ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯಾವ ದೇಶದಲ್ಲಿ ಮಂದಿರಗಳಿವೆ ಆ ದೇಶದಲ್ಲಿ ಧರ್ಮ ಉಳಿಯುತ್ತದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಕೇಶವ ಕಲಾಭವನದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಸಹಯೋಗದಲ್ಲಿ ಜ.22 ರಂದು ನಡೆಯಲಿರುವ ಆಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದ ಅಕ್ಷತಾ ಕಳಶ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳಷ್ಟು ಜನರ ಹೋರಾಟ, ಪ್ರಾಣ ತ್ಯಾಗ ಬಲಿದಾನದ ಮೂಲಕ ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ತಲೆ ಎತ್ತಿ ನಿಂತಿದೆ ಎಂದರು.
ಪರಮಾನಂದವಾಡಿ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಷ್ಟ್ರಕ್ಕಾಗಿ ದೇಶಕ್ಕೆ ಧರ್ಮಕ್ಕಾಗಿ ನಾವೆಲ್ಲ ಏನೆನ್ನೂ ಮಾಡಲು ಸಿದ್ಧರಿದ್ದೇವೆ ಎಂದು ವಿಶ್ವಕ್ಕೆ ತೋರಿಸಿಕೊಡಬೇಕಾಗಿದೆ. ದೇಶ, ಧರ್ಮ, ಸಂಸ್ಕೃತಿ ವಿಷಯ ಬಂದಾಗ ಕಂಕಣ ಬದ್ದರಾಗಿ ಎದ್ದು ನಿಲ್ಲಬೇಕಾಗಿದೆ ಎಂದು ತಿಳಿಸಿದರು.ಪ್ರತಿಯೊಬ್ಬರು ರಾಮ ಜನ್ಮಭೂಮಿ ತೀರ್ಥಕ್ಷೇತ್ರದಿಂದ ಬಂದಿರುವ ಅಕ್ಷತೆಯನ್ನು ಮನೆ, ಮನೆಗೆ ಮುಟ್ಟಿಸುವ ಕೆಲಸ ಮಾಡೋಣ ಎಂದರು. ಶ್ರದ್ಧಾ ಭಕ್ತಿಯನ್ನ ಸದಾವಕಾಲ ಮೈಗೂಡಿಸಿಕೊಳ್ಳೋಣ ಎಂದರು.
ಜ.1 ರಿಂದ 15 ರವರೆಗೆ ಎಲ್ಲ ಮನೆಗಳಿಗೂ ಅಕ್ಷತೆ ವಿತರಣೆ ಯೋಜನೆಗ ಪೂಜ್ಯರು ಚಾಲನೆ ನೀಡಿದರು. ಜೋಡಕುರಳಿಯ ಚಿದ್ಗಣಾನಂದ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಜಿಲ್ಲಾ ಸಂಘ ಚಾಲಕ ಬಾಹುಬಲಿ ನಸಲಾಪೂರೆ, ನಂಜುಡ ಜುಗಳೆ, ವಿಶ್ವಹಿಂದೂ ಪರಿಷತ್ ಪ್ರಮುಖ ಡಾ.ಆರ್.ಕೆ.ಬಾಗಿ,ವಿಠ್ಠಲ ಮಾಳಿ, ವಂಕೇಟೇಶ ದೇಶಪಾಂಡೆ, ಅಚ್ಯುತ್ ಕುಲಕರ್ಣಿ, ನಾರಾಯಣ ಮಠಾಧಿಕಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಪಟ್ಟಣದ ಕೇಶವ ಕಲಾಭವನದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಸಹಯೋಗದಲ್ಲಿ ಜ.22 ರಂದು ನಡೆಯಲಿರುವ ಆಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದ ಅಕ್ಷತಾ ಕಳಶ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಯಾವ ದೇಶದಲ್ಲಿ ಮಂದಿರಗಳಿವೆ ಆ ದೇಶದಲ್ಲಿ ಧರ್ಮ ಉಳಿಯುತ್ತದೆ ಎಂದರು.