ರೋಣ: ತಾಲೂಕಿನ ಹಿರೇಹಾಳ ಗ್ರಾಪಂನ 2 ನೇ ಅವಧಿಗೆ ತೆರುವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಗ್ರಾಪಂ ಸಭಾ ಭವನದಲ್ಲಿ ಜರುಗಿದ ಚುನಾವಣೆಯಲ್ಲಿ ಗ್ರಾಪಂ ನೂತನ ಅಧ್ಯಕ್ಷರಾಗಿ ರೇಖಾ.ಎಸ್.ಪ್ಯಾಟಿ ಅವಿರೋಧವಾಗಿ ಆಯ್ಕೆಗೊಂಡರು.
ನಿಕಟಪೂರ್ವ ಅಧ್ಯಕ್ಷೆ ಶರಣವ್ವ ಗುಡಿಮನಿ ರಾಜಿನಾಮೆಯಿಂದ ತೆರುವಾದ ಸ್ಥಾನಕ್ಕೆ ಬಳಗೋಡ ಗ್ರಾಪಂ ಸದಸ್ಯ ರೇಖಾ ಪ್ಯಾಟಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.ಇದರಿಂದ ಹಿರೇಹಾಳ ಗ್ರಾಪಂ ಅಧ್ಯಕ್ಷರಾಗಿ ರೇಖಾ ಪ್ಯಾಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಪಂ ಇಒ ಚಂದ್ರಶೇಖರ ಕಂದಕೂರ ಘೋಷಿಸಿದರು.
ಸಹಾಯಕ ಚುನಾವಣಾಧಿಕಾರಿಯಾಗಿ ದೇವರಾಜ ಕಾರ್ಯ ನಿರ್ವಹಿಸಿದರು. ಪಿಡಿಒ ಬಿ.ಎಸ್. ದಳವಾಯಿ ಇದ್ದರು.ಗ್ರಾಪಂ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರೇಖಾ.ಎಸ್. ಪ್ಯಾಟಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸರ್ಕಾರದ ಅನುದಾನ ಸದ್ಬಳಕೆಯಾಗುವಲ್ಲಿ, ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ,ಜನತೆಯು ಯಾವುದೇ ಸಮಸ್ಯೆ ಎದುರಿಸದಂತೆ ಕಾರ್ಯ ನಿರ್ವಹಿಸಲಾಗುವದು. ಜನತೆ ನಮ್ಮ ಮೇಲಿಟ್ಟ ಭರವಸೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ, ಸಕಾಲಕ್ಕೆ ಜನತೆಗೆ ಸೌಕರ್ಯ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಲಾಗವುದು ಎಂದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ನೀಲಪ್ಪ ತಳಬಟ್ಟಿ, ಸದಸ್ಯರಾದ ಇಮಾಮಸಾಬ್ ಕದಡಿ, ಕರಿಯಪ್ಪ ಮಾದರ, ನಿರ್ಮಲಾ ಭೀಮಪ್ಪನವರ, ರಮೇಶ ವಕ್ಕರ, ಜಗದೀಶ ಮಡಿವಾಳರ, ಯಲ್ಲವ್ವ ಭಜಂತ್ರಿ, ಮಲ್ಲವ್ವ ಗಣಾಚಾರಿ, ಶಿವಲೀಲಾ ಗೌಡರ, ಶರಣಪ್ಪ ಮಾರನಬಸರಿ, ಶೋಭಾ ಉಮಚಗಿ, ನಿಂಗವ್ವ ಬೇವಿನಗಿಡದ, ಲಂಕೇಶ ಓಲೆಕಾರ, ಶರಣಪ್ಪ ಪ್ಯಾಟಿ, ಮಲ್ಲನಗೌಡ ಗೌಡರ, ಶರಣಪ್ಪ ಗುದ್ನೆನ್ನವರ, ಉಮೇಶ ತುಪ್ಪದ, ಗ್ರಾಪಂ ಮಾಜಿ ಸದಸ್ಯ ಭೀಮಪ್ಪ ಮಾದರ, ನೀಲಪ್ಪ ಕುರಹಟ್ಟಿ, ಹನಮಂತಗೌಡ ಪರ್ವತಗೌಡ್ರ, ಶಿವಾನಂದ ಮಡಿವಾಳರ, ಕುಮಾರ ಬೇವುನಗಿಡದ, ಬಸಪ್ಪ ಗಾಣಿಗೇರ ಸೇರಿದಂತೆ ಮುಂತಾದವರಿದ್ದರು.