ಶಿವಲಿಂಗಮ್ಮಗೆ ವಾತ್ಸಲ್ಯ ಮನೆ ಹಸ್ತಾಂತರ

KannadaprabhaNewsNetwork | Published : Mar 27, 2025 1:04 AM

ಸಾರಾಂಶ

ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುತ್ತಿರುವ ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭುಗತಹಳ್ಳಿಯ ಶಿವಲಿಂಗಮ್ಮ ಅವರಿಗೆ ಮನೆ ಹಸ್ತಾಂತರಿಸಿದೆ.ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಅವರು, ಗ್ರಾಮೀಣ ಪ್ರದೇಶದ ವಸತಿ ರಹಿತ ಬಡವರನ್ನು ಗುರುತಿಸಿ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಂತೆ ವಾತ್ಸಲ್ಯ ಮನೆಯನ್ನು ನಿರ್ಮಿಸಿ ನೆಮ್ಮದಿಯಿಂದ ಜೀವನ ನಡೆಸುವ ವಾತ್ಸಲ್ಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.ಮೈಸೂರಿನ ಭುಗತಹಳ್ಳಿ ಗ್ರಾಮದ ಬಡ ವಯೋವೃದ್ಧೆ ಶಿವಲಿಂಗಮ್ಮ ಅವರಿಗೆ 1.50 ಲಕ್ಷ ರೂ. ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುತ್ತಿರುವ ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 35 ಮಂದಿ ಬಡವರಿಗೆ ವಾತ್ಸಲ್ಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.ವಾತ್ಸಲ್ಯ ಮನೆಯ ನಿವಾಸಿಗಳಾದ ಶಿವಲಿಂಗಮ್ಮ ಅವರು ಮನೆಗೆ ಧರ್ಮಸ್ಥಳ ಯೋಜನೆಯಿಂದ ಪ್ರತೀ ತಿಂಗಳು 1000 ರೂ. ಮಾಸಾಶನ ನೀಡುತ್ತಾ ಬಂದಿದ್ದು ಈಗ ಹೊಸದಾಗಿ ಮನೆ ನಿರ್ಮಿಸಿಕೊಟ್ಟು ನನ್ನ ಕುಟುಂಬಕ್ಕೆ ಹೊಸ ಬೆಳಕು ತಂದುಕೊಡುವುದರ ಜೊತೆಗೆ ನಾನು ನೆಮ್ಮದಿಯಿಂದ ಜೀವನ ನಡೆಸಲು ಆಶ್ರಯ ಮಾಡಿಕೊಟ್ಟಿರುವುದಕ್ಕೆ ನನ್ನ ಬದುಕಿನಲ್ಲಿ ಹೊಸ ಜೀವನವನ್ನೇ ತಂದು ಕೊಟ್ಟಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅರ್ಹತೆ ಇರುವ ಬಡಕುಟುಂಬಗಳನ್ನು ಗುರುತಿಸಿ ವಾತ್ಸಲ್ಯ ಮನೆಗಳ ನಿರ್ಮಾಣ ಮತ್ತು ನಿರ್ಗತಿಕರಿಗೆ ಮಾಸಾಶನ ವಿತರಣೆ, ವಾತ್ಸಲ್ಯ ಕಿಟ್ ವಿತರಣೆ ಮಾಡುವುದದೊಂದಿಗೆ ವಯೋವೃದ್ಧರ ಯೋಗಕ್ಷೇಮವನ್ನು ಕೂಡ ನೋಡಿಕೊಳ್ಳಲಾಗುತ್ತಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ಭೀಮರಾಜು, ಜಿಪಂ ಸದಸ್ಯರಾದ ಪ್ರದೀಪ್ ಕುಮಾರ್, ಊರಿನ ಮುಖಂಡರಾದ ಶಿವಣ್ಣ, ಕ್ಷೇತ್ರ ಯೋಜನಾಧಿಕಾರಿ ಪಿ. ಶಶಿರೇಖಾ, ಮೂಕಾಂಬಿಕ ಒಕ್ಕೂಟದ ಅಧ್ಯಕ್ಷೆ ಮಮತಾ, ಮೇಲ್ವಿಚಾರಕ ಜಯಕರಶೆಟ್ಟಿ ಸೇರಿ ಅನೇಕ ಸೇವಾಪ್ರತಿನಿಧಿಗಳು ಇದ್ದರು.

Share this article