ಕುಂದೂರು ವ್ಯಾಪ್ತಿ ಭದ್ರಾ ಬಲದಂಡೆ ನಾಲೆಗಳಿಗೆ ನೀರು ಹರಿಸಿ

KannadaprabhaNewsNetwork |  
Published : Nov 13, 2026, 01:30 AM IST
12ಎಚ್.ಎಲ್.ಐ1 ತಾಲೂಕಿನ ಕುಂದೂರು ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ನೀರು ಹರಿಸಬೇಕಾಗಿರುವುದರಿಂದ ಭದ್ರಾ ಕಾಲುವೆಗಳಿಗೆ ನೀರು ಹರಿಸಲಿಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಎಂದು ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಶಾಸಕ ಡಿ.ಜಿ.ಶಾಂತನಗೌಡ  ಅವರಿಗೆ ಮನವಿ ಮಾಡಿದರು. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಕುಂದೂರು ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ನೀರು ಅತ್ಯವಶ್ಯಕವಾಗಿದೆ. ಕೂಡಲೇ ನಮ್ಮ ಭಾಗದ ಭದ್ರಾ ಬಲದಂಡೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಗುರುವಾರ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ನಿವಾಸದಲ್ಲಿ ಮನವಿ ಮಾಡಿದರು.

- ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಭದ್ರಾ ಅಚ್ಚುಕಟ್ಟು ಪ್ರದೇಶ ರೈತರ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕುಂದೂರು ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ನೀರು ಅತ್ಯವಶ್ಯಕವಾಗಿದೆ. ಕೂಡಲೇ ನಮ್ಮ ಭಾಗದ ಭದ್ರಾ ಬಲದಂಡೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಗುರುವಾರ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ನಿವಾಸದಲ್ಲಿ ಮನವಿ ಮಾಡಿದರು.

ಕುಂದೂರು ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡ ಕುಂಬಳೂರು ಬಿ.ಎಚ್.ವಾಗೀಶ್ ಮಾತನಾಡಿ, ಮುಂಗಾರು ಸಂಪೂರ್ಣ ಕೈ ಕೊಟ್ಟಿದೆ. ಹಿಂಗಾರು ಮಳೆ ಹೇಳಿಕೊಳ್ಳುವಂತೆ ಆಗಿಲ್ಲ. ಅಡಕೆ ಹಾಗೂ ಇತರೆ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ, ಕೆರೆ-ಕಟ್ಟೆಗಳು ಬರಿದಾಗಗುತ್ತಿವೆ. ಇದರಿಂದ ದನಕರುಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಶಾಸಕರೇ ಸರ್ಕಾರದ ಜೊತೆ ಮಾತನಾಡಿ ತಕ್ಷಣ ಭದ್ರಾ ಕಾಲುವೆಗಳಿಗೆ ಭದ್ರಾ ನೀರು ಹರಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಡಕೆ ತೋಟಕ್ಕೆ ನೀರಿಲ್ಲದೇ ಕಾಯಿಗಳೆಲ್ಲ ಉದುರಿ ಹೋಗುತ್ತಿವೆ. ಇತರ ಬೆಳೆಗಳು ಸಹ ಬೆಳೆಯಲು ಅವಕಾಶ ಇಲ್ಲವಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕುಂದೂರು ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡುವ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸುವಂತೆ ಒತ್ತಾಯಿಸಿದರು.

ಭದ್ರಾ ನೀರನ್ನೇ ನಂಬಿ ಕುಂದೂರು, ಸಾಸ್ವೆಹಳ್ಳಿ, ಮಲೇಬೆನ್ನೂರು ಮತ್ತು ಹರಿಹರ ತಾಲೂಕಿನ ನೂರಾರು ಹಳ್ಳಿಗಳ ರೈತರು ಭದ್ರಾ ನೀರನ್ನೇ ನಂಬಿ ಬದುಕುವ ರೈತರಿಗೆ ಭತ್ತದ ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ರೈತರ ಜೀವನಾಡಿ ಕೆರೆಗಳಲ್ಲಿಯೂ ನೀರಿಲ್ಲದೇ ಜಾನುವಾರುಗಳಿಗೆ ಮತ್ತು ಕುರಿ ಹಾಗೂ ಇತರೆ ಸಾಕು ಪ್ರಾಣಿಗಳಿಗೆ, ಪಕ್ಷಿಗಳಿಗೆ ತೊಂದರೆಯಾಗಿದೆ ಎಂಬುದು ಈ ಭಾಗದ ರೈತರ ಅಳಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರು ನಿರಂತರ ಭತ್ತ ಬೆಳೆಯುತ್ತಿದ್ದಾರೆ. ಭತ್ತ ಬೆಳೆದರೂ ಕಳೆದ 20 ವರ್ಷಗಳಿಂದ ಭತ್ತಕ್ಕೆ ಒಂದೇ ದರವಿದೆ. ಆದ್ದರಿಂದ ಭತ್ತ ಬೆಳೆಯಲು ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗುತ್ತಿವೆ. ಇದನ್ನು ಮನಗಂಡು ರೈತರು ಅಡಕೆ ಬೆಳೆಯಲು ಮುಂದಾಗಿದ್ದಾರೆ. ಈಗಾಗಲೇ ರೈತರು ಬೆಳೆದ ಅಡಕೆ ಮರಗಳು ಬೆಳೆದು ನಿಂತಿವೆ. ಆದರೆ, ನಾಲೆಯಲ್ಲಿ ನೀರು ಇಲ್ಲವಾಗಿದೆ ಎಂದರು.

ರೈತರ ಮನವಿ ಆಲಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟಿದೆ. ಇದರಿಂದ ಅವಳಿ ತಾಲೂಕಿನಲ್ಲಿ ಎಲ್ಲ ಅಡಕೆ ತೋಟಗಳು ಹಾಗೂ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅದನ್ನು ನಾನೂ ಒಪ್ಪುತ್ತೇನೆ ಎಂದರು.

ಮುಂದಿನ ಗುರುವಾರ ಸಚಿವ ಸಂಪುಟ ಸಭೆ ಇದೆ. ಅಂದು ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇರುತ್ತಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಪ್ರಮುಖ ರೈತರು ಬನ್ನಿ, ನಾನೇ ಖುದ್ದಾಗಿ ಇಬ್ಬರು ಸಚಿವರೊಡನೆ ಜಲ ಸಂಪಲ್ಮೂನ ಸಚಿವರನ್ನೂ ಭೇಟಿ ಮಾಡಿಸಿ, ಈ ಬಗ್ಗೆ ನಾನು ಚರ್ಚಿಸುತ್ತೇನೆ. ಇದರೊಂದಿಗೆ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭೇಟಿಗೆ ಅವಕಾಶ ಪಡೆದು ಚರ್ಚಿಸೋಣ ಎಂದು ರೈತರಿಗೆ ತಿಳಿಸಿದರು.

ಈ ಸಂದರ್ಭ ನೆಲಹೊನ್ನೆ ಎಂ.ಸಿ.ಮೋಹನ್, ಸೋಮಶೇಖರ್, ಕೂಲಂಬಿ ಬಸವರಾಜಪ್ಪ, ಯಕ್ಕನಹಳ್ಳಿ ದಯಾನಂದ್, ವೆಂಕಟೇಶ್ ಕುಂಬಳೂರು ಹಾಗೂ ಇತರರು ಇದ್ದರು.

- - -

-12ಎಚ್.ಎಲ್.ಐ1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌