- ಡಿ.ವಿ.ಹಾಲಪ್ಪ ರಸ್ತೆಯ ಮಂಗಲ ಮಂದಿರ, ದೇವಾಲಯದ ಉದ್ಘಾಟನೆ ಮಂಡಲೋತ್ಸವ ಕಾರ್ಯಕ್ರಮ
‘ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ದೇಶವಿದ್ದರೆ ಧರ್ಮ ಮತ್ತು ಧರ್ಮದಿಂದಲೇ ದೇಶದ ಸಂಸ್ಕೃತಿ ಉಳಿವು ಎನ್ನುವ ಮನೋಭಾವ ಪ್ರಜೆಗಳಲ್ಲಿ ಮೂಡಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಡಿ.ವಿ. ಹಾಲಪ್ಪ ರಸ್ತೆಯ ಮಂಗಲ ಮಂದಿರ ಮತ್ತು ದೇವಾಲಯದ ಉದ್ಘಾಟನೆ ಮಂಡ ಲೋತ್ಸವದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ‘ಭಕ್ತರಿಗೆ ಸಂಸ್ಕಾರ, ಸದ್ವಿಚಾರಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪಂಚಪೀಠಗಳು ಕಾರ್ಯ ನಿರ್ವಹಿಸುತ್ತಿವೆ. ಭಕ್ತಿ ಶಕ್ತಿ ಬೆಳೆಸುವ ಮೂಲಕ ಸಮಾಜ ಅಭಿವೃದ್ಧಿ ಪಥದತ್ತ ಸಾಗಿಸುವ ಧ್ಯೇಯ ರಂಭಾಪುರಿ ಪೀಠದ್ದಾಗಿದೆ. ದೇಶ ಎಷ್ಟು ಮುಖ್ಯವೋ ಅದರ ಉಳಿವಿಗೆ ಧರ್ಮವೂ ಅಷ್ಟೆ ಮುಖ್ಯ ಎಂಬುದನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ. ಜಗದ್ಗುರು ರೇಣುಕಾ ಚಾರ್ಯರು ತೋರಿದ ಧರ್ಮದ ಹಾದಿಯಲ್ಲಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೇ, ಎಲ್ಲರನ್ನೂ ಒಳಗೊಂಡಂತೆ ಈ ಧರ್ಮದ ಕಾರ್ಯಗಳು ಪಂಚಪೀಠಗಳ ನೇತೃತ್ವದಲ್ಲಿ ನೆರವೇರುತ್ತಿವೆ’ ಎಂದರು.
ಶಿವಾನಂದಾಶ್ರಮ ಟ್ರಸ್ಟ್ ಕೂಡ ರಂಭಾಪುರಿ ಮಠದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಪ್ರಧಾನ ಕಾರ್ಯದರ್ಶಿಯಾಗಿ ಅಭಿವೃದ್ಧಿ ಪಥದತ್ತ ಟ್ರಸ್ಟ್ಅನ್ನು ಸಾಗಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬೀರೂರು ಖಾಸಾಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ‘ಧರ್ಮಾಭಿಮಾನಿಗಳ ಕನಸು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ನನಸಾಗಿದೆ. ಕಾರ್ಯಕ್ರಮದ ತಯಾರಿ, ಮಂಗಲ ಮಂದಿರದ ನಿರ್ಮಾಣಕ್ಕೆ ಮುಖಂಡ ಬೆಳ್ಳಿಪ್ರಕಾಶ್ ನೀಡಿದ ಸಹಕಾರ, ಅಲ್ಲದೆ ಹಾಲಿ ಶಾಸಕ ಕೆ.ಎಸ್. ಆನಂದ್ ಕೊಡುಗೆ, ಕೆ.ಬಿ. ಮಲ್ಲಿಕಾರ್ಜುನರ ಮಾರ್ಗದರ್ಶನ ಹಾಗೂ ಇತರೆ ಜನಪ್ರತಿನಿಧಿಗಳ ಸಹಾಯಹಸ್ತ ಮತ್ತು ಸಾವಿರಾರು ಜನರಿಗೆ ದಾಸೋಹದ ಹೊಣೆ ಭಕ್ತರ ಸಹಕಾರದಿಂದ ಬೀರೂರಿಗೆ ಹೊಸ ಹುರುಪು ತಂದಿದೆ’ ಎಂದರು.ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ‘ಪುರಾತನ ಕಾಲ ದಿಂದ ಮಠ ಮಾನ್ಯಗಳು ಧರ್ಮ ಪ್ರಸರಣದ ಮೂಲಕ ಸಮಾಜವನ್ನು ತಿದ್ದುತ್ತಿವೆ. ಧಾರ್ಮಿಕ ಜಾಗೃತಿ ಮೂಡಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಿರುವ ಪಂಚಪೀಠಗಳ ಕಾಳಜಿ ಶ್ಲಾಘನೀಯ’ ಎಂದರು.ಧಾರ್ಮಿಕ ಕಾರ್ಯಕ್ರಮದಲ್ಲಿ ಹುಲಿಕೆರೆ ಮಠದ ವಿರೂಪಾಕ್ಷ ಘನಲಿಂಗ ಶಿವಾಚಾರ್ಯರು, ಹುಣಸಘಟ್ಟದ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ತರೀಕೆರೆ ಶಾಖಾ ಮಠದ ಜಗದೀಶ್ವರ ಶಿವಾಚಾರ್ಯರು, ಚಿಕ್ಕಮಗಳೂರು ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಣ್ಣೆ ಮಠದ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿ ರೇಣುಕಾ ಮಹಾಂತ ಶಿವಾ ಚಾರ್ಯರು, ಮಳಲಿಯ ನಾಗಭೂಷಣಾ ಶಿವಾಚಾರ್ಯರು, ಅಂಬರದೇವರಹಳ್ಳಿಯ ಉಜ್ಜನೇಶ್ವರ ಶಿವಾ ಚಾರ್ಯರು ಮತ್ತು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಜಗದ್ಗುರು ರೇಣುಕಾ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.-- ಬಾಕ್ಸ್--‘ಒಗ್ಗಟ್ಟಿನ ಕೊರತೆಯಿಂದ ಧರ್ಮದ ಆಚರಣೆಯಲ್ಲೂ ಸಮಸ್ಯೆ’‘ದೀಕ್ಷೆ ಇರದವರಿಗೆ ಮೋಕ್ಷವಿಲ್ಲ ಎಂಬಂತೆ ಇತ್ತೀಚಿನ ದಿನಗಳಲ್ಲಿ ಶಿವಪೂಜೆ ಕುರಿತು ಅಸಡ್ಡೆ ಹುಟ್ಟಿದೆ. ಇದೇ ಸ್ಥಿತಿ ಮುಂದುವರಿದರೆ ಧರ್ಮಕ್ಕೆ ಚ್ಯುತಿ ಹಾಗೂ ಅತಿಕ್ರಮಣವಾಗುವುದು ಖಚಿತ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ಧರ್ಮದ ಆಚರಣೆಯಲ್ಲೂ ಸಮಸ್ಯೆ ಎದುರಾಗುತ್ತಿರುವುದು ವಿಷಾದನೀಯ. ಪಂಚ ಪೀಠಾ ಧೀಶರು ವೀರಶೈವರಿಗೆ ಮಾತ್ರ ಗುರುಗಳಲ್ಲ, ಪಂಚ ಭೂತಗಳಿಗೂ ಪ್ರೇರಕರಾಗಿದ್ದಾರೆ’ ಎಂದು ಯಡೆ ಯೂರು ಖಾಸಾಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.22 ಬೀರೂರು 1ಬೀರೂರಿನ ಡಿ.ವಿ.ಹಾಲಪ್ಪ ರಸ್ತೆಯ ಮಂಗಲ ಮಂದಿರದಲ್ಲಿ ಭಾನುವಾರ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಇಷ್ಟಲಿಂಗ ಪೂಜೆ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀವೀರಸೋಮೇಶ್ವರ ಶಿವಾಚಾರ್ಯರು ಇಷ್ಟಲಿಂಗ ಪೂಜೆ ನೆರವೇರಿಸಿದರು22 ಬೀರೂರು 2ಬೀರೂರಿನ ಡಿ.ವಿ.ಹಾಲಪ್ಪ ರಸ್ತೆಯಲ್ಲಿರುವ ಮಂಗಲ ಮಂದಿರದಲ್ಲಿ ಭಾನುವಾರ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಇಷ್ಟಲಿಂಗ ಪೂಜೆ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀವೀರಸೋಮೇಶ್ವರ ಶಿವಾಚಾರ್ಯರು ಮಾಜಿ ಶಾಸಕ ಬೆಳ್ಳಿಪ್ರಕಾಶ್ ರನ್ನು ಗೌರವಿಸಿದರು.ಬೀರೂರು ಖಾಸಾಶಾಖಾ ಮಠದ ರುದ್ರಮುನಿ ಶಿವಾಚಾರ್ಯರು ಇದ್ದರು.