ವೀರಯೋಧರನ್ನು ಪ್ರತಿನಿತ್ಯ ಸ್ಮರಿಸಿ

KannadaprabhaNewsNetwork |  
Published : Jul 27, 2025, 12:01 AM IST
ಫೋಟೊ ಶೀರ್ಷಿಕೆ: 26ಹೆಚ್‌ವಿಆರ್9ಹಾವೇರಿ: ನಗರದ ಹೊರವಲಯದಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಎನ್‌ಸಿಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ ಕಾರ್ಯಕ್ರಮ ಆಚರಿಸಲಾಯಿತು. | Kannada Prabha

ಸಾರಾಂಶ

ದೇಶದ ಸೈನಿಕರನ್ನು ನೀವು -ನಾವೆಲ್ಲರೂ ಗೌರವದಿಂದ ಕಾಣಬೇಕು. ಸೈನಿಕ ಒಂದು ಕ್ಷಣ ಮೈಮರೆತರೇ ದೇಶವೇ ಅಲ್ಲೋಲ ಕಲ್ಲೋಲವಾಗುತ್ತದೆ

ಹಾವೇರಿ: ಕಾರ್ಗಿಲ್ ಯುದ್ಧದಲ್ಲಿ ಬಲಿದಾನ ಹೊಂದಿದ ವೀರಯೋಧರನ್ನು ನಾವು ಪ್ರತಿನಿತ್ಯ ಸ್ಮರಿಸಬೇಕು ಎಂದು ಹುಬ್ಬಳ್ಳಿಯ ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ವಿನ್ಸೆಂಟ್ ಜೋಹರ್ ಹೇಳಿದರು.

ಸಮೀಪದ ಕೆರಿಮತ್ತಿಹಳ್ಳಿಯಲ್ಲಿ ಹಾವೇರಿ ವಿವಿಯ ಆವರಣದಲ್ಲಿ ಜರುಗಿದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸೈನಿಕರನ್ನು ನೀವು -ನಾವೆಲ್ಲರೂ ಗೌರವದಿಂದ ಕಾಣಬೇಕು. ಸೈನಿಕ ಒಂದು ಕ್ಷಣ ಮೈಮರೆತರೇ ದೇಶವೇ ಅಲ್ಲೋಲ ಕಲ್ಲೋಲವಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸೈನಿಕರು ಹಾಗೂ ಅವರ ಸಮವಸ್ತ್ರ ಎಲ್ಲಿ ಕಂಡರೂ ಗೌರವ ನೀಡಿ ಎಂದರು.

ಎನ್‌ಸಿಸಿ ವಿದ್ಯಾರ್ಥಿಗಳು ದೇಶ ಸೇವೆ ಮಾಡಲು ಯಾವುದೇ ಸಂದರ್ಭದಲ್ಲಿ ಸಿದ್ಧರಾಗಿರಬೇಕು ಹಾಗು ನಿಮ್ಮ ಸಮವಸ್ತ್ರಗಳನ್ನು ಮೊದಲು ಗೌರವದಿಂದ ಕಾಣಿ ಎಂದು ಕರೆ ನೀಡಿದರು.

ವಿವಿಯ ಕುಲಪತಿ ಪ್ರೊ.ಸುರೇಶ ಜಂಗಮನಶೆಟ್ಟಿ ಮಾತನಾಡಿ, ರೈತ ಹಾಗೂ ಸೈನಿಕರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಪ್ರತಿನಿತ್ಯ ಇವರಿಬ್ಬರಿಗೂ ನಾವೆಲ್ಲರು ಗೌರವ ಸಲ್ಲಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ 5 ಅಂಶಗಳಾದ ಶ್ರದ್ಧೆ, ಶ್ರಮ,ನಿರ್ಧಾರ, ಗುರಿ, ಪರಿಶ್ರಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ ಎಂದರು.

ಕಾರ್ಯಕ್ರರ್ಮದಲ್ಲಿ ಉಪ ಕುಲಸಚಿವ ಡಾ. ಮನೋಹರ ಕೋಳಿ, ಕಾರ್ಯಕ್ರಮ ಸಂಯೋಜಕ ಡಾ. ರವೀಂದ್ರಕುಮಾರ ಬಣಕಾರ, ಎನ್‌ಸಿಸಿ ಅಧಿಕಾರಿ ಉಪನ್ಯಾಸಕ ನಾಗರಾಜ ಹಾಗೂ ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾವ್ಯಾ ಹಾಗೂ ಸಂಘಟಿಗರು ಪ್ರಾರ್ಥಿಸಿದರು. ಉಪನ್ಯಾಸಕ ರವಿ ಸಣಕಂಬಿ ಪ್ರಾಸ್ತಾವಿಕ ಮಾತನಾಡಿದರು, ಧನಲಕ್ಷ್ಮೀ ಸ್ವಾಗತಿಸಿದರು, ಅರ್ಫಾ ತರನ್ನುಮ್ ಬಿಹಾರಿ ನಿರೂಪಿಸಿದರು, ಹಜ್ಜುಮಾ ನದಾಫ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''