ಧಾರ್ಮಿಕವಾಗಿ ಕಡೂರು ಶ್ರೀಮಂತ: ಫಾದರ್ ಮೋಸೆಸ್ ಎಂ.ಜೆ.

KannadaprabhaNewsNetwork |  
Published : Feb 13, 2026, 02:00 AM IST
11ಕೆಕೆಡಿಯು2. | Kannada Prabha

ಸಾರಾಂಶ

ಕಡೂರುತಾಲೂಕು ಬರಗಾಲದ ಪ್ರದೇಶವಾಗಿದ್ದರೂ ಧಾರ್ಮಿಕ ಶ್ರೀಮಂತಿಕೆ ಕಡೂರಲ್ಲಿ ಕಾಣಬಹುದು ಎಂದು ನಿತ್ಯಾಧಾರ ಮಾತೆ ಚರ್ಚಿನ ಫಾದರ್ ಮೋಸೆಸ್ ಎಂ.ಜೆ. ಹೇಳಿದರು.

ತ್ಯಾಧಾರ ಮಾತೆ ಮಂದಿರದ 55ನೇ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕು ಬರಗಾಲದ ಪ್ರದೇಶವಾಗಿದ್ದರೂ ಧಾರ್ಮಿಕ ಶ್ರೀಮಂತಿಕೆ ಕಡೂರಲ್ಲಿ ಕಾಣಬಹುದು ಎಂದು ನಿತ್ಯಾಧಾರ ಮಾತೆ ಚರ್ಚಿನ ಫಾದರ್ ಮೋಸೆಸ್ ಎಂ.ಜೆ. ಹೇಳಿದರು.

ಪಟ್ಟಣದ ನಿತ್ಯಾಧಾರ ಮಾತೆ ಮಂದಿರದ 55ನೇ ವಾರ್ಷಿಕೋತ್ಸವ ಅಂಗವಾಗಿ ಸಂಜೆ ನಡೆದ ತೇರು ಮೆರವಣಿಗೆಯಲ್ಲಿ ದೀಪಗಳನ್ನು ಹಿಡಿದು ಪಟ್ಟಣದ ಮರವಂಜಿ ವೃತ್ತದವರೆಗೆ ತೆರಳಿ ನಿತ್ಯಾಧಾರ ಮಂದಿರಕ್ಕೆ ಬಂದ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದರು. ಐತಿಹಾಸಿಕ ಸ್ಥಳವಾದ ನಿತ್ಯಾಧಾರ ಮಂದಿರ ಅಂದಿನ ಬ್ರಿಟೀಷರ ಕಾಲದ ಜಿಲ್ಲಾ ಕೇಂದ್ರವಾಗಿದ್ದು ಇತ್ತ ಮಲೆನಾಡು ಅಲ್ಲ ಬಯಲು ಸೀಮೆ ಅಲ್ಲದ ಈ ಸ್ಥಳದಲ್ಲಿ ಕ್ರಿಸ್ತರು ಜೀವಿಸುತ್ತಿದ್ದರು. ಯೇಸುಕ್ರಿಸ್ತನ ತಾಯಿಯನ್ನು ಸ್ಮರಿಸುತ್ತಾ ನಿತ್ಯಾಧಾರ ಮಂದಿರ ಧಾರ್ಮಿಕವಾಗಿ ಮುನ್ನಡೆಯುತ್ತಿದೆ. ಆ ತಾಯಿ ಯೇಸುವನ್ನು ಮುನ್ನಡೆಸಿದಂತೆ ಇಲ್ಲಿನ ಸಮಸ್ತ ಜನರನ್ನು ಕಷ್ಟ, ಸಂಕಷ್ಟ ಕಾಯಿಲೆಗಳಿಂದ ತಾಯಿ ಕಾಪಾಡುತ್ತಿದ್ದಾಳೆ. ಕಡೂರಿಗೆ ಉತ್ತಮ ಮಳೆ ಬರಲಿ, ಒಳ್ಳೆಯ ಬೆಳೆ ಬೆಳೆದು ರೈತಾಪಿ ವರ್ಗದ ಕಷ್ಟಗಳು ದೂರವಾಗಲಿ ಎಂದು ನಾವುಗಳು ಪ್ರಾರ್ಥಿಸುತ್ತೇವೆ ಸರ್ವರಿಗೂ ಒಳ್ಳೆಯದಾಗಲಿ ಎಲ್ಲ ವರ್ಗದವರು ಸುಖ, ಶಾಂತಿ ಹಾಗು ನೆಮ್ಮದಿ ಬದುಕು ಸಾಗಿಸಲಿ ಎಂದರು. ಕಡೂರು ನಿತ್ಯಾಧಾರ ಮಾತೆ ಮಂದಿರದ ವಂದನೀಯ ಫಾದರ್ ಮೋಸೆಸ್ ತೇರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ಆರಾಧಕರು ಪಾಲ್ಗೊಂಡಿದ್ದರು. ಗುರುಗಳಾದ ವಿಲಿಯಂ ಸೀಕ್ವೇರಾ,ವಿಲಿಯಂ ಪೆರೆರಾ, ಶಾಂತರಾಜು,ಸಿಸ್ಟರ್ ಪ್ಲೋರಾ,ಮೆಕಿಲ್ಡೊ ಲೋಬೊ ಹಾಗೂ ಪಟ್ಟಣದ ವಿಜಯ್, ವಿನ್ಸೆಂಟ್ ರೋಸ್, ಪ್ಯಾಟ್ರಿಕ್, ಆನಂದ್ ರೋಸ್, ನವೀನ್ ಡಿ ಅಲ್ಮೆಡಾ, ಪ್ರಾನ್ಸಿಸ್ ಫರ್ನಾಂಡಿಸ್, ಹ್ಯಾರಿ ಫರ್ನಾಂಡಿಸ್ ಮತ್ತಿತರರು ಇದ್ದರು. 11ಕೆಕೆಡಿಯು2.. ಕಡೂರು ನಿತ್ಯಾಧಾರ ಮಾತೆ ಮಂದಿರದಲ್ಲಿ 55 ನೇ ವಾರ್ಷಿಕೋತ್ಸವದ ಅಂಗವಾಗಿ ತೇರು ಮೆರವಣಿಗೆ ನಡೆಯಿತು. ವಂದನೀಯ ಫಾದರ್ ಮೋಸೆಸ್, ಸ್ವಿಕ್ವೇರಾ,ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿ ಉನ್ನತ ಸ್ಥಾನ ತಲುಪಿದಾಗ ಗುರುವಿಗೆ ಸಾರ್ಥಕ ಭಾವ: ನಿವೃತ್ತ ಪ್ರಾಂಶುಪಾಲ ಕೆ.ಟಿ. ತಿಮ್ಮಯ್ಯ
ಶ್ರವಣಬೆಳಗೊಳಕ್ಕೆ ವಿದ್ಯುತ್ ಯುಜಿ ಕೇಬಲ್ ಅಳವಡಿಕೆಗೆ ಅನುಮೋದನೆ