ಗಾಯತ್ರಿ ಮಂತ್ರದ ಉಪಾಸನೆಯಿಂದ ಹಲವು ಸಮಸ್ಯೆಗೆ ಪರಿಹಾರ: ಹರಿಪ್ರಕಾಶ ಕೋಣೆಮನೆ

KannadaprabhaNewsNetwork |  
Published : Nov 07, 2024, 11:53 PM IST
ಫೋಟೋ ನ.೬ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ನಮ್ಮ ಪರಂಪರೆ, ಧರ್ಮದ ಆಚರಣೆಯಲ್ಲಿ ಭಾಗಿಯಾಗಿರುವುದು, ಅದರಲ್ಲೂ ಗಾಯತ್ರಿ ಮಂತ್ರದಂತಹ ಮಂತ್ರಗಳನ್ನು ಉಪಾಸನೆ ಮಾಡಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವುದು ವೇದ್ಯ.

ಯಲ್ಲಾಪುರ: ಸನಾತನ ಸಂಸ್ಕೃತಿ, ಪರಂಪರೆ, ಮೌಲ್ಯವನ್ನು ಹೊಂದಿದ ಭಾರತದಲ್ಲಿ ಸಂಸ್ಕೃತಿ ವಿರೋಧಿಸುವ ಶಕ್ತಿಗಳೇ ಬೆಳೆಯುತ್ತಿದೆ. ವಿಪರ್ಯಾಸವೆಂದರೆ ಅಮೆರಿಕದಂತಹ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚ್‌ಗಳು ದೇವಾಲಯಗಳಾಗಿ ರೂಪುಗೊಂಡು ಹಿಂದೂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ನಮ್ಮ ಜನರಿಗೆ ಏನು ಬೇಕು ಎಂಬುದೇ ಅರ್ಥವಾಗುತ್ತಿಲ್ಲ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ನ. ೫ರಂದು ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಸ್ಥಾನ, ಸ್ಪಂದನ ಯುವಕ ಸಂಘ ಮತ್ತು ಆದರ್ಶ ಮಹಿಳಾ ಸಂಘಗಳ ಆಶ್ರಯದಲ್ಲಿ ೧೫ ದಿನಗಳ ಕಾಲ ಹಮ್ಮಿಕೊಂಡ ೧೧ನೇ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಪರಂಪರೆ, ಧರ್ಮದ ಆಚರಣೆಯಲ್ಲಿ ಭಾಗಿಯಾಗಿರುವುದು, ಅದರಲ್ಲೂ ಗಾಯತ್ರಿ ಮಂತ್ರದಂತಹ ಮಂತ್ರಗಳನ್ನು ಉಪಾಸನೆ ಮಾಡಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವುದು ವೇದ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಪ್ರಾಚೀನರು ಚಿಂತನೆ ಮಾಡಿಯೇ ಹಳ್ಳಿ ಹಳ್ಳಿಗಳಲ್ಲಿ ಮಂದಿರ ಸ್ಥಾಪಿಸಿದ್ದರು. ಎಲ್ಲಿ ಆಧ್ಯಾತ್ಮಿಕ ಚಿಂತನೆ, ಅನುಷ್ಠಾನ ನಡೆಯುತ್ತದೋ ಅಲ್ಲಿ ಸುಸಂಸ್ಕೃತ ಬದುಕು ಪ್ರಾಪ್ತವಾಗುತ್ತದೆ ಎಂದರು.ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರ ಪ್ರಸಾದ ಭಟ್ಟ, ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸುಧೀರ್ ಕೊಡ್ಕಣಿ ಮತ್ತು ಗೀತಾ ಅಭಿಯಾನದ ತಾಲೂಕಾಧ್ಯಕ್ಷ ಜಿ.ಎನ್. ಭಟ್ಟ ತಟೀಗದ್ದೆ ಮಾತನಾಡಿದರು. ದೇವಸ್ಥಾನದ ಅರ್ಚಕ ವಿ. ವೆಂಕಟರಮಣ ಭಟ್ಟ ವೇದಘೋಷ ಪಠಿಸಿದರು. ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ಸ್ವಾಗತಿಸಿದರು. ಕಾರ್ತಿಕೋತ್ಸವದ ಸಂಯೋಜಕ ಸುಬ್ರಾಯ ಭಟ್ಟ ನಿರ್ವಹಿಸಿದರೆ, ಡಿ.ವಿ. ಹೆಗಡೆ ವಂದಿಸಿದರು. ನಂತರ ಮಾತೆಯರಿಂದ ಭಗವದ್ಗೀತಾ ಪಠಣ, ಕಣ್ಣಿಗೇರಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.

ಗೋಕರ್ಣಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ

ಗೋಕರ್ಣ: ಇಲ್ಲಿನ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರು ಬುಧವಾರ ದಿಢೀರ್ ಭೇಟಿ ನೀಡಿ ಹಲವು ಕಡತಗಳನ್ನು ಪರಿಶೀಲಿಸಿದರು. ಅಲ್ಲದೇ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆಯಡಿ ಕೈಗೊಂಡ ಕಾಮಗಾರಿಗಳು, ಅದರ ಅನುಷ್ಠಾನ ಮತ್ತಿತರ ಮಾಹಿತಿ ಪಡೆದರು.ಈ ಹಿಂದೆ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿ ಕಸ ವಿಲೇವಾರಿ ಘಟಕ್ಕೆ ಭೇಟಿ ನೀಡಿದಾಗ ಅಲ್ಲಿ ಸೂಚಿಸಿದ ಕೆಲಸಗಳು ಆಗಿದೆಯೇ ಎಂಬುದನ್ನು ತಿಳಿದುಕೊಂಡ ಲೋಕಾಯುಕ್ತರು ಯಾವುದೇ ಲೋಪದೋಷ ಕಂಡುಬಂದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಸಂಗಮ ನಾಲಾಕ್ಕೆ ಭೇಟಿ: ಹೊಲಸು ನೀರು ತುಂಬಿ ತುಳುಕುತ್ತಿರುವ ಸಂಗಮ ನಾಲಾವನ್ನು ಖುದ್ದು ಪರಿಶೀಲಿಸಿದ ಲೋಕಾಯುಕ್ತರು, ತ್ಯಾಜ್ಯ ನೀರು ನೇರವಾಗಿ ಬಿಡುವವರು ಯಾರು ಅವರ ಮೇಲೇ ಏನು ಕ್ರಮ ತೆಗೆದುಕೊಂಡಿದ್ದಿರಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಪ್ರಶ್ನಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಾದ ಸಂಬಂಧಿಸಿದ ಎಲ್ಲ ಇಲಾಖೆ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ನೀಡುತ್ತೇನೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ನಾಯ್ಕ ಮಾತನಾಡಿ, ಕಸ ವಿಲೇವಾರಿ ಘಟಕ ನಿರ್ಮಾಣದಲ್ಲಿ ಹಣಕಾಸಿನ ಅವ್ಯವಹಾರ, ಹಲವಾರು ಯೋಜನೆಯ ಕೆಲಸ ಸಮರ್ಪಕವಾಗಿ ಆಗದಿರುವ ಕುರಿತು ಲೋಕಾಯುಕ್ತ ಎಸ್ಪಿಗೆ ವಿವರಿಸಿದರು.ಇನ್ಸಪೆಕ್ಟರ್ ವಿನಾಯಕ ಬಿಲ್ಲವ, ಪ್ರಸಾದ ಪೆನ್ನೇಕರ, ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರಾದ ಗಣಪತಿ ನಾಯ್ಕ, ಸತೀಶ ದೇಶಭಂಡಾರಿ, ನಾಗೇಶ ಸೂರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ