ಕನ್ನಡಪ್ರಭ ವಾರ್ತೆ, ತುಮಕೂರು
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕೆ.ನಾಗರಾಜು ಅವರು ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯುನ ಅಧಿಕೃತ ಅಭ್ಯರ್ಥಿ. ಇವರು ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಪಾರದರ್ಶಕವಾದ ಮಾದರಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಎನ್‌ಡಿಎ ಜೊತೆ ಜೆಡಿಯು ಮೈತ್ರಿ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಟೇಲ್, ಮೈತ್ರಿ ಇಲ್ಲ, ಅವರ ಬೆಂಬಲ ಕೋರುತ್ತೇವೆ, ಕೊಟ್ಟರೆ ಬೆಂಬಲ ಪಡೆಯುತ್ತೇವೆ. ಇಲ್ಲವಾದರೆ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತದೆ ಎಂದರು. ಈಗಿನ ಚುನಾವಣೆ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಬೇಸರವಾಗಿದೆ. ಆದರೆ ಸರಿಮಾಡುವವರು ಯಾರು?ನಾವೆಲ್ಲರೂ ಸರಿಮಾಡಬೇಕು. ಮಾಡಬೇಕು ಎಂಬ ಆಲೋಚನೆ ಮಾಡಿ ಮುಂದುವರೆದರೆ ಸಾಧ್ಯವಾಗುತ್ತದೆ. ನಮಗೆ ಎಂತಹ ಭವಿಷ್ಯ ಬೇಕು ಎಂದು ನಾವು ಚಿಂತನೆ ಮಾಡದೆ ಇನ್ಯಾರು ಮಾಡಬೇಕು?ಪ್ರಸ್ತುತ ರೀತಿಯ ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯ ಸುಧಾರಣೆಯಬಗ್ಗೆ ಎಲ್ಲರಲ್ಲಿಯೂ ಆಲೋಚನೆ ಬರಬೇಕು ಎಂದುಆಶಿಸಿದರು.ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಅವರ ಜನ್ಮದಿನ ಅಕ್ಟೋಬರ 1, ಮೃತಪಟ್ಟ ದಿನ ಡಿಸೆಂಬರ್ 12. ಹೀಗಾಗಿ ಜನ್ಮದಿನ ಆಚರಣೆ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಈ ತಿಂಗಳ 12 ರಂದು ನಗರದ ಕನ್ನಡ ಭವನದಲ್ಲಿಚಿಂತನ- ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರೆ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ವಿವಿಧ ಕ್ಷೇತ್ರಗಳ ಸಾಧಕರು, ರಾಜಕೀಯ ನಾಯಕರು ಭಾಗವಹಿಸುವರು ಎಂದರು.
ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ಬೇಕಾಗಿರುವ ದಾಖಲಾತಿ, ನೋಂದಣಿ ಪ್ರಕ್ರಿಯೆ ಬಗ್ಗೆ ಕ್ಷೇತ್ರದೆಲ್ಲೆಡೆ ಅರಿವು, ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿ ನಂತರ ಮಹಿಮಾ ಪಟೇಲ್‌ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿಯವರನ್ನು ಭೇಟಿ ಮಾಡಿ, ಈ ಬಾರಿ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಿದರು. ಮತದಾರರ ಪಟ್ಟಿಗೆ ನೋಂದಣಿ ಪ್ರಕ್ರಿಯೆಯಲ್ಲಿ ಪದವಿಧರರಿಗೆ ಸ್ಪಂದಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಕೋರಿದರು. ಈ ವೇಳೆ ಜೆಡಿಯು ಅಭ್ಯರ್ಥಿ ಡಾ.ನಾಗರಾಜು ಹಾಗೂ ಮುಖಂಡರು ಹಾಜರಿದ್ದರು.