ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಶಿವಪ್ಪನಾಯಕ ನಗರದ ೨೯ನೇ ವಾರ್ಡ್‌ನ ಆಟೋ ಚಾಲಕ ಮಂಜುನಾಥ್ ಎಂಬುವವರ ಮನೆಗೆ ಸೋಮವಾರ ರಾತ್ರಿ ನೀರು ನುಗ್ಗಿ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ತಡರಾತ್ರಿ ಮನೆ ಬಿದ್ದು ಕುಟುಂಬಸ್ತರು ಅಪಾಯದಿಂದ ಪಾರಾಗಿದ್ದರೂ ರಾತ್ರಿ ನೆಲೆಯಿಲ್ಲದೆ ಕಳೆಯುವ ಸ್ಥಿತಿ ಬಂದಿತ್ತು. ಮನೆಗೆ ಈತನಕ ಹಕ್ಕುಪತ್ರ ಸಹ ಸಿಗದೆ ಇರುವುದರಿಂದ ನಮಗೆ ಸರ್ಕಾರಿ ಸೌಲಭ್ಯ ಯಾವುದೂ ಸಿಗುತ್ತಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಮಂಜುನಾಥ್ ಕುಟುಂಬಸ್ತರು ಮನವಿ ಮಾಡಿದ್ದಾರೆ. ಶಾಸಕರ ಮಾರ್ಗದರ್ಶನದಂತೆ ಮಂಗಳವಾರ ಕಾಂಗ್ರೆಸ್ ಪ್ರಮುಖರು ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ತರಿಗೆ ಆರ್ಥಿಕ ನೆರವು ನೀಡಿದರು.
ವಿಪರೀತ ಮಳೆಯಿಂದಾಗಿ ಚನ್ನಮ್ಮ ವೃತ್ತ ಹಾಗೂ ಸಾಗರ ನಗರದಿಂದ ಸೂರನಗದ್ದೆ ಗ್ರಾಮಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿದ್ದು, ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ಚರಂಡಿ ನಿರ್ಮಿಸಿ, ನೀರು ಹರಿಯಲು ಅವಕಾಶ ಮಾಡಿಕೊಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಎಲ್ಲ ಕೆಲಸಗಳನ್ನು ಶಾಸಕರೇ ನೋಡಿ ಸರಿ ಮಾಡಿಸಬೇಕು ಎನ್ನುವ ನಗರಸಭೆ ಅಧಿಕಾರಿಗಳ ಧೋರಣೆ ಬದಲಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಸೂರನಗದ್ದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಲ್ಕು ದಿನಗಳಿಂದ ನೀರಿಲ್ಲ:
ಸ್ಥಳದಲ್ಲಿಯೆ ಮೊಕ್ಕಾಂ ಹೂಡಿರುವ ಪೌರಾಯುಕ್ತ ಎಚ್.ಕೆ.ನಾಗಪ್ಪ ಮೋಟಾರ್ ರಿಪೇರಿ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿ ಸಿಬ್ಬಂದಿಗಳ ಜೊತೆ ನಡೆಸಿದ ಕಾರ್ಯಾಚರಣೆಯಿಂದಾಗಿ ಮಂಗಳವಾರ ವಿದ್ಯುತ್ ಸಮಸ್ಯೆ ಹಾಗೂ ಪಂಪ್ಸೆಟ್ ರಿಪೇರಿ ನಡೆದದ್ದು, ನೀರು ಸರಬರಾಜು ತಕ್ಷಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.