ಕನ್ನಡಪ್ರಭ ವಾರ್ತೆ, ಶೃಂಗೇರಿ
ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಶ್ರೀ ಶಾರದಾಂಬಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಆಯೋಜಿಸಿದ್ದ ಶ್ರಮಿಕೋತ್ಸವ ಅಂಗವಾಗಿ ನವಗ್ರಹ ಹೋಮದ ಪೂರ್ಣಾಹುತಿ ನೆರವೇರಿಸಿ ಆಶೀರ್ವಚನ ನೀಡಿದರು. ನಾವು ಜೀವನದಲ್ಲಿ ಧಾರ್ಮಿಕತೆ ಹಾಗೂ ಲೌಕಿಕತೆ ಎರಡನ್ನು ಶ್ರದ್ಧೆಯಿಂದ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಗೀತೆಯಲ್ಲಿ ಭಗವಂತ ನನ್ನ ಸ್ಮರಣೆ ಮಾಡು ನಿನ್ನ ಕೆಲಸ ನೀನು ಮಾಡು ಎಂದು ತಿಳಿಸಿದ್ದಾನೆ.
ನಾವು ಲೌಕಿಕ ಜೀವನದಲ್ಲಿ ಬಹುದೊಡ್ಡ ಕೆಲಸ ಮಾಡಿ ತೊಂದರೆಯಾದಾಗ ದ್ವಂದ್ವ ಸ್ಥಿತಿ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಭಗವಂತನ ಸ್ಮರಣೆ ಮಾಡುತ್ತಿದ್ದರೆ ನಮಗೆ ಯಾವುದಾದರೂ ರೂಪದಲ್ಲಿ ಭಗವಂತನ ಸಹಕಾರ ಸಿಗುತ್ತದೆ.ಲೌಕಿಕ ಜಗತ್ತಿನಲ್ಲಿ ಸಂಸ್ಥೆಗೆ ಒಬ್ಬ ಮುಖ್ಯಸ್ಥ ಇರುತ್ತಾನೆ. ಅವನು ತನ್ನ ಜೊತೆ ಇರುವವರಿಗೆ ಕರ್ತವ್ಯಗಳನ್ನು ಹಂಚುತ್ತಾನೆ. ಅದನ್ನು ನಿಸ್ವಾರ್ಥ ಭಾವನೆಯಿಂದ ಮಾಡಿದಾಗ ಮಾತ್ರ ಸಮಾಜದ ಉನ್ನತಿಯಾಗುತ್ತದೆ. ಯಾವುದೇ ಕೆಲಸವಿರಲಿ ಅದನ್ನು ಶ್ರಧ್ದೆಯಿಂದ ಮಾಡಬೇಕು. ಶ್ರಮ ಪಟ್ಟು ಮಾಡಬೇಕು ಆಗ ಗೌರವ ಸಿಗುತ್ತದೆ. ಹಾಗೆಯೆ ಶ್ರಮಿಕೋತ್ಸವದಲ್ಲಿ ನವಗ್ರಹ ಹೋಮ ನೆರವೇರಿದೆ. ಭಗವಂತ ನೀಡಿದ ಕಾರ್ಯವನ್ನು ನಾವು ಕೂಡ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ನಮ್ಮ ಗುರಿ ತಲುಪಲು ಸಾದ್ಯ ಎಂದರು. ಸಂಘದ ಮುನಿಸ್ವಾಮಿ, ಪಪಂ ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು.
15 ಶ್ರೀ ಚಿತ್ರ 2-ಶೃಂಗೇರಿ ಗೌರೀಶಂಕರ ಸಭಾಂಗಣದಲ್ಲಿ ಶ್ರಮಿಕೋತ್ಸವ ಅಂಗವಾಗಿ ನಡೆದ ನವಗ್ರಹ ಹೋಮದ ಪೂರ್ಣಾಹುತಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ಸಾನಿದ್ಯದಲ್ಲಿ ನೆರವೇರಿತು.