ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ
ಕನ್ನಡಪ್ರಭ ವಾರ್ತೆ ಚಾಮರಾಜನಗರಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ್, ಗಿರೀಶ್ ಕಾರ್ನಾಡ್, ಯು.ಆರ್.ಆನಂತಮೂರ್ತಿ, ಚಂದ್ರಶೇಖರ ಕಂಬಾರ ಅವರು ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ದಿಗ್ಗಜರಾಗಿದ್ದು, ಕನ್ನಡ ಭಾಷೆಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಡಾ.ಬಿ.ಆರ್.ಕೃಷ್ಣಮೂರ್ತಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 15ನೇ ದಿನದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ದಿಗ್ಗಜರ ಕುರಿತು ಮಾತನಾಡಿದರು.ಕುವೆಂಪು ಕನ್ನಡದಲ್ಲಿ ಕವನ, ಕಥೆ, ನಾಟಕ, ಕಾದಂಬರಿ, ಈ ಎಲ್ಲದರಲ್ಲಿ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅವರ ಶ್ರೀರಾಮಾಯಣ ದರ್ಶನಂ ಪ್ರಶಸ್ತಿಗೆ 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 1967ರಲ್ಲಿ ಭಾರತೀಯ ಜ್ಞಾನಪೀಠ, ದ.ರಾ. ಬೇಂದ್ರೆ ನಾಕುತಂತಿ ಕವನ ಸಂಕಲನಕ್ಕೆ 1973ರಲ್ಲಿ ಭಾರತೀಯ ಜ್ಞಾನಪೀಠ, ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು ಕಾದಂಬರಿಗೆ 1977ರಲ್ಲಿ ಜ್ಞಾನಪೀಠ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರು. ವಿ.ಕೃ.ಗೋಕಾಕ್ ಅವರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ದೀರ್ಘಕಾಲ ಸಲ್ಲಿಸಿದ ಸೇವೆಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ, ಯು.ಆರ್.ಆನಂತಮೂರ್ತಿ ಸಾಹಿತ್ಯಕ್ಕೆ ಜ್ಞಾನಪೀಠ, 2010ರಲ್ಲಿ ಚಂದ್ರಶೇಖರ ಕಂಬಾರ ಅವರಿಗೂ ಜ್ಞಾನಪೀಠ ಪ್ರಶಸ್ತಿ ದೊರೆತಿದೆ ಎಂದರು. ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕುವೆಂಪು ಅವರು ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು. ಜ್ಞಾನಪೀಠ ಪ್ರಶಸ್ತಿ ವಿಜೇತರ ಮಾಹಿತಿಯನ್ನು ಪರಿಚಯ ಮಾಡುವ ಸಲುವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದೆ ದಿಗ್ಗಜರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿಯು ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪತಿಷ್ಠಿತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಭಾರತದ ಭೌತಿಕ ಶಕ್ತಿ, ಪರಂಪರೆಯನ್ನ ಜಗತ್ತಿಗೆ ಅನಾವರಣ ಮಾಡುತ್ತದೆ ಎಂದರು.ಶಿವಲಿಂಗಮೂರ್ತಿ,ಚಾ.ವೆಂ.ರಾಜ್ ಗೋಪಾಲ್, ಶಾ.ಮುರಳಿ, ಪಣ್ಯದಹುಂಡಿ ರಾಜು, ತಮಿಳು ಸಂಘದ ಜಗದೀಶ್, ಮೂರ್ತಿ, ಮಂಜುನಾಥ್, ರಾಚಪ್ಪ, ಗುಂಬಳ್ಳಿ ನಾಗರಾಜು, ತಾಂಡವಮೂರ್ತಿ ಇದ್ದರು.