ಆರ್.ಜೆ ಕಾಲೇಜಿನಲ್ಲಿ ವಿಜ್ಞಾನ ವಿಷಯಗಳ ಅಭ್ಯಾಸ ಪುಸ್ತಕ ಬಿಡುಗಡೆ

KannadaprabhaNewsNetwork | Published : Jun 18, 2024 12:55 AM

ಸಾರಾಂಶ

ಪ್ರಸ್ತುತ ಡಿಜಿಟಲ್ ವ್ಯಾಕುಲತೆಯ ಯುಗದಲ್ಲಿ ಪುಸ್ತಕಗಳನ್ನು ಓದುವುದರಿಂದ ಆಂತರಿಕ ಮನಸ್ಸನ್ನು ತೆರೆಯುತ್ತವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಭೇದಿಸಲು ಅಗತ್ಯವಾದ ಬುದ್ದಿವಂತಿಕೆಯನ್ನು ಒದಗಿಸುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಸ್ತುತ ಡಿಜಿಟಲ್ ವ್ಯಾಕುಲತೆಯ ಯುಗದಲ್ಲಿ ಪುಸ್ತಕಗಳನ್ನು ಓದುವುದರಿಂದ ಆಂತರಿಕ ಮನಸ್ಸನ್ನು ತೆರೆಯುತ್ತವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಭೇದಿಸಲು ಅಗತ್ಯವಾದ ಬುದ್ದಿವಂತಿಕೆಯನ್ನು ಒದಗಿಸುತ್ತದೆ ಎಂದು ಆದ್ದರಿಂದ ಪುಸ್ತಕಗಳನ್ನು ಆಸಕ್ತಿಯಿಂದ ಓದಬೇಕೆಂದು ಕೆಬಿಎನ್‌ ವಿವಿ ಪ್ರಾಧ್ಯಾಪಕರಾದ ಡಾ. ವಿಶಾಲದತ್ತ ಕೊಹಿರ್, ಕಿವಿಮಾತು ಹೇಳೀದರು.

ಇಲ್ಲಿನ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಬುರ್ಲಿ ಪ್ರಲ್ಹಾದ ಅವರ ವಿಜ್ಞಾನ ವಿಷಯಗಳ ಅಭ್ಯಾಸ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಅಭ್ಯಾಸ ಪುಸ್ತಕಗಳು ಡಾ. ಪ್ರಲ್ಹಾದ ಭುರ್ಲಿ ಅವರ ಮೂವತ್ತು ವರ್ಷಗಳ ತಪಸ್ಸಿನ ಫಲವಾಗಿದೆ ಎಂದು ವಿಶಾಲದತ್ತ ಕೊಹಿರ್ ಅವರು ಅಭಿಪ್ರಾಯಪಟ್ಟರು. ಪುಸ್ತಕಗಳು ರಚನಾತ್ಮಕವಾಗಿ ಮೂಡಿ ಬಂದಿವೆ. ಅವು ವಿಧ್ಯಾರ್ಥಿಗಳ ಭವಿಷ್ಯದ ದಡವನ್ನು ಮುಟ್ಟಲು ಹೇಗೆ ದಿಕ್ಸೂಚಿಯು ಸಾಗರದಲ್ಲಿ ಪಯಣಿಸುವ ಹಡಗಿಗೆ ಸಹಾಯವಾಗುತ್ತವೆಯೋ ಹಾಗೆಯೇ ಇವು ಕೂಡ ವಿಧ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಸಹಾಯವಾಗುತ್ತವೆ ಎಂದು ವಿಶಾಲದತ್ತ ಹೇಳಿದರು.

ಅಧ್ಯಕ್ಷತೆ ವಹಿಸಿದ ಡಾ. ಭುರ್ಲಿ ಪ್ರಹ್ಲಾದ ಮಾತನಾಡುತ್ತ, ಪುಸ್ತಕಗಳ ರೂಪದಲ್ಲಿ ಅಧ್ಯಾಯನ ಸಾಮಾಗ್ರಿಗಳನ್ನು ಸಿದ್ದಪಡಿಸುವಲ್ಲಿ ನಾಲ್ಕು ವಿಭಾಗಗಳ ಅಧ್ಯಾಪಕರ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು. ಮುಂದೆ ಅವರು ಕಲ್ಯಾಣ ಕರ್ನಾಟಕದ ಅವಶ್ಯಕತೆಗೆ ಅನುಗುಣವಾಗಿ ಪುಸ್ತಕಗಳನ್ನು ವಿನ್ಯಾಸಗೊಳಿಸಿರುವುದರಿಂದ ವಿಧ್ಯಾರ್ಥಿಗಳು ಪುಸ್ತಕಗಳ ಪ್ರಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಪದವಿ ಪೂರ್ವ ಕಾಲೇಜುಗಳ ಅಧ್ಯಾಯನ ಸಾಮಾಗ್ರಿಗಳನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿದೆ. ಇದು ವಿದ್ಯಾರ್ಥಿಗಳಿಗೆ ಒತ್ತಡವಿಲ್ಲದೇ ವಿಷಯವನ್ನು ಓದಲು ಸಹಾಯ ಮಾಡುತ್ತದೆ ಎಂದರು.

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣೀತ ಮತ್ತು ಜೀವಶಾಸ್ತ್ರ ವಿಷಯಗಳ ಪುಸ್ತಕಗಳನ್ನು ಮುಖ್ಯ ಅಥಿತಿಗಳಾದ , ಕಲಬುರಗಿ, ಡಾ. ಭುರ್ಲಿ ಪ್ರಹ್ಲಾದ, ಪ್ರಾಚಾರ್ಯರು ಆರ್.ಜೆ ಪಿ.ಯು ಕಾಲೇಜು ಕಲಬುರಗಿ. ಅಥಿತಿಗಳಾದ ಜ್ಯೋತಿ ಪಿ. ಭುರ್ಲಿ, ವೀರೇಶ ಕುಲಕರ್ಣಿ, ಶರಣಪ್ಪ ಬಬಲೇಶ್ವರ ಅವರು ಪಾಲ್ಗೊಂಡಿದ್ದರು.

ವಿಷಯ ಉಪನ್ಯಾಸಕರುಗಳಾದ ಕೇದಾರ ದೀಕ್ಷಿತ್, ಪ್ರಕಾಶ ಕಾಂತೀಕರ, ವೈಶಾಲಿ ದೇಶಪಾಂಡೆ, ಡಿ ಕೊಂಡಲರಾವ್ ಪುಸ್ತಕ ಕುರಿತು ಅನಿಸಿಕೆಗಳನ್ನು ಹೇಳೀದರು. ಪ್ರಥಮ ಪಿ.ಯು ವಿಧ್ಯಾರ್ಥಿನಿಯರಾದ ತ್ರಿವೇಣಿ, ವರ್ಷಾ, ವಾಣಿಶ್ರೀ ಮತ್ತು ಅಂಬಿಕಾ ಪ್ರಾರ್ಥನೆಗೀತೆ ಹಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ. ಮಳೇಂದ್ರ ಹಿರೇಮಠ ಅವರು ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಚಂದ್ರಭಾನು ಅವರು ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕ ಬಳಗ, ಸಿಬ್ಬಂಧಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Share this article