ಆಧ್ಯಾತ್ಮಿಕ ಭಾವನೆ ಹೆಚ್ಚಿಸಲು ಧರ್ಮ ಜಾಗೃತಿ ಅವಶ್ಯ

KannadaprabhaNewsNetwork | Published : Dec 4, 2024 12:35 AM

ಸಾರಾಂಶ

ಮಂಜುನಾಥ ಸಾಂಸ್ಕೃತಿಕ ಭವನದ ಅಂತಿಮ ಹಂತದ ಕಾಮಗಾರಿಗೆ ಅವಶ್ಯ ಇರುವ ಅನುದಾನವನ್ನು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಅಗತ್ಯದ ಮನವರಿಕೆ ಮಾಡಿ ಸಂಸದರ ನಿಧಿಯಿಂದ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಗದಗ: ಇಂದಿನ ಆಧುನಿಕ ಯುಗದಲ್ಲಿರುವ ಯುವ ಪೀಳಿಗೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆ ಆಸಕ್ತಿ ಹೆಚ್ಚಿಸಲು ಅವರಲ್ಲಿ ಧರ್ಮ ಜಾಗೃತಿಗಾಗಿ ದೀಪೋತ್ಸವ ಧಾರ್ಮಿಕ ಕಾರ್ಯಕ್ರಮ ದಾರಿದೀಪವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಹೇಳಿದರು.

ಅವರು ಬೆಟಗೇರಿಯ ನಗರದ ಟರ್ನಲ್‌ ಪೇಟೆಯಲ್ಲಿ ಮಂಜುನಾಥ ದೇವಸ್ಥಾನ ಟ್ರಸ್ಟ್‌ ಮಂಜುನಾಥ ಸ್ವಾಮಿಯ 41ನೇ ವರುಷದ ಕಾರ್ತಿಕ ಮಾಸದ ದೀಪೋತ್ಸವ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಜುನಾಥ ಸಾಂಸ್ಕೃತಿಕ ಭವನದ ಅಂತಿಮ ಹಂತದ ಕಾಮಗಾರಿಗೆ ಅವಶ್ಯ ಇರುವ ಅನುದಾನವನ್ನು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಅಗತ್ಯದ ಮನವರಿಕೆ ಮಾಡಿ ಸಂಸದರ ನಿಧಿಯಿಂದ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ದೇವಸ್ಥಾನ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ, ನಗರಸಭೆಯ ಮಾಜಿ ಅಧ್ಯಕ್ಷ ಶಿವಪ್ಪ ಮುಳಗುಂದ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕಾಗಿ ಸಹಾಯ ಸಹಕಾರ ನೀಡಿದವರು ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.

ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ವಿನಾಯಕ ಮಾನ್ವಿ, ಚಂದ್ರು ತಡಸದ ಮುಂತಾದವರು ಮಾತನಾಡಿದರು. ನಗರಸಭಾ ಮಾಜಿ ಅಧ್ಯಕ್ಷೆ ನಾಗರತ್ನ ಮುಳಗುಂದ, ಮಾಜಿ ಸದಸ್ಯ ಮಂಜುನಾಥ ಎಚ್. ಮುಳಗುಂದ, ಶ್ರೀನಿವಾಸ ಕರಿ, ಮಂಜುನಾಥ ದೇವಸ್ಥಾನ ಟ್ರಸ್ಟ್‌ ಉಪಾಧ್ಯಕ್ಷ ಫಕೀರಪ್ಪ ಹೆಬಸೂರ, ಸರಸ್ವತಿ ಹಾವನೂರ, ಕಾರ್ಯದರ್ಶಿ ರಮೇಶ ಹುಣಶೀಮರದ, ಚಂದ್ರಶೇಖರ ತರಿಕೇರಿ ವೇದಿಕೆಯಲ್ಲಿದ್ದರು.

ಪದಾಧಿಕಾರಿಗಳಾದ ಅಶೋಕ ಮುಳಗುಂದ, ಲಕ್ಷ್ಮಣ ಮುಳಗುಂದ, ಬಸವರಾಜ ಹುಣಶೀಮರದ, ಬಸವಂತಪ್ಪ ಕರ್ಜಗಿ, ಶಂಕರ ಮುಳಗುಂದ, ಅಣ್ಣಪ್ಪ ಗಾರವಾಡ, ಅಣ್ಣಪ್ಪ ಮುಳಗುಂದ, ಚಿದಾನಂದ ಹೊಸಮನಿ, ಲಕ್ಷ್ಮಣ ದೊಟಡ್ಡಮನಿ, ಮಂಜುನಾಥ ಹಾವನೂರ, ಬಸವರಾಜ ಗಾರವಾಡ, ಮಲ್ಲೇಶಿ ಹುಲಕೋಟಿ, ರವಿ ದೇವಪ್ಪ ಬೇವಿನಮರದ, ಪರಶುರಾಮ ಗಾರವಾಡ, ಹನಮಂತ ಹುಣಶೀಮರದ, ಅಣ್ಣಪ್ಪ ಬಿಸನಳ್ಳಿ, ಜಗದೀಶ ಹೆಬಸೂರ ಅನೇಕ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಮುಳಗುಂದ ನಿರೂಪಿಸಿದರು. ಬೂದಪ್ಪ ಹುಣಶೀಮರದ ಸ್ವಾಗತಿಸಿದರು.

Share this article