ಸೂಲಿಬೆಲೆ: ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆಗಳು ಸಾಮಾಜಿಕ ಸಾಮರಸ್ಯ ವೃದ್ಧಿಗೆ ಸಹಕಾರಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಹೊಸಕೋಟೆ ಕ್ಷೇತ್ರದಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ಪರಸ್ಪರ ಸೌಹಾರ್ದತೆ ಇದೆ ಎಂದರು. ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಡಾ.ಡಿ.ಟಿ.ವೆಂಕಟೇಶ್, ದೊಡ್ಡಹರಳಗೆರೆ ಗ್ರಾಪಂ ಸದಸ್ಯ ಯಾರಬ್ ಬೇಗ್, ಯುವ ಮುಖಂಡ ನಾರಾಯಣಗೌಡ, ಟಿಎಪಿಸಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಅಲ್ಪಸಂಖ್ಯಾತ ಮುಖಂಡರಾದ ಹೊಸಕೋಟೆ ಇಂತಿಯಾಸ್, ನವಾಜ್, ನಿಸಾರ್, ಅಂಜು, ಅಕ್ಬರ್ ಅಲಿಖಾನ್, ಕಮಿಟಿ ಸದಸ್ಯರಾದ ಸೈಯದ್ ಪೀರ್, ಜಾಬೀರ್, ಛೋಟು, ಹಿದ್ದು, ನಾಸೀರ್, ರೋಮನ್, ನಾಸೀಂ,ಆಸೀಪ್, ನವಾಜ್, ಸಮೀರ್ ಖಾನ್, ಸಮೀರ್ ಬೇಗ್ ಇತರರಿದ್ದರು.
(ಫೋಟೋ ಕ್ಯಾಫ್ಷನ್)ಸೂಲಿಬೆಲೆ ಹೋಬಳಿ ತಮ್ಮರಸನಹಳ್ಳಿತಲ್ಲಿ ಹಮ್ಮಿಕೊಂಡಿದ್ದ ಉರುಸ್ ಮತ್ತು ಖವ್ವಾಲಿ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಬಮೂಲ್ ನಿರ್ದೇಶಕ ಸತೀಶಗೌಡರನ್ನು ಸನ್ಮಾನಿಸಲಾಯಿತು.