ಪಾವಂಜೆ ಡಾ.ಕೆ.ಜಿ.ವಸಂತ ಮಾಧವ ಕೃತಿಗಳ ಬಿಡುಗಡೆ

KannadaprabhaNewsNetwork | Updated : Feb 09 2024, 04:23 PM IST

ಸಾರಾಂಶ

ಮೂಲ್ಕಿ ತಾಲೂಕು ಕಸಾಪ ಘಟಕ ನೇತ್ರತ್ವದಲ್ಲಿ ಪಾವಂಜೆಯ ಡಾ. ಕೆ.ಜಿ. ವಸಂತ ಮಾಧವರ ಮನೆಯ ಅಂಗಳದಲ್ಲಿ ಜರಗಿದ ಡಾ. ಕೆ.ಜಿ. ವಸಂತ ಮಾಧವರ ಕೃತಿಗಳ ಬಿಡುಗಡೆ ಕಾರ್ಯಕ್ರಮ.

ಕನ್ನಡಪ್ರಭವಾರ್ತೆ ಮೂಲ್ಕಿ

ಇತಿಹಾಸ ಸಂಶೋಧಕ , ಉಪನ್ಯಾಸಕ ಡಾ. ವಸಂತ ಮಾಧವರು 87ರ ಇಳಿ ಹರೆಯದಲ್ಲೂ ಅಧ್ಯಯನ ಮಾಡುತ್ತಿದ್ದು ಕ್ರಿಯಾಶೀಲರಾಗಿ ಬರೆಯುತ್ತಿರುವ ನಾಡಿನ ಪ್ರಮುಖ ಇತಿಹಾಸ ಬರಹಗಾರರಾಗಿದ್ದು ಅವರ ಬರಹಗಳು ಅಮೂಲ್ಯವಾಗಿವೆ ಎಂದು ಜನಪದ ವಿದ್ವಾಂಸ ಡಾ. ಗಣೇಶ್ ಸಂಕಮಾರ್ ಹೇಳಿದರು.

ಮೂಲ್ಕಿ ತಾಲೂಕು ಕಸಾಪ ಘಟಕ ನೇತ್ರತ್ವದಲ್ಲಿ ಪಾವಂಜೆಯ ಡಾ. ಕೆ.ಜಿ. ವಸಂತ ಮಾಧವರ ಮನೆಯ ಅಂಗಳದಲ್ಲಿ ಜರಗಿದ ಡಾ. ಕೆ.ಜಿ. ವಸಂತ ಮಾಧವರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾವಂಜೆಯ ಡಾ. ವಸಂತಮಾಧವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸಂತ ಮಾಧವರ ಇತಿಹಾಸ ಯಾನ ಸಾಂಸ್ಜೃತಿಕ ನೋಟಗಳು ಕೃತಿ ಹಾಗೂ ಡಾ. ಪದ್ಮನಾಭ ಭಟ್ ಬರೆದ ಡಾ. ಕೆ. ಜಿ. ವಸಂತಮಾಧವರ ಪರಿಚಯ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಕೃತಿಗಳನ್ನು ದುಡ್ಡು ಕೊಟ್ಟು ಕೊಂಡು ಓದಿ. ಇತರರಿಗೂ ಓದಲು ಪ್ರೇರೇಪಿಸಿ, ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದರು.

ವಿದ್ವಾಂಸ ಕೆ.ಎಲ್. ಕುಂಡಂತಾಯ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಹೆರಿಕ್ ಪಾಯಸ್, ಮೋಹನ್ ರಾವ್ ಕಿಲ್ಪಾಡಿ, ಉದಯಕುಮಾರ ಹಬ್ಬು, ವಸಂತ ಮಾಧವರ ಪತ್ನಿ ವಿನೋದಾ, ಮಗಳು ನಮಿತಾ ಇದ್ದರು.

Share this article