ಸರ್ವ- ಧರ್ಮ ಸಮ್ಮೇಳನಗಳ ಮೂಲಕ ಧರ್ಮ ಜಾಗೃತಿ ಕಾರ್ಯ: ಬೋಸರಾಜು

KannadaprabhaNewsNetwork |  
Published : Oct 17, 2024, 12:47 AM IST
15-ಮಾನ್ವಿ-1: | Kannada Prabha

ಸಾರಾಂಶ

ಮಾನ್ವಿ ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ ದಸರಾ ಮಹೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಜರುಗಿತು.

ಕನ್ನಡಪ್ರಭ ವಾರ್ತೆ ಮಾನ್ವಿ

ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ದಾರಿತಪ್ಪಿಸಲಾಗುತ್ತಿದ್ದು, ಇಂತಹ ಸಮಯದಲ್ಲಿ ಸರ್ವ-ಧರ್ಮ ಸಮ್ಮೇಳನ ಮೂಲಕ ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಾದರಿಯಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಮುಕ್ತಾಗುಚ್ಛ ಬೃಹನ್ಮಠದಲ್ಲಿ 49ನೇ ದಸರಾ ಮಹೋತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನ, ಪ್ರತಿಭಾ ಪುರಸ್ಕಾರ, 2001 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಜಾತಿ,ಧರ್ಮವನ್ನು ಒಂದುಗೂಡಿಸುವ ಉದ್ದೇಶದಿಂದ ಸರ್ವಧರ್ಮ ಸಮ್ಮೇಳನವನ್ನು ಅಯೋಜಿಸಲಾಗಿದೆ ಧರ್ಮವನ್ನು ನಾವು ಕಾಪಾಡಿದಲ್ಲಿ ಧರ್ಮ ನಮ್ಮನ್ನು ಕಾಪಾಡು ತ್ತದೆ. ನಮ್ಮ ಆಚರ , ವಿಚಾರ, ಸಂಸ್ಕಾರ ಬೇರೆಯಾದರೂ ಕೂಡ ನಾವು ದೇಶದ ಅಭಿವೃದ್ಧಿಗೆ ಒಂದಾಗಬೇಕಿದೆ ಎಂದರು.

ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ನಿಲೋಗಲ್ ಬೃಹನ್ಮಠದ ಶ್ರೀ ಅಭಿನವ ಶಾಂತ ಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕ್ರೈಸ್ತ ಧರ್ಮ ಗುರು ವಂ.ಫಾ.ವಿನ್ಸೆಂಟ್ ಸುರೇಶ ಹಾಗೂ ಮುಸ್ಲಿಂ ಧರ್ಮಗುರು ಸೈಯಾದ್ ಸಜ್ಜದ್ ಮತವಾಲೆ ಮಾತನಾಡಿದರು. ಇದೇ ವೇಳೆ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಿಕ್ಷಕನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ,ಮುಖಂಡರಾದ ಆರ್,ತಿಮ್ಮಯ್ಯ ಶೆಟ್ಟಿ, ಶಾಂತಪ್ಪ, ವೀರೇಶ,ಡಾ.ರೋಹಿಣಿ ಮಾನ್ವಿಕರ್, ನಾಗರತ್ನ ಪಾಟೀಲ್ ಬೆಟ್ಟದೂರು,ಪದ್ಮವತಿ, ವೀರೇಶ,ತಿಮ್ಮಪ್ಪ, ಬಿ.ಕೆ.ಅಮರೇಶಪ್ಪ,ಎ.ಬಿ.ಉಪಳಮಠ,ಲಕ್ಷ್ಮೀ ಸೇರಿ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ