ಮೊಬೈಲ್‌ ಪರಿಣಾಮ ದೂರ ಸರಿಯುತ್ತಿರುವ ಸಂಬಂಧ: ಹಿರೇಮಠ

KannadaprabhaNewsNetwork |  
Published : Mar 28, 2025, 12:35 AM IST
27ಡಿಡಬ್ಲೂಡಿ9ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಿ.ಎಸ್. ವಾಣಿಜ್ಯ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ವಿವಿಧ ದತ್ತಿ ಉಪನ್ಯಾಸದಲ್ಲಿ ಕಲಾವಿದ ಶಂಬಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಬರೀ ಆಧುನಿಕ ಜೀವನದ ಬೆನ್ನು ಬಿದ್ದಿದೆ.ಇದರಿಂದ ಸಂಬಂಧಗಳು ಹಳಸಿ ಹೋಗುತ್ತಿರುವುದು ಬೇಸರದ ಸಂಗತಿ

ಧಾರವಾಡ: ಪ್ರಸ್ತುತ ಯವ ಜನಾಂಗ ಬರೀ ಮೊಬೈಲ್‌ ಗೀಳಿಗೆ ಸಿಲುಕಿಕೊಂಡಿದೆ.ಇದರಿಂದ ಜೀವನದ ಮೌಲ್ಯ ಗಾಳಿ ತೂರಿ ಸಂಬಂಧಗಳಿಂದ ದೂರ ಸರಿಸುತ್ತಿರುವುದು ಆತಂಕದ ಸಂಗತಿ ಎಂದು ಜಾನಪದ ಕಲಾವಿದ ಶಂಬಯ್ಯ ಹಿರೇಮಠ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಿ.ಎಸ್.ವಾಣಿಜ್ಯ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ಬಸಪ್ಪ ಅಂದಾನೆಪ್ಪ ಉಪ್ಪಿನ,ನಿರ್ಮಲಾ ದೇವಿ ಉಪ್ಪಿನ, ನಿಂಗಪ್ಪ ಅರಳಿಕಟ್ಟಿ, ರಾಮಣ್ಣ ಸಿದ್ದಪ್ಪ ದಂಡಿನ, ಬಸಪ್ಪ ಕಲ್ಲೂರ ಹಾಗೂ ಪ್ರೊ. ಭೂಪಾಲಪ್ಪ ಬಾಗಿ ದತ್ತಿಯಲ್ಲಿ ಮಾತನಾಡಿ, ಆಯಾ ಪ್ರದೇಶದ ಸಂಸ್ಕೃತಿ ಯುವ ಪೀಳಿಗೆ ಮರೆಯುತ್ತಿದ್ದು, ಬರೀ ಆಧುನಿಕ ಜೀವನದ ಬೆನ್ನು ಬಿದ್ದಿದೆ.ಇದರಿಂದ ಸಂಬಂಧಗಳು ಹಳಸಿ ಹೋಗುತ್ತಿರುವುದು ಬೇಸರದ ಸಂಗತಿ ಎಂದರು.

ನಂತರ ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಪ್ರಾಚಾರ್ಯ ಡಾ. ಕಮಲಾ ಢವಳೆ ಅಧ್ಯಕ್ಷತೆ ವಹಿಸಿದ್ದರು. ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಿದ್ದರು. ಡಾ. ಪರಿಮಳಾ ಕೋಟಿ ಸ್ವಾಗತಿಸಿದರು. ಡಾ. ಎಸ್.ವಿ. ಹೆಗಡಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ