ಕನ್ನಡಪ್ರಭ ವಾರ್ತೆ ಕೋಲಾರನ್ಯಾಯಾಂಗ ಮತ್ತು ಕಾರ್ಯಾಂಗದ ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳು, ನ್ಯಾಯಾಂಗ ಇಲಾಖೆಯ ಆದೇಶಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪೊಲೀಸ್ ಇಲಾಖೆಯು ಪ್ರಮುಖ ಪಾತ್ರವಹಿಸುತ್ತದೆ ಎಂದು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೆ.ದಿವ್ಯ ಅಭಿಪ್ರಾಯಪಟ್ಟರು.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ರಕ್ಷೆ ಸಲ್ಲಿಸಿದ ನಂತರ ಮಾತನಾಡಿ, ಪೊಲೀಸರು ಸಮಾಜದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರ ರಕ್ಷಣೆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಹುತ್ಮಾತರಾಗಿರುತ್ತಾರೆ. ಅವರಿಗೆ ಗೌರವ ಸಲ್ಲಿಸ ಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ರು ಜವಾಬ್ದಾರಿ ಹಾಗೂ ಕರ್ತವ್ಯ ಎಂದು ತಿಳಿಸಿದರು. ಸಾರ್ವಜನಿಕರ ರಕ್ಷಕರು
ಸಮಾಜದಲ್ಲಿ ಕಾನೂನು ಪಾಲನೆ, ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರಿಗೆ ನೆಮ್ಮದಿ ಹಾಗೂ ರಕ್ಷಣೆ ನೀಡುವಂತ ಪೊಲೀಸರಿಗೆ ಪ್ರತಿಯೊಬ್ಬರು ಗೌರವ, ಪ್ರೀತಿ ಹಾಗೂ ವಿಶ್ವಾಸವನ್ನು ತೋರುವಂತಾಗಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಕಳೆದ ೬೫ ವರ್ಷದಿಂದ ಪ್ರತಿ ವರ್ಷ ಅ.೨೧ರಂದು ಪೊಲೀಸ್ ಹುತಾತ್ಮರ ದಿನಚರಣೆ ಆಚರಿಸಲಾಗುವುದು. ಲಡಾಕ್‌ನ ಗಡಿ ಭಾಗದಲ್ಲಿ ಕೇವಲ ೧೦ ಮಂದಿ ಪೊಲೀಸರು ಗಡಿ ಕಾಯುತ್ತಿದ್ದಾಗ ಚೀನಾದ ಸೈನಿಕರು ಹಠಾತ್ತನೆ ದಾಳಿ ನಡೆಸಿದಾಗ ಹಿಂಜರಿಯದೆ ತಮ್ಮ ಪ್ರಾಣವನ್ನು ದೇಶದ ರಕ್ಷಣೆಗಾಗಿ ಕೊನೆಯವರೆಗೆ ನಿಷ್ಠೆಯಿಂದ ಹೋರಾಡಿದ ಪೊಲೀಸರು ವೀರಸ್ವರ್ಗ ಸೇರಿದರು. ಅಂದಿನಿಂದ ಇವರ ಗೌರವಾರ್ಥವಾಗಿ ಪೊಲೀಸ್ ಹುತಾತ್ಮರ ದಿನಚಾರಣೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.ಹುತಾತ್ಮ ಪೊಲೀಸರ ಸ್ಮರಣೆ
ಪ್ರತಿವರ್ಷ ಕರ್ತವನ್ಯದಲ್ಲಿದ್ದಾಗ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹುತಾತ್ಮರಾಗುತ್ತಾರೆ. ಕಳೆದ ಸಾಲಿನ ೨೦೨೪-೨೫ನೇ ಸಾಲಿನಲ್ಲಿ ರಾಷ್ಟ್ರದಲ್ಲಿ ೧೯೧ ಮಂದಿ ಪೊಲೀಸ್ ಇಲಾಖೆ ಅಧಿಕಾರಿಗಳು ಸಾವನ್ನಾಪ್ಪಿದರು. ಕರ್ನಾಟಕದಲ್ಲಿ ೮ ಮಂದಿ ಸಾವನ್ನಾಪ್ಪಿದ್ದಾರೆ. ರಾಜ್ಯದ ೧೯೧ ಮಂದಿಯ ಹೆಸರನ್ನು ವಾಚಿಸಿ ಎಲ್ಲರ ಆತ್ಮಕ್ಕೆ ಶಾಂತಿ, ನೆಮ್ಮದಿ ಸಿಗಲಿ ಎಂದರು. ಪ್ರತಿಯೊಬ್ಬ ಪೊಲೀಸ್‌ರಿಗೂ ಅವರದೇ ಆದ ಕುಟುಂಬದವರು ಗೆಳೆಯರು. ಬಂದುಗಳು ಇರುತ್ತಾರೆ ಅದರೆ ಎಲ್ಲರನ್ನು ತೊರೆದು ದಿನದ ೨೪ ಗಂಟೆಗಳು ದೇಶ, ಸಮಾಜವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿರುವುದು. ಇಂತಹವರಿಗೆ ಪ್ರತಿಯೊಬ್ಬರು ಗೌರವ, ಪ್ರೀತಿ, ವಿಶ್ವಾಸ ತೋರುವಂತಾಗಬೇಕೆಂದು ತಿಳಿಸಿದರು. ಹುತಾತ್ಮರಿಗೆ ಶ್ರದ್ಧಾಂಜಲಿಮೃತರಾದ ಕುಟುಂಬದ ಸದಸ್ಯರಿಗೆ ದೇವರು ಧೈರ್ಯ, ದುಖಃವನ್ನು ಭರಿಸುವ ಶಕ್ತಿ ನೀಡಲೆಂದು ಕೋರಿದರು. ಇದೇ ಸಂದರ್ಭದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಹುತಾತ್ಮರಿಗೆ ಗೌರವ ರಕ್ಷೆ. ಆತಿಥಿಗಳಿಂದ ಶ್ರದ್ದಾಂಜಲಿ ಅರ್ಪಣೆಗೆ ಎರಡು ನಿಮಿಷಗಳ ಕಾಲ ಮೌನಚಾರಣೆ. ಶ್ರದ್ದಾಂಜಲಿ ಕವಾಯಿತು. ಅರ್ಧಕ್ಕೆ ಹಾರಿಸಿದ್ದ ಬಾವುಟವನ್ನು ಪೂರ್ಣವಾಗಿ ಹಾರಿಸಲಾಯಿತು. ಪೊಲೀಸರ ವಾದ್ಯ ವೃಂದ ತಂಡದಿಂದ ರಾಷ್ಟ್ರಗೀತೆ ಹಾಡಿದರು.
ಹೆಚ್ಚುವರಿ ಅಧೀಕ್ಷಕ ಸಿ.ಆರ್. ರವಿಶಂಕರ್, ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಜಗದೀಶ್, ಡಿಎಸ್ಪಿ ಮೊಹಮದ್ ನಾಗ್ತೆ ಇದ್ದರು.