ರೋಟರಿ ಜಿಲ್ಲಾ ಸಮುದಾಯದಳದ ಜಿಲ್ಲಾ ಡೈರೆಕ್ಟರಿ ಬಿಡುಗಡೆ

KannadaprabhaNewsNetwork |  
Published : Aug 05, 2024, 12:30 AM IST
ರೋಟರಿ4 | Kannada Prabha

ಸಾರಾಂಶ

ಆರ್‌ಸಿಸಿ ಉಡುಪಿ ಜಿಲ್ಲಾ ಮಟ್ಟದ ವಲಯ ಸಂಯೋಜಕರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡಿದೆ. ರೋಟರಿ ಕಮ್ಯುನಿಟಿ ಸರ್ವಿಸ್ ವಿಭಾಗದಲ್ಲಿ ರೋಟರಿಯ ಮಾರ್ಗದರ್ಶನದಲ್ಲಿ ತೀರಾ ಗ್ರಾಮೀಣ ಪ್ರದೇಶಗಳ ಮೂಲಭೂತ ಕೊರತೆಗಳನ್ನು ಗುರುತಿಸಿ ನೀಗಿಸುವಲ್ಲಿ ಗ್ರಾಮೀಣ ಸಮಾನ ಮನಸ್ಕ ಸೇವಾಸಕ್ತರನ್ನು ಒಳಗೊಂಡ ಸಂಘಟನೆಯಾದ ರೋಟರಿ ಸಮುದಾಯದಳದ ಜಿಲ್ಲಾ ಡೈರೆಕ್ಟರಿ ಶನಿವಾರ ಬಿಡುಗಡೆಯಾಯಿತು.

ರೋಟರಿ ಜಿಲ್ಲಾ ಗವರ್ನರ್ ಸಿಎ. ದೇವ್ ಆನಂದ್ ಶನಿವಾರ ಉಡುಪಿಯಲ್ಲಿ ಜರುಗಿದ ಆರ್‌ಸಿಸಿ ಉಡುಪಿ ಜಿಲ್ಲಾ ಮಟ್ಟದ ವಲಯ ಸಂಯೋಜಕರ ಸಭೆಯಲ್ಲಿ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ, ರೋಟರಿ ಅ.ಜಿಲ್ಲೆ ೩೧೮೨ ಇದರಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾ ಡೈರೆಕ್ಟರಿಯನ್ನು ರೂಪಿಸುವಲ್ಲಿ ಪ್ರಧಾನ ಪಾತ್ರಹಿಸಿದ ಸಮುದಾಯ ದಳಗಳ ಜಿಲ್ಲಾ ಛೇರ್‍ಮನ್ ಬಿ.ಪುಂಡಲೀಕ ಮರಾಠೆ ಶಿರ್ವ, ವೈಸ್ ಛೇರ್‍ಮನ್ ಜೆ.ಎಮ್.ಶ್ರೀಹರ್ಷ ಕೊಪ್ಪ ಮತ್ತು ಅವರ ವಲಯ ನಿರ್ದೇಶಕರುಗಳ ಸಂಘಟಿತ ಕಾರ್ಯವನ್ನು ಅಭಿನಂದಿಸಿ ಶುಭ ಕೋರಿದರು.ಜಿಲ್ಲಾ ಛೇರ್‍ಮನ್ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಪ್ರಥಮ ಬಾರಿಗೆ ಜಿಲ್ಲೆಗಳ ಸಮುದಾಯದಳದ ಪದಾಧಿಕಾರಿಗಳಿಗೆ ಸೆ ೧೫ ರಂದು ತರಬೇತಿ ಕಾರ್ಯಾಗಾರ ಉಡುಪಿ ವಲಯದಲ್ಲಿ ಜರುಗಲಿದ್ದು, ಡಿ ೨೯ರಂದು ಜಿಲ್ಲಾ ಸಮ್ಮೇಳನ ಶಿರ್ವ ರೋಟರಿ ನೇತೃತ್ವದಲ್ಲಿ ಜರುಗಲಿದೆ ಎಂದರು.ಸಭೆಯಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ(ಆಡಳಿತ) ಐರೋಡಿ ರಾಮದೇವ ಕಾರಂತ, ಸಮುದಾಯಗಳದ ಜಿಲ್ಲಾ ಪ್ರತಿನಿಧಿ ಪ್ರಸಾದ್ ಪಾದೂರು, ಪಾದೂರು ಆರ್‌ಸಿಸಿ ಸಭಾಪತಿ ಜಯಕೃಷ್ಣ ಆಳ್ವ, ವಲಯ ಸಂಯೋಜಕರುಗಳಾದ ಸ್ಮಿತಾ ಕಾಮತ್ ಪರ್ಕಳ, ಉಮೇಶ್ ಎಲ್ ಮೇಸ್ತ ಗಂಗೊಳ್ಳಿ, ಶರತ್ ಹೆಗ್ಡೆ ಶಂಕರನಾರಾಯಣ, ರಘುಪತಿ ಐತಾಳ್ ಶಿರ್ವ, ಸುಧಾಕರ ಹೆಗ್ಡೆ ಶಂಕರ ನಾರಾಯಣ ಉಪಸ್ಥಿತರಿದ್ದರು. ಜಿಲ್ಲಾ ಆರ್‌ಸಿಸಿ ಪ್ರತಿನಿಧಿ ಪ್ರಸಾದ್ ಪಾದೂರು ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ