ಸರ್ವಧರ್ಮ ಸಾಮರಸ್ಯ ರಾಣಿ ಅಬ್ಬಕ್ಕಳ ರಕ್ತದ ಗುಣವಾಗಿತ್ತು: ಡಾ. ತುಕಾರಾಂ ಪೂಜಾರಿ

KannadaprabhaNewsNetwork |  
Published : Jul 19, 2025, 01:00 AM IST
ಮೊದಲ ಪ್ರಯತ್ನ ದಲ್ಲೇ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ  ಹಂಶಿತಾ ಕಾಪಿಕಾಡ್ ,ಅವರನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಅಬ್ಬಕ್ಕ ವಾಹಿನಿ ಆಶ್ರಯದಲ್ಲಿಉಳ್ಳಾಲ ತಾಲೂಕಿನ ಕೊಲ್ಯದ ಸೌಂದರ್ಯ ಸಭಾಂಗಣದಲ್ಲಿ ‘ಅಬ್ಬಕ್ಕ ಎಟ್ 500’ ಸರಣಿಯ 14ನೇ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟಗಾರ್ತಿ ಮಾತ್ರ ಆಗಿರದೆ ಸರ್ವಧರ್ಮ ಸಾಮರಸ್ಯ ಅವಳ ರಕ್ತದ ಗುಣವಾಗಿತ್ತು. ಪೋರ್ಚುಗೀಸರ ನೌಕಾ ಬಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವಾಗ ನಮ್ಮ ಉಳ್ಳಾಲದ ಹೆಣ್ಣೊಬ್ಬಳು ಏಕಾಂಕಿಯಾಗಿ ಅವರನ್ನು ಎದುರಿಸಿ ವಿಜಯಿಯಾದದ್ದು ಬಹಳ ದೊಡ್ಡ ಸಾಹಸ ಎಂದು ಬಿ.ಸಿರೋಡ್ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ ಡಾ.ತುಕಾರಾಂ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಅಬ್ಬಕ್ಕ ವಾಹಿನಿ ಆಶ್ರಯದಲ್ಲಿ ಕೊಲ್ಯದ ಸೌಂದರ್ಯ ಸಭಾಂಗಣದಲ್ಲಿ ನಡೆದ ‘ಅಬ್ಬಕ್ಕ ಎಟ್500’ ಸರಣಿಯ 14ನೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದಿಕ್ಸೂಚಿ ಉಪನ್ಯಾಸ ನೀಡಿದ ರಾಣಿ ಅಬ್ಬಕ್ಕ ಉತ್ಸವ ಟ್ರಸ್ಟ್ ಅಧ್ಯಕ್ಷ ರಾದ ದಿನಕರ ಉಳ್ಳಾಲ್ ಮಾತನಾಡಿ, ಜೈನ ಮನೆತನದ ಲ್ಲಿ ಹುಟ್ಟಿದರೂ ಹಿಂದೂ, ಮುುಸ್ಲಿಂ, ಕ್ರೈಸ್ತರು ಎಲ್ಲರನ್ನು ಸೇರಿಸಿಕೊಂಡು ರಾಜ್ಯವಾಳಿ ಪೋರ್ಚುಗೀಸರ ಹೆಡೆಮುರಿ ಕಟ್ಟಿದ ರಾಣಿ ಅಬ್ಬಕ್ಕಳನ್ನು ನಮ್ಮ ದೇಶದ ಯಾವ ಇತಿಹಾಸಕಾರರೂ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಉಲ್ಲೇಖಿಸಿದೇ ಇರುವುದು ನೋವಿನ ಸಂಗತಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು. ರಾಣಿ ಅಬ್ಬಕ್ಕನ ಹೆಸರಲ್ಲಿ ತುಳು ಬದುಕಿನ ಸಂಶೋಧನಾ ಕೇಂದ್ರ ಮಾಡಿ ವಿದ್ಯಾರ್ಥಿಗಳಿಗೆ ಅಧ್ಯಯನ ಕ್ಕೆ ಅವಕಾಶ ಕಲ್ಪಿಸಿದ ಡಾ.ತುಕಾರಾಂ ಪೂಜಾರಿ ಹಾಗೂ ಮೊದಲ ಪ್ರಯತ್ನದಲ್ಲೇ ಸಿಎ ಪರೀಕ್ಷೆ ಉತ್ತೀರ್ಣರಾದ ಹಂಶಿತಾ ಕಾಪಿಕಾಡ್‌ ಅವರನ್ನು ಗೌರವಿಸಲಾಯಿತು

ಧರ್ಮಸ್ಥಳ ತುಳುಪೀಠದ ಸಂಚಾಲಕ ಮಾಧವ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು.

ಧಾರ್ಮಿಕ ಮುಂದಾಳು ಭಾಸ್ಕರ ಐತಾಳ್, ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡೆಂಜ ಮೋಹನದಾಸ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ ಸುವರ್ಣ, ರೋಹಿತ್ ಸಾಂಕ್ತುಸ್ , ಸಂತೋಷ್ ಕುಮಾರ್ ರೈ ಬೋಳ್ಯಾರ್, ಕೋಟೆಕಾರ್ ಪ.ಪಂಚಾಯಿತಿ ಅಧ್ಯಕ್ಷ ದಿವ್ಯಾ ಎಸ್ ಶೆಟ್ಟಿ, ಉದ್ಯಮಿ ಸೌಂದರ್ಯ ರಮೇಶ್, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಎನ್ ಕೊಣಾಜೆ , ಸೀತಾರಾಮ ಬಂಗೇರ, ಶಾರದೋತ್ಸವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಎಚ್. ಮತ್ತಿತರರು ಮಾತನಾಡಿದರು.

ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿದರು. ಸುಶ್ಮಿತಾ ಸಾಮಾನಿ , ಶಿಕ್ಷಕಿ ವಿನಯಾ ಎನ್. ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಆಶಾ ಮತ್ತು ಮಮತಾ ಶೆಟ್ಟಿ ನಿರೂಪಿಸಿದರು. ಸುಪ್ರೀತ್ ಭಂಡಾರಿ ಇರಾ ವಂದಿಸಿದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು