ಕನ್ನಡಪ್ರಭ ವಾರ್ತೆ ಮೈಸೂರುಖ್ಯಾತ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಅವರು ''''''''ರಾಣಿ ರತ್ನಮಂಜರಿ'''''''' ಎಂಬ ಮತ್ತೊಂದು ಜನಪದ ಕಥೆಗಳ ಸಂಕಲನವನ್ನು ಪ್ರಕಟಿಸಿದ್ದಾರೆ.ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ.ಪಿಕೆಆರ್ ಕ್ಷೇತ್ರ ಕಾರ್ಯಕ್ಕೆ ಪ್ರಸಿದ್ಧರು. ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಈವರೆಗೆ ಸಂಗ್ರಹಿಸಿರುವ ಜನಪದ ಕಥೆಗಳು ಈ ಸಂಕಲನದಲ್ಲಿವೆ. ಕಂಪಲಾಪುರ ಗೋಪಾಲ, ಕಮಲಮ್ಮ ಗುರಮೂರ್ತಾಚಾರ್, ಗದ್ದಿಗೆ ಎನ್. ಕುಂಟೇಗೌಡ, ಪಿ.ಕೆ. ಗಾಯತ್ರಿ ಕಾಳೇಗೌಡ, ಕೆ.ಆರ್. ಚರಣರಾಜ್, ಹಂಡಿತವಳ್ಳಿ ದಾಸಪ್ಪಶೆಟ್ಟಿ, ಬಸಲಾಪುರದ ಪುಟ್ಟಸ್ವಾಮಿಗೌಡ, ಆರ್. ಮಹದೇವ ಚಿಕ್ಕಮಳಲಿ, ಪಿ.ಎಸ್. ರಘು ಪೂನಾಡಹಳ್ಳಿ, ಹೊಸೂರು ಕಲ್ಲಹಳ್ಳಿಯ ರಮೇಶ್, ಎಚ್.ಕೆ. ರವಿಕುಮಾರ್, ಚಿಕ್ಕೇಗೌಡನ ಕೊಪ್ಪಲು ಈ. ರವಿಕುಮಾರ, ಕೆ.ವಿ. ವಿಶ್ವನಾಥ, ಪಿ.ಕೆ. ವಾಸುದೇವ, ದಡದಕಲ್ಲಹಳ್ಳಿಯ ಕೆ. ಶಂಭುಲಿಂಗಶೆಟ್ಟಿ, ಕೆ.ಬಿ. ಸಣ್ಣೇಗೌಡ, ಬೆಟ್ಟದಬೀಡು ಸಿದ್ದಶೆಟ್ಟರು ಅವರು ಹೇಳಿದ, ಒಂದಿಬ್ಬರು ನಿಂಗಮ್ಮ ಅವರಿಂದ ಕೇಳಿದ್ದ ಕಥೆಗಳು ಇಲ್ಲಿವೆ. ರಾಣಿ ರತ್ನಮಂಜರಿ, ಧರ್ಮಕರ್ಮ, ಪಂಚಕಲ್ಯಾಣಿ ಹೂವಿನ ಗಿಡ, ಕೈಹಿಡಿದವನು, ಬ್ರಹ್ಮಗಂಟು, ಸಾವಿರದ ಬುದ್ಧಿ, ಕತೆ ಹೋಗಿ ಯತೆ ಆಯ್ತು, ಮಗು ಯಾರ್ದು?, ಬಡಗಿ ಚನ್ನರಾಮ- ನೇಕಾರ ಸುಂದರಕೃಷ್ಣ, ಎಲ್ಲವೂ ಅವರವರ ಅದೃಷ್ಟ, ಸಬ್- ದಬ್- ಬ್ಯಾ, ಸುತ್ತಿ ಸುತ್ತಿ ಬರುತೀಯೆ,. ಗೋರಕನಾಥ- ಮಚ್ಚೇಂದ್ರನಾಥ, ಬಸವೇಶ್ವರ- ಸಿದ್ದೇಶ್ವರ, ಗುರುವಿನ ವಿವೇಕ, ದೊಡ್ಡವರ ದರ್ಶನ, ಮಡ್ಡಿ- ಮೂರ್ಖ- ಮುಠ್ಥಾಳ ಮುಸಂಡಿಗಳೆಂಬ ಶಿಷ್ಯರು, ಪೆದ್ದುಂಡೆ, ನೊಣಜಾರು ಬೆಟ್ಟದ ಹೂವು, ಬಿಲ್ವಿದ್ಯೆ ಜಾಣರು, ದೊಡ್ಡವರ ಮಾತಿಗೆ ದುಡ್ಡು ಯಾವ ಲೆಕ್ಕ, ಮಾತಿಗೆ ಬೆಲೆ ಮನಷ್ಯನಿಗೆ ತಲೆ ಮನೆಗೆ ಒಲೆ ಸೇರಿದಂತೆ 24 ಕಥೆಗಳಿವೆ.ಮೂಲಕಥೆಗಾರನಿಂದಲೇ ನೇರವಾಗಿ ಕಥೆ ಕೇಳುತ್ತಿರುವಂತೆ ಕಥೆಗಳನ್ನು ಡಾ.ಪಿಕೆಆರ್ ಕಟ್ಟಿಕೊಟ್ಟಿದ್ದಾರೆ. ಕಥೆಗಳು ಅದ್ಭುತ, ರಮ್ಯ, ವೀರ, ಸಾಹಸ, ಮಾಂತ್ರಿಕ ಸನ್ನಿವೇಶ- ಪರಿಸರಗಳಿಂದ ಕೂಡಿವೆ. ಮನೋರಂಜನೆ ಜೊತೆಗೆ ಮನೋವೈಜ್ಞಾನಿಕ ವಿಶ್ಲೇಷಣೆಗೂ ಕೂಡ ಅವಕಾಶ ಉಂಟು. ಈ ಹಿಂದೆ ಡಾ.ಪಿಕೆಆರ್ ಅವರು ಪ್ರಕಟಿಸಿರುವ ''''''''''''''''ಮಾತಿನರಗಿಣಿ'''''''''''''''', ''''''''''''''''ಪುರುಷನ ಪುಣ್ಯ ನಾರೀ ಭಾಗ್ಯ'''''''''''''''' ಜನಪದ ಕಥಾ ಸಂಕಲನದಲ್ಲಿರುವ ಕಥೆಗಳಂತೆ ಈ ಸಂಕಲನದ ಕಥೆಗಳು ಕೂಡ ಸ್ವಾರಸ್ಯಕರವಾಗಿ ಮೂಡಿ ಬಂದಿವೆ.ಹೊನ್ನಾರು ಜನಪದ ಗಾಯಕರು ಪ್ರಕಟಿಸಿದ್ದು, ಜಾನಪದ ಗಾಯಕ, ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮುನ್ನುಡಿ ಬರೆದಿದ್ದಾರೆ. ಆಸಕ್ತರು ಡಾ.ಪಿ.ಕೆ. ರಾಜಶೇಖರ್, ಮೊ. 94489 38563 ಸಂಪರ್ಕಿಸಬಹುದು.