೀಗಾಗಿ ಯುವಕರು 3 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು.ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಅಕ್ಷಯ್, ಕಾರ್ಯದರ್ಶಿ ಮಾಣಿಕ್ಯ ಚಂದ್ ಸಿ. ರವಿ, ವಲಯ ಪ್ರತಿನಿಧಿ ಚೈತನ್ಯ ಜಿ ಹೆಗಡೆ, ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಡಿ.ಪಿ. ವಿಶ್ವಾಸ್, ಮುರುಗೇಂದ್ರಸ್ವಾಮಿ, ಪಿ. ರಾಜು, ಪ್ರಶಾಂತ್, ಸಂಜೀವಿನಿ ಟ್ರಸ್ಟ್‌ನ ಸತೀಶ್‌ಕುಮಾರ್, ಸದಸ್ಯರಾದ ರಾಜು ಎಸ್‌ಪಿಕೆ. ಡಾ. ಪರಮೇಶ್ವಪ್ಪ, ಸುರೇಶ್‌ಗೌಡ,ವಿರಾಟ್ ಶಿವು, ಅಶ್ವಿನ್ ಮೊದಲಾದವರಿದ್ದರು.