ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅವರು, ಧರ್ಮಸ್ಥಳದ ಲಕ್ಷದೀಪೋತ್ಸವದ ಸಂದರ್ಭ ಶುಕ್ರವಾರ ನಡೆದ 92ನೇ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದರು.
ಸೃಷ್ಟಿಯ ಸಕಲ ಚರಾಚರಗಳಲ್ಲಿ ಪರಮೇಶ್ವರ ಭಾವವಿದೆ. ಇದರ ಜ್ಞಾನ ಕೆಲವರಿಗಿದೆ, ಕೆಲವರಿಗಿಲ್ಲ. ಜ್ಞಾನದ ಕೊರತೆಯಿಂದಾಗಿ ಉತ್ತಮ ಬಾಳನ್ನು ಬಾಳುವಲ್ಲಿ ಸೋಲುತ್ತಿದ್ದೇವೆ. ನಾವು ನಮ್ಮನ್ನು ನಾವು ನಾಶಮಾಡಿಕೊಳ್ಳುಲು ಇರುವವರಲ್ಲ. ಅರಿಷಡ್ವರ್ಗಗಳಿಂದ ನಾವು ಬಿಡುಗಡೆ ಹೊಂದುವುದೇ ವಿವೇಕಪೂರ್ಣವಾದ ನಡವಳಿಕೆ ಎಂದರು. ಮಾನವತೆಗೆ ವಿರುದ್ಧವಾಗಿ ಹೋಗುವ ಮತಗಳಿಗೆ ಇಲ್ಲಿರಲು ಯಾವುದೇ ಅಧಿಕಾರವಿಲ್ಲ. ಕಾಲಕಾಲಕ್ಕೆ ನಾವು ಸುಧಾರಣೆಯಾದಲ್ಲಿ ಮಾತ್ರ ಕ್ಷೇಮದಿಂದಿರಲು ಸಾಧ್ಯ. ಕ್ಷೇಮವಾಗಿರಲು ಧರ್ಮದ ಅಗತ್ಯವಿದೆ ಎಂದ ಶ್ರೀಗಳು, ಹಿಂದೂ ಧರ್ಮದಲ್ಲಿನ ದಮ, ಅಸ್ತೇಯ, ಶೌಚ, ಇಂದ್ರೀಯ ನಿಗ್ರಹ, ಹ್ರೀಂ, ಶಿಕ್ಷಣ, ಸತ್ಯ, ಕೋಪ ಎಂಬ ದಶಗುಣಗಳನ್ನು ವಿವರಿಸಿದರು.ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯದ ಗೃಹಸಚಿವ ಜಿ. ಪರಮೇಶ್ವರ ಮಾತನಾಡಿ, ಸ್ವಸ್ಥ ಸಮಾಜಕ್ಕೆ ಇಂಥ ಕಾರ್ಯಕ್ರಮಗಳು ಅವಶ್ಯ. ಸಂವಿಧಾನ ರಚನೆಯಾಗುವ ಮೊದಲೇ ಧರ್ಮಸ್ಥಳದಲ್ಲಿ 1933 ರಲ್ಲಿ ಸರ್ವಧರ್ಮ ಸಮಾನತೆಯ ಪರಿಕಲ್ಪನೆಯನ್ನು ಮಂಜಯ್ಯ ಹೆಗ್ಗಡೆಯವರು ತಂದಿದ್ದರು ಎನ್ನುವುದು ಅಧ್ಯಯನ ವಿಚಾರ. ಶಾಂತಿಯಿಂದ ಬಾಳುವ ಸನ್ನಿವೇಶ ನಿರ್ಮಾಣಮಾಡಬೇಕಾದ ಅವಶ್ಯಕತೆ ಇದೆ ಎಂದರು.ಚುನಾಯಿತ ಸರಕಾರ ಮಾಡದೇ ಇರುವ ಕಾರ್ಯಗಳನ್ನು ಹೆಗ್ಗಡೆಯವರು ಮಾಡಿಕೊಂಡು ಬಂದಿದ್ದಾರೆ. ಇಲ್ಲಿನ ಗ್ರಾಮಭಿವೃದ್ಧಿ ಯೋಜನೆ ರಾಜ್ಯದ ಜನತೆಯನ್ನು ತಲುಪಿದೆ. ಅದು ದೇಶಾದ್ಯಂತ ಪಸರಿಸಬೇಕು. ಆರ್ಥಿಕ, ಮೌಲ್ಯಾಧಾರಿತ ಜೀವನ ನಡೆಸುವಂತಾಗಬೇಕು ಎಂದರು.ಸ್ವಾಗತ ಭಾಷಣ ಮಾಡಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಧರ್ಮ ಅಥವಾ ಆಚರಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಾಗ ಅಥವಾ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದಾಗ ಸಮಾಜದಲ್ಲಿ ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳು, ತಿಕ್ಕಾಟ, ಘರ್ಷಣೆಗಳು ಉಂಟಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ. ಇಂಥ ಸಮ್ಮೇಳನಗಳ ಮೂಲ ಉದ್ದೇಶವೇ ಇದಾಗಿದೆ ಎಂದರು.
ಹಿಂದೂ ಧರ್ಮ ಹಾಗೂ ಸಮನ್ವಯದ ಕುರಿತಾಗಿ ಕನ್ನಡ ನಿವೃತ್ತ ಪ್ರಾಧ್ಯಾಪಕ, ಸಂವಹನಕಾರ ಡಾ. ಜಿ.ಬಿ. ಹರೀಶ ಅವರು, ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ಎಂಬ ವಿಚಾರವಾಗಿ ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಅವರು, ಇಸ್ಲಾಂ ಹಾಗೂ ಸಮಾನತೆಯ ಬಗ್ಗೆ ತತ್ವಪದಗಳ ಗಾಯಕ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಮಂಜೂಷಾ ಮ್ಯೂಸಿಯಂಗೆ ಇಂಡಿಯಾ ಬುಕ್ ರೆಕಾರ್ಡ್, ಪ್ರಶಸ್ತಿ ಪತ್ರ ಅನಾವರಣ
2025ರ ಜನವರಿ 1ರಿಂದ ಉಜಿರೆಯ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ಅವಶ್ಯಕತೆಯುಳ್ಳವರಿಗೆ ಉಚಿತವಾಗಿ ನೀಡಲಾಗುವುದು. ಆಸ್ಪತ್ರೆಯಲ್ಲಿ 9 ಯಂತ್ರಗಳಿದ್ದು, ಚಿಕಿತ್ಸೆಗಾಗಿ ವಾರ್ಷಿಕವಾಗಿ ಸುಮಾರು 1.5 ಕೋಟಿ ರು. ವೆಚ್ಚವಾಗಲಿದೆ. ಸುಮಾರು 10,000 ರೋಗಿಗಳಿಗೆ ಇದು ಉಪಯೋಗವಾಗಲಿದೆ ಎಂದು ಹೆಗ್ಗಡೆಯವರು ಈ ಸಂದರ್ಭ ಮಹತ್ವದ ವಿಚಾರವನ್ನು ಪ್ರಕಟಿಸಿದರು.