ಯಲಬುರ್ಗಾ: ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಭಾಷಾವಾರು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹಾತ್ಮರ ಕೊಡುಗೆ ಅಪಾರವಿದೆ. ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸುವ ಪ್ರತಿಜ್ಞೆ ಮಾಡಬೇಕು. ರಾಜ್ಯದಲ್ಲಿ ವಾಸಿಸುವ ಜನರು ಯಾವುದೇ ಜಾತಿ,ಮತ, ಧರ್ಮ ಲೆಕ್ಕಿಸದೆ ಎಲ್ಲರೂ ಕನ್ನಡಿಗರೆಂಬ ಭಾವನೆ ಬರಬೇಕು ಎಂದರು.
ಶಿಕ್ಷಕ ಬಸವರಾಜ ಕೊಂಡಗುರಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಕುಂಭ, ಕಳಸ ಹಾಗೂ ವಾದ್ಯಗಳೊಂದಿಗೆ ಕನ್ನಡಾಂಭೆಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ತಾಪಂ ಇಒ ನೀಲಗಂಗಾ ಬಬಲಾದ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ಬಿಇಒ ಅಶೋಕ ಗೌಡರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗಪ್ಪ ಶಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ, ಕಸಾಪ ತಾಲೂಕಾಧ್ಯಕ್ಷ ಬಾಲದಂಡಪ್ಪ ತಳವಾರ್, ಕರವೇ ಹೋರಾಟಗಾರ ರಾಜಶೇಖರ ಶಾಗೋಟಿ, ಬಸವರಾಜ ಹಳ್ಳಿ, ಶಿವಕುಮಾರ ನಾಗನಗೌಡ್ರ, ಸ.ಶರಣಪ್ಪ ಪಾಟೀಲ್, ಸಂತೋಷ ತೋಟದ, ರೇವಣಪ್ಪ ಹಿರೇಕುರುಬರ, ವೀರಣ್ಣ ಹುಬ್ಬಳ್ಳಿ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.