ಕನ್ನಡಪ್ರಭ ವಾರ್ತೆ ಕಾರವಾರಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಹುದ್ದೆಯಿಂದ ಬಿಡುಗಡೆ ಮಾಡಿದ್ದ ಪದಾಧಿಕಾರಿಗಳನ್ನು ಮರು ನಿಯೋಜನೆ ಮಾಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಆದೇಶ ಹೊರಡಿಸಿದ್ದಾರೆ.ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಗಜಾನನ ನಾಯ್ಕ, ಶಕ್ತಿ ಕೇಂದ್ರದ ಪ್ರಮುಖ ಬಾಬು ಬಾಂದೇಕರ, ತಾಲೂಕು ಮಾಧ್ಯಮ ಪ್ರಕೋಷ್ಠದ ಸಂಚಾಲಕರ ಕೆ.ಟಿ. ಹೆಗಡೆ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾನು ಪಾಂಡ್ರಮಿಶೆ, ಜಿಲ್ಲಾ ವಿಶೇಷ ಆಮಂತ್ರಿತ ಗಣಪತಿ ಆರ್. ಗಾಂವಕರ ಮರು ನಿಯೋಜನೆಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಹುದ್ದೆಯಿಂದ ಬಿಡುಗಡೆ ಮಾಡಿದ್ದ ಪದಾಧಿಕಾರಿಗಳನ್ನು ಮರು ನಿಯೋಜನೆ ಮಾಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಆದೇಶ ಹೊರಡಿಸಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಗಜಾನನ ನಾಯ್ಕ, ಶಕ್ತಿ ಕೇಂದ್ರದ ಪ್ರಮುಖ ಬಾಬು ಬಾಂದೇಕರ, ತಾಲೂಕು ಮಾಧ್ಯಮ ಪ್ರಕೋಷ್ಠದ ಸಂಚಾಲಕರ ಕೆ.ಟಿ. ಹೆಗಡೆ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾನು ಪಾಂಡ್ರಮಿಶೆ, ಜಿಲ್ಲಾ ವಿಶೇಷ ಆಮಂತ್ರಿತ ಗಣಪತಿ ಆರ್. ಗಾಂವಕರ ಮರು ನಿಯೋಜನೆಗೊಂಡಿದ್ದಾರೆ. ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ರವಿ ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಠದ ಸುರೇಶ ತಿಮ್ಮಪ್ಪ ನಾಯ್ಕ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಜಿಲ್ಲಾ ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಮುಕುಂದ ಮಂಜುನಾಥ ನಾಯ್ಕ, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ ಈಶ್ವರ ನಾರಾಯಣ ನಾಯ್ಕ ಅವರನ್ನು ಮರು ನಿಯೋಜನೆಗೊಳಿಸಿ ಆದೇಶ ಹೊರಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.