ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಶನಿವಾರ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಸಂಸ್ಥೆ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಯಲ್ಲಿ ಪ್ರಾಯಶ್ಚಿತ ಎನ್ನುವ ಪದ ಇದೆ. ಯಾರು ಪಾಪ ಮಾಡುತ್ತಾರೋ ಅವರು ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಡಾ.ಅಂಬೇಡ್ಕರ್ ಅವರಿಗೆ ಯಾರು ಅನ್ಯಾಯ ಮಾಡಿದರು ಎಂದು ಎಳೆಎಳೆಯಾಗಿ ಬಿಡಿಸಿದರು.
ಆಗ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಅಂಬೇಡ್ಕರ್ ರವರನ್ನು ಸಂವಿಧಾನ ರಚನಾ ಸಮಿತಿಯಲ್ಲಿಯೇ ಬರದಂತೆ ನೋಡಿದರು. ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂಬೇಡ್ಕರ್ ಅವರು ದಲಿತ ಸಮುದಾಯದ ಸರ್ವ ಸಮ್ಮತ ನಾಯಕರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಸಂವಿಧಾನ ರಚನಾ ಸಮಿತಿಯಿಂದ ಹೊರಗಿಡುವ ಪ್ರಯತ್ನ ಮಾಡಿದ್ದರು. ಪೂನಾ ಫ್ಯಾಕ್ಟ್ ಅಂತ ಒಪ್ಪಂದ ಆಗಿತ್ತು. ಅಂಬೇಡ್ಕರ್ ಅವರು ಎಸ್ಸಿ ಸಮುದಾಯದ ಧ್ವನಿಯಾಗಿ ನಿಂತಿದ್ದರು. ಫೂನಾ ಫ್ಯಾಕ್ಸ್ ಕುರಿತು ಗಾಂಧಿಜಿ ಜೊತೆ ಚರ್ಚಿಸಿ ದಲಿತರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯಲ್ಲಿ ಇರದೇ ಇದ್ದರೆ ಏನಾಗುತ್ತಿತ್ತು ಎಂದು ಪಶ್ನಿಸಿದರು.ಪಶ್ಚಾತಾಪಕ್ಕಾಗಿ ಸಂವಿಧಾನ:
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ಅದಕ್ಕೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಕಾರಣ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯನ್ನು ದೇಶದ ಜನರು ಹೀನಾಯವಾಗಿ ಸೋಲಿಸಿದರು. ಸಂವಿಧಾನದ ಮೂಲ ಆಶಯ ಬದಲು ಮಾಡಲು ಮುಂದಾದಾಗ ಸುಪ್ರೀಂ ಕೋರ್ಟ್ ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ದಿನ ತಡವಾಗಿದ್ದರೆ, ಇಂದಿರಾ ಗಾಂಧಿ ರಾಜೀನಾಮೆ ಕೊಡಬೇಕಿತ್ತು. ಅವರ ವಿರುದ್ಧ ಆದೇಶ ಬಂದಾಗ ರಾತ್ರೋ ರಾತ್ರಿ ತುರ್ತು ಪರಿಸ್ಥಿತಿ ಹೇರಿದರು. ಕಾಂಗ್ರೆಸ್ಸಿಗರು ಅಲ್ಪ ಸಂಖ್ಯಾತರ ಬಗ್ಗೆ ಬಹಳ ಮಾತನಾಡುತ್ತಾರೆ. ಅಲ್ಪಸಂಖ್ಯಾತರು ಮತ್ತು ಎಸ್ಸಿ, ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ. ಶಾಭಾನು ಪ್ರಕರಣದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ಮೊದಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಪ್ಪಿದ್ದರು. ಆದರೆ, ಮುಸ್ಲಿಂ ಧರ್ಮ ಗುರುಗಳು ಬಂದು ನಾವು ಷರಿಯತ್ ಕಾನೂನು ಪಾಲನೆ ಮಾಡುತ್ತೇವೆ. ನೀವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿದರೆ, ನಾವು ಒಪ್ಪುವುದಿಲ್ಲ ಎಂದು ಬೆದರಿಕೆ ಹಾಕಿದರು. ರಾಜೀವ್ ಗಾಂಧಿ ಅದನ್ನು ಒಪ್ಪಿ ಸುಪ್ರೀಂ ಆದೇಶ ಪಾಲನೆ ಮಾಡಲಿಲ್ಲ ಎಂದರು.
ಸಂವಿಧಾನದಲ್ಲಿ ಬಸವ ತತ್ವ:
ಕಾಂಗ್ರೆಸ್‌ಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇಲ್ಲ. ಸಂವಿಧಾನದ ಬಗ್ಗೆ ಕಾಂಗ್ರೆಸ್ ಮಾತನಾಡುವುದು ದೆವ್ವದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತೆ. ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಎಂದೇ ಬಿಂಬಿತವಾಗಿದೆ. ಈಗಲೂ ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತೇವೆ ಎಂದರೆ, ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿಸಬೇಕಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಎಲ್ಲರೂ ಮುಕ್ತವಾಗಿ ಇರಲು ಸಾಧ್ಯ. ಚೈನಾ ದೇಶ ನಮಗಿಂತ ಆರ್ಥಿಕವಾಗಿ ಪ್ರಬಲವಾಗಿದೆ. ಆದರೆ, ಸ್ವಾತಂತ್ರ್ಯ ಇಲ್ಲ. ಮಾತನಾಡುವ ಹಕ್ಕಿಲ್ಲ. ಸಂವಿಧಾನ ರಕ್ಷಣೆಯನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಶ್ಚಾತಾಪ ಪಡುವ ಸಮಯ ಬರುತ್ತದೆ. ಈ ಸಂದೇಶವನ್ನು ಎಲ್ಲರ ಮನೆಗಳಿಗೂ ತಲುಪಿಸಬೇಕು ಎಂದು ಹೇಳಿದರು.