ಹೆಸರಾಂತ ವೈದ್ಯ ಡಾ. ವೆಂಕಟಗಿರಿಯಪ್ಪ ನಿಧನ

KannadaprabhaNewsNetwork |  
Published : Dec 30, 2024, 01:01 AM IST
ಪೋಟೋ: 29ಎಸ್‌ಎಂಜಿಕೆಪಿ 2: ಡಾ. ವೆಂಕಟಗಿರಿಯಪ್ಪ | Kannada Prabha

ಸಾರಾಂಶ

Renowned physician Dr. Venkatagiriyappa passes away

ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ದ ವೈದ್ಯ ಡಾ. ಎಸ್.ಕೆ. ವೆಂಕಟಗಿರಿಯಪ್ಪ (89) ಶನಿವಾರ ರಾತ್ರಿ ಹೃದಯಾಘಾತದಿಂದ ಶಿರಸಿಯ ತಮ್ಮ ಪುತ್ರಿ ಡಾ. ಸುಮನಾ ಅವರ ನಿವಾಸದಲ್ಲಿ ನಿಧನರಾದರು. ಮೃತರಿಗೆ ಪುತ್ರಿ ಡಾ. ಸುಮನಾ, ಸೊಸೆ ಡಾ. ಹೇಮಾ ಮೋಹನ್ ಇದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಿತು. ವೆಂಕಟಗಿರಿಯಪ್ಪನವರ ಪಾರ್ಥಿವ ಶರೀರವನ್ನು ಶಿರಸಿಯಿಂದ ಶಿವಮೊಗ್ಗಕ್ಕೆ ತಂದು ವೆಂಕಟೇಶನಗರದಲ್ಲಿರುವ ಅವರ ನಿವಾಸದಲ್ಲಿ ಕೆಲಹೊತ್ತು ಇರಿಸಲಾಗಿತ್ತು. ಈ ವೇಳೆ ವೈದ್ಯರು, ಅವರ ಆಪ್ತ ಮಿತ್ರರು, ಬಂಧು ಬಳಗದವರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ವೆಂಕಟಗಿರಿಯಪ್ಪ ಅವರ ನಿಧನಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಡಾ. ಶ್ರೀಕಾಂತ್ ಹೆಗಡೆ, ಡಾ. ಧನ್ಯಕುಮಾರ್, ಡಾ. ನಾರಾಯಣ ಪಂಜಿ, ಡಾ. ಶ್ರೀಧರ್ ಸೇರಿದಂತೆ ವೈದ್ಯವೃಂದದವರು, ಆಡಿಟರ್ ಎನ್. ರಾಮಚಂದ್ರ, ಚೈತನ್ಯ, ನ್ಯಾಯವಾದಿ ಶ್ರೀಪಾದ, ಹುಲಿಮನೆ ತಿಮ್ಮಪ್ಪ, ಮೂಗಿನಮನೆ ಶ್ರೀಕಾಂತ್ ಹೆಗಡೆ, ಮೂಡುಗೋಡು ಶಿವರಾಮ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

----------------------ಪೋಟೋ: 29ಎಸ್‌ಎಂಜಿಕೆಪಿ 2: ಡಾ. ವೆಂಕಟಗಿರಿಯಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು